ರಾಯಚೂರು: ಮಂತ್ರಾಲಯ (Mantralaya) ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಚಾಲಕ ಸೇರಿ ನಾಲ್ಕು ಜನ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಹಿನ್ನೆಲೆ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ (Subudhendra Teertha Swamiji) ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಕೊಪ್ಪಳದ ಆನೆಗುಂದಿಯಲ್ಲಿ ಭಾವುಕರಾಗಿ ಮಾತನಾಡಿರುವ ಮಂತ್ರಾಲಯ ಶ್ರೀಗಳು, ಅಪಘಾತದಲ್ಲಿ ಮೃತರಾದವರ ಆತ್ಮಕ್ಕೆ ಸದ್ಗತಿಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ. ನರಹರಿ ತೀರ್ಥರ ಆರಾಧನಾ ಉತ್ಸವದಲ್ಲಿ ಪಾಲ್ಗೊಳ್ಳಲು ಮಂತ್ರಾಲಯದಿಂದ ಉತ್ಸಾಹದಿಂದ ಹೊರಟಿದ್ದ ನಮ್ಮ ವಿದ್ಯಾರ್ಥಿಗಳ ವಾಹನ ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಗಿದೆ. ಮೂವರು ವಿದ್ಯಾರ್ಥಿಗಳು ಹಾಗೂ ಚಾಲಕ ತೀವ್ರ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಓರ್ವ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ತೀವ್ರ ಗಾಯ ಹಾಗೂ ಭಯದಿಂದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಯನ್ನು ಚೆನ್ನಮ್ಮಗೆ ಹೋಲಿಸಿ ಅಪಮಾನ: ಸಿ.ಟಿ ರವಿ ಕಿಡಿ
ಯಾವುದೇ ವಸ್ತುವಿಗೆ ಬೆಲೆಕಟ್ಟಬಹುದು, ಪ್ರಾಣಕ್ಕೆ ಬೆಲೆ ಕಟ್ಟಲು ಆಗಲ್ಲ. ಮೃತ ಮಕ್ಕಳ ಪೋಷಕರ ಜೊತೆ ಸಂಸ್ಥಾನ ಯಾವತ್ತಿಗೂ ಇರುತ್ತದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಎಲ್ಲಾ ರೀತಿಯಿಂದಲೂ ಅವರಿಗೆ ಸಹಾಯ ಹಸ್ತ ನೀಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸಭೆಯಲ್ಲಿ ನನಗೆ ಅಪಮಾನ ಮಾಡಿದ್ದಾರೆ – ರಾಧಾಮೋಹನ್ ದಾಸ್ ವಿರುದ್ಧ ರಾಮುಲು ಗರಂ
ಅಪಘಾತದಲ್ಲಿ ವಿದ್ಯಾರ್ಥಿಗಳಾದ 18 ವರ್ಷದ ಹಯವದನ, 22 ವರ್ಷದ ಸುಜಯೇಂದ್ರ, 20 ವರ್ಷದ ಅಭಿಲಾಷ್ ಹಾಗೂ ಚಾಲಕ 20 ವರ್ಷದ ಕಂಸಾಲಿ ಶಿವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 10 ಜನರಿಗೆ ಗಾಯಗಳಾಗಿದ್ದು, ವಿದ್ಯಾರ್ಥಿ ಜಯಸಿಂಹ ಪರಿಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲು: ಪರಮೇಶ್ವರ್