ಬ್ರೆಸಿಲಿಯಾ: ಹಳೆಯ ವಿದ್ಯಾರ್ಥಿಯೋರ್ವ ತಾನು ಈ ಹಿಂದೆ ಕಲಿತಿದ್ದ 2 ಶಾಲೆಗೆ (Schools) ಶಸ್ತ್ರಧಾರಿಯಾಗಿ ಬಂದು ಶೂಟೌಟ್ (Shootout) ನಡೆಸಿ ಮೂವರನ್ನು ಕೊಂದು 13 ಜನರನ್ನು ಗಾಯಗೊಳಿಸಿರುವ ಘಟನೆ ಸೌತ್‍ಈಸ್ಟರ್ನ್ ಬ್ರೆಜಿಲ್‍ನಲ್ಲಿ (Brazil) ನಡೆದಿದೆ.
Advertisement
ಬ್ರೆಜಿಲ್‍ನ ಎಸ್ಪಿರಿಟೊ ಸ್ಯಾಂಟೋ ರಾಜ್ಯದ ಅರಾಕ್ರೂಜ್ ಪಟ್ಟಣದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೂಟೌಟ್ ನಡೆದಿದೆ. ಈ ಹಿಂದೆ ಅದೇ ಶಾಲೆಯಲ್ಲಿ ಕಲಿತಿದ್ದ ವಿದ್ಯಾರ್ಥಿಯೋರ್ವ ಸೆಮಿಆಟೋಮ್ಯಾಟಿಕ್ ಗನ್ (Gun) ಹಿಡಿದು ಬುಲೆಟ್ ಪ್ರೂಪ್ ಜಾಕೆಟ್ ಧರಿಸಿ ಶಾಲೆಗೆ ಪ್ರವೇಶಿಸಿ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ 2 ಟೀಚರ್ (Teacher) ಮತ್ತು ಓರ್ವ ವಿದ್ಯಾರ್ಥಿ (Student) ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಕುಕ್ಕೆಯ ಬಳಿಕ ಬೆಂಗಳೂರಿಗೆ ತಟ್ಟಿದ ಧರ್ಮ ದಂಗಲ್
Advertisement
Advertisement
ಘಟನೆ ನಡೆದು ನಾಲ್ಕು ಘಂಟೆಗಳ ಬಳಿಕ 16 ವರ್ಷದ ಶೂಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ಬಾಲಕ ಶೂಟೌಟ್ ನಡೆಸಿದ ಶಾಲೆಯಲ್ಲಿ ಈ ಹಿಂದೆ ವಿದ್ಯಾರ್ಥಿಯಾಗಿದ್ದ ಈತನ ತಂದೆ ಸೈನ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮನೆಯಲ್ಲಿದ್ದ ಗನ್ ಅನ್ನು ಕೃತ್ಯಕ್ಕೆ ಬಳಸಿದ್ದಾನೆ. ಇದನ್ನೂ ಓದಿ: ಈಗಲೂ ಮೋದಿ ನಂ.1 ಜನಪ್ರಿಯ ನಾಯಕ
Advertisement
BREAKING: At least three killed, 11 wounded in twin school shootings in Brazil: pic.twitter.com/0fo9DTIldL
— Giyan (@Jiyan2023) November 25, 2022
ಶಾಲೆಯಲ್ಲಿ ಬ್ರೇಕ್ ಟೈಮ್ ನೋಡಿಕೊಂಡು ಆರೋಪಿ ದಾಳಿ ನಡೆಸಿದ್ದಾನೆ. ಗಾಯಗೊಂಡ 13 ಜನರ ಪೈಕಿ ಸಿಬ್ಬಂದಿ ಹಾಗೂ ಇಬ್ಬರು ಮಕ್ಕಳು ಸೇರಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.