ಬೆಂಗಳೂರು: ಸಾಮಾನ್ಯವಾಗಿ ಭಾರತ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ (India Pakistan Match) ಅಂದ್ರೆ ಜನ್ರಿಗೆ ಹಬ್ಬದ ವಾತಾವರಣ. ಬದ್ದ ವೈರಿಗಳ ಕಾದಾಟಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್ ಓಪನ್ ಆದ ಕೆಲವೇ ಗಂಟೆಯಲ್ಲಿ ಸೋಲ್ಡ್‌ಔಟ್ ಆಗ್ತಿತ್ತು. ಆದ್ರೆ ಈ ಬಾರಿ ಇಂಡಿಯಾ-ಪಾಕ್ ಮ್ಯಾಚ್ ಟಿಕೆಟ್ ಅನ್ ಸೋಲ್ಡ್ ಆಗಿದೆ ಎನ್ನಲಾಗುತ್ತಿದೆ.
ಕ್ರಿಕೆಟ್ ಅಭಿಮಾನಿಗಳಂತೂ ಇಂಡೋ-ಪಾಕ್ ಮ್ಯಾಚ್‌ನ ಟಿಕೆಟ್ ಅನ್ನು ಬ್ಲಾಕ್‌ನಲ್ಲಿ 100 ಪಟ್ಟು ಹೆಚ್ಚುವರಿ ಹಣ ಕೊಟ್ಟ ಸಹ ಖರೀದಿ ಮಾಡ್ತಿದ್ರು. ಆದ್ರೆ ಪಹಲ್ಗಾಮ್ ದಾಳಿ ಬಳಿಕ ಇಂಡೋ-ಪಾಕ್ ಮ್ಯಾಚ್ ನೋಡದಿರಲು ಕೆಲ ಸಂಘಟನೆಗಳು ಕರೆ ನೀಡಿವೆ. ದೇಶದ ಜನ ಕೂಡ ಪಾಕ್ ವಿರುದ್ಧ ಮ್ಯಾಚ್ ಆಡಬಾರದಿತ್ತು ಅನ್ನೋ ಅಭಿಪ್ರಾಯವನ್ನೂ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಕದನಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ – ಗಿಲ್‌ಗೆ ಗಾಯ
ಇನ್ನೂ ಆನ್‌ಲೈನ್‌ನಲ್ಲಿ ಈ ಮ್ಯಾಚ್‌ನ ಟಿಕೆಟ್ ಸಿಕ್ತಿದ್ದು, ಖರೀದಿಗೆ ಭಾರತೀಯರು ನಿರಾಸಕ್ತಿ ತೋರಿದ್ದಾರೆ. ದುಬೈನ ಸ್ಟೇಡಿಯಂನಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿಲ್ಲ. ಇದಕ್ಕೆ ಒಂದು ಮ್ಯಾಚ್ ನೋಡಬಾರದು ಅನ್ನೋ ನಿರ್ಧಾರ ಒಂದು ಕಾರಣ ಆದ್ರೆ, ಇನ್ನೂ ದುಬೈನಲ್ಲಿ ಟಿಕೆಟ್ ದರವನ್ನ ದುಬಾರಿ ಮಾಡಿರೋದು ಕೂಡ ಒಂದು ಕಾರಣ ಅಂತ ಹೇಳಲಾಗ್ತಿದೆ. ಅಲ್ಲದೆ ಪೆಹಲ್ಗಾಮ್ ದಾಳಿಯ ಸಂತ್ರಸ್ಥೆಯೊಬ್ಬರು ಟಿವಿಯಲ್ಲೂ ಈ ಮ್ಯಾಚ್ ನೋಡದಿರುವಂತೆ ಸಹ ಕರೆ ನೀಡಿದ್ದಾರೆ.