ಕಿಚ್ಚ ಸುದೀಪ್ ಅಂಗಳದಿಂದ ಭರ್ಜರಿ ಸುದ್ದಿಯೊಂದು ಬಂದಿದೆ. ವಿಕ್ರಾಂತ್ ರೋಣ ಸಿನಿಮಾದ ನಂತರ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಸುದೀಪ್ ಕಾಂಬಿನೇಷನ್ ನಲ್ಲಿ ಮೂರು ಚಿತ್ರಗಳು ಬರಲಿವೆ. ಕಿಚ್ಚನಿಗಾಗಿಯೇ ಅನೂಪ್ ಭಂಡಾರಿ ಮೂರು ಕಥೆಗಳನ್ನು ಸಿದ್ಧ ಮಾಡಿಕೊಂಡಿದ್ದಾರಂತೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್
ಸದ್ಯ ವಿಕ್ರಾಂತ್ ರೋಣ ಚಿತ್ರ ಬಿಡುಗಡೆಯ ಬ್ಯುಸಿಯಲ್ಲಿರುವ ಅನೂಪ್ ಈ ನಡುವೆಯೇ ‘ಬಿಲ್ಲ ರಂಗಾ ಬಾಷಾ’, ‘ಅಶ್ವತ್ಥಾಮ’ ಮತ್ತು ‘ವಿಕ್ರಾಂತ್ ರೋಣ 2’ ಸಿನಿಮಾದ ಕಥೆಗಳನ್ನೂ ರೆಡಿ ಮಾಡಿಕೊಂಡಿದ್ದಾರಂತೆ. ಆದರೆ, ಈ ಚಿತ್ರಗಳು ಯಾವಾಗ ಶುರುವಾಗುತ್ತವೆ ಎನ್ನುವ ಮಾಹಿತಿ ಸದ್ಯಕ್ಕಿಲ್ಲ. ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?
- Advertisement
- Advertisement
ಅಂದುಕೊಂಡಂತೆ ಆಗಿದ್ದರೆ, ವಿಕ್ರಾಂತ್ ರೋಣಕ್ಕಿಂತಲೂ ಮೊದಲು ಬಿಲ್ಲ ರಂಗ ಬಾಷಾ ಕಥೆ ಸೆಟ್ಟೇರಬೇಕಿತ್ತು. ಅದು ಆಗಲಿಲ್ಲ. ಈಗಲಾದರೂ ಈ ಸಿನಿಮಾ ಸೆಟ್ಟೇರತ್ತಾ ಅಥವಾ ಅಶ್ವತ್ಥಾಮ ಚಿತ್ರದ ನಂತರ ಆಗತ್ತಾ ನೋಡಬೇಕಿದೆ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ
ಕಿಚ್ಚ ಸುದೀಪ್ ಅವರಿಗಾಗಿಯೇ ಸಿನಿಮಾ ಮಾಡಬೇಕು ಎಂದು ಚಿತ್ರರಂಗಕ್ಕೆ ಬಂದವರು ಅನೂಪ್ ಭಂಡಾರಿ. ಆದರೆ, ಆಗ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಸಹೋದರನನ್ನೇ ಹಾಕಿಕೊಂಡು ರಂಗಿತರಂಗ ಚಿತ್ರ ಮಾಡಿದ್ದರು. ಇದೀಗ ಅವರಿಗೆ ಅದೃಷ್ಟ ಹುಡುಕಿಕೊಂಡು ಬಂದಿದೆ. ಅತೀ ಕಡಿಮೆ ಸಮಯದಲ್ಲಿ ಹೆಸರಾಂತ ನಟನ ಜತೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುವ ಅವಕಾಶ ಇವರ ಪಾಲಾಗಿದೆ.