– ಟಿಪ್ಪು ಆಡಳಿತದ ದುಷ್ಪರಿಣಾಮ ಮೈಸೂರು ಭಾಗದಲ್ಲಿಯೂ ಕಾಣ್ತಿದೆ ಎಂದ ಸಚಿವ
ನವದೆಹಲಿ: ಭಾರತೀಯ ಇತಿಹಾಸದಲ್ಲಿ ಟಿಪ್ಪು ಸುಲ್ತಾನ್ (Tipu Sultan) ಅತ್ಯಂತ ಸಂಕೀರ್ಣ ವ್ಯಕ್ತಿ. ದೇಶದಲ್ಲಿ ಬ್ರಿಟಿಷರ ಆಡಳಿತವನ್ನು ವಿರೋಧಿಸಿದ ಕೀರ್ತಿ ಅವರದ್ದು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ಬಣ್ಣಿಸಿದ್ದಾರೆ.
ಇತಿಹಾರಕಾರ ವಿಕ್ರಂ ಸಂಪತ್ ರಚಿತ ʻTipu Sultan: The Saga of the Mysore Interregnumʼ (ಟಿಪ್ಪು ಸುಲ್ತಾನ್: ‘ದಿ ಸಗಾ ಆಫ್ ದಿ ಮೈಸೂರು ಇಂಟರ್‌ರೆಗ್ನಮ್) ಪುಸ್ತಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಇದೇ ವೇಳೆ ಟಿಪ್ಪು ಸುಲ್ತಾನ್ ವಿವಾದಾತ್ಮಕ ಅಂಶಗಳ ಮೇಲೂ ಬೆಳಕು ಚೆಲ್ಲುವ ಕೆಲಸ ಮಾಡಿದರು. ಇದನ್ನೂ ಓದಿ: QR ಕೋಡ್ ಇಲ್ಲದ ಪಾನ್ ಕಾರ್ಡ್ ಮಾನ್ಯವೇ? ಪಾನ್ 2.0 ಯೋಜನೆ ಏನು? ಹೊಸ ಪಾನ್ ಪಡೆಯುವುದು ಹೇಗೆ?
Advertisement
Advertisement
ಭಾರತದಲ್ಲಿ ಬ್ರಿಟಿಷರ ಆಡಳಿತ ವಿರೋಧಿಸಿದ ಕೀರ್ತಿ ಟಿಪ್ಪು ಸುಲ್ತಾನ್ ಅವರದ್ದು. ಆದ್ರೆ ಭಾರತದ ಭವಿಷ್ಯಕ್ಕೆ ಬಂದಾಗ ಅವರ ಸೋಲು ಮತ್ತು ಸಾವು ಒಂದು ಮಹತ್ವದ ತಿರುವು ಎಂದು ಪರಿಗಣಿಸಬಹುದು. ಟಿಪ್ಪು ಸುಲ್ತಾನ್ ಆಡಳಿತದ ದುಷ್ಪರಿಣಾಮ ಮೈಸೂರು ಭಾಗದಲ್ಲಿಯೂ ಕಾಣುತ್ತಿದೆ ಎಂದರು. ಇದನ್ನೂ ಓದಿ: ನ್ಯೂಇಯರ್‌ಗೆ ಪೊಲೀಸರು ಅಲರ್ಟ್; ರೆಸಾರ್ಟ್, ಏರ್ಪೋರ್ಟ್, ರೈಲ್ವೆ ನಿಲ್ದಾಣಗಳ ಮೇಲೆ ಹದ್ದಿನ ಕಣ್ಣು
Advertisement
ಇಂದಿಗೂ ಮೈಸೂರಿನ ಹಲವು ಪ್ರದೇಶಗಳಲ್ಲಿ ಅವರ ಬಗ್ಗೆ ಉತ್ತಮ ಗ್ರಹಿಕೆ ಅಥವಾ ಭಾವನೆ ಇಲ್ಲ. ಭಾರತೀಯ ಇತಿಹಾಸದಲ್ಲಿ ಬ್ರಿಟಿಷರೊಂದಿಗಿನ ಅವರ ಹೋರಾಟಕ್ಕೆ ಹೆಚ್ಚಿನ ಗಮನ ನೀಡಲಾಯಿತು. ಹಾಗಾಗಿ ಅವರ ಆಳ್ವಿಕೆಯ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: Bengaluru| ಸಿಲಿಂಡರ್ ಸ್ಫೋಟಗೊಂಡು 3 ಮನೆಗಳಿಗೆ ಬೆಂಕಿ – ಒಂದೇ ಕುಟುಂಬದ ನಾಲ್ವರಿಗೆ ಗಾಯ
Advertisement
ಇಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ಭಾರತವು ಪರ್ಯಾಯ ದೃಷ್ಟಿಕೋನಗಳನ್ನ ಹೊಂದಿದೆ. ಕಳೆದ 10 ವರ್ಷಗಳಲ್ಲಿ ನಮ್ಮ ರಾಜಕೀಯ ವ್ಯವಸ್ಥೆಯು ಬದಲಾವಣೆಯ ದೃಷ್ಟಿಕೋನಗಳಿಗೆ ಸಾಕ್ಷಿಯಾಗಿದೆ. ನಾವು ಇನ್ಮುಂದೆ ಮತಬ್ಯಾಂಕ್‌ನ ಕೈದಿಗಳಲ್ಲ ಮತ್ತು ಅನಾನುಕೂಲ ಸತ್ಯಗಳನ್ನು ಬಹಿರಂಗಪಡಿಸುವುದು ರಾಜಕೀಯವಾಗಿ ಸರಿಯಲ್ಲ ಎಂದು ಹೇಳಿದ್ದಾರೆ.