ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಂಪುರ ಸಾಕಾನೆ ಶಿಬಿರದಲ್ಲಿ ಕುಸಿದು ಬಿದ್ದು ಅಕ್ಕಿರಾಜ (Akkiraja) ಖ್ಯಾತಿಯ ಗಂಡಾನೆ (Elephant) ಸಾವನ್ನಪ್ಪಿದೆ.
ಆನೆಯ ಸಾವಿನ ಸುದ್ದಿ ಕೇಳಿಬರುತ್ತಲೇ ಅದರ ಸುತ್ತ ಹಲವು ಅನುಮಾನಗಳು ಗರಿಗೆದರಿತ್ತು. ಆನೆಯ ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಅಸಲಿಯತ್ತು ಇದೀಗ ಬಯಲಾಗಿದೆ. ಆನೆಗೆ ಹಠಾತ್ ಹೃದಯಾಘಾತ ಉಂಟಾಗಿದೆ. ಸಾಮಾನ್ಯ ಹೃದಯಾಘಾತಕ್ಕಿಂತ ಮೂರು ಪಟ್ಟು ಹೆಚ್ಚು ಹೃದಯಾಘಾತವಾಗಿದ್ದು (Heart Attack) ಮಾತ್ರವಲ್ಲದೇ ಯಕೃತ್ತಿಗೂ ಹಾನಿಯಾಗಿದೆ. ಈ ಕಾರಣಗಳಿಂದ ಆನೆ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.
Advertisement
Advertisement
ಅಕ್ಕಿ ರಾಜ ಆನೆ ಸಾವನ್ನಪ್ಪಿದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಪರಿಸರವಾದಿಗಳು, ಪ್ರಾಣಿ ಪ್ರಿಯರಿಂದ ಆನೆ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಸಾವನ್ನಪ್ಪಿದ ಗಂಡಾನೆ ಅಕ್ಕಿರಾಜ, ಟ್ರೈ ಜಂಕ್ಷನ್ ಕಿಂಗ್ ಎಂದು ಹೆಸರು ಪಡೆದಿತ್ತು. ಇದು ಕರ್ನಾಟಕ, ಕೇರಳ, ತಮಿಳುನಾಡು ಕಾಡಿನ ಗಡಿಗಳಲ್ಲಿ ಸಂಚಾರ ಮಾಡುತ್ತಿತ್ತು. ಒಂಟಿ ಮನೆಗೆ ಕನ್ನ ಹಾಕಿ ಅಕ್ಕಿ ಕದಿಯುತ್ತಿತ್ತು. ಸಾರ್ವಜನಿಕರಿಂದ ಆಕ್ಷೇಪ ಕೇಳಿಬಂದ ಹಿನ್ನೆಲೆ, ಕಳೆದ 4 ತಿಂಗಳ ಹಿಂದೆ ಬಂಡೀಪುರದ ಎಲಚೆಟ್ಟಿ ಗ್ರಾಮದ ಬಳಿ ಆನೆಯನ್ನು ಸೆರೆಹಿಡಿಯಲಾಗಿತ್ತು. ಇದನ್ನೂ ಓದಿ: ಬೆಂಗಳೂರು ವಿದ್ಯಾರ್ಥಿಯನ್ನು ಅಪಹರಿಸಿ ಹಾಸನದಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್
Advertisement
ಇದಾದ ನಂತರ ಬಂಡೀಪುರದ (Bandipur) ರಾಂಪುರ (Rampur) ಸಾಕಾನೆ ಶಿಬಿರದಲ್ಲಿ ಆನೆಯನ್ನು ಪಳಗಿಸಲು ಅರಣ್ಯಾಧಿಕಾರಿಗಳು ಮುಂದಾಗಿದ್ದರು. ಕ್ರಾಲ್‌ನಲ್ಲಿಟ್ಟು ಆನೆಯನ್ನು ನೋಡಿಕೊಳ್ಳುತ್ತಿದ್ದರು. 3 ತಿಂಗಳಿಗೂ ಹೆಚ್ಚು ಕಾಲ ಕ್ರಾಲ್‌ನಲ್ಲಿದ್ದ ಆನೆಯನ್ನು ತೀರಾ ಇತ್ತೀಚೆಗೆ ಕ್ರಾಲ್‌ನಿಂದ ಹೊರಬಿಡಲಾಗಿತ್ತು.
Advertisement
ಇದೀಗ ಗಂಡಾನೆ ಏಕಾಏಕಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದೆ. ಆನೆ ಸಾವಿನ ಕಾರಣದ ಬಗ್ಗೆ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ಶಿವಮೊಗ್ಗ-ಬೆಂಗಳೂರು ವಿಮಾನದಲ್ಲಿ ತಾಂತ್ರಿಕ ದೋಷ; ವಿಮಾನ ಹಾರಾಟ ರದ್ದು
Web Stories