ತಮಿಳಿನ ಹೆಸರಾಂತ ಹಿರಿಯ ನಟ, ಡಿಎಂಡಿಕೆ ಪಕ್ಷದ ಅಧ್ಯಕ್ಷರೂ ಆಗಿರುವ ವಿಜಯ್ ಕಾಂತ್ ಮಧುಮೇಹದಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧುಮೇಹ ವಿಪರೀತವಾಗಿದ್ದರಿಂದ ಮತ್ತು ಬೆರಳುಗಳಿಗೆ ರಕ್ತ ಸಂಚಾರ ಆಗದೇ ಇರುವ ಕಾರಣದಿಂದಾಗಿ ಅವರ ಕಾಲಿನ ಮೂರು ಬೆರಳುಗಳನ್ನು ಕತ್ತರಿಸಿದ್ದಾರೆ ಎಂದು ಡಿಎಂಡಿಕೆ ಪಕ್ಷ ಮಾಹಿತಿ ನೀಡಿದೆ. ರಕ್ತ ಸಂಚಾರಕ್ಕೆ ತೊಂದರೆ ಆಗುತ್ತಿದ್ದರಿಂದ ಬೆರಳುಗಳನ್ನು ಕತ್ತರಿಸುವುದು ಅನಿವಾರ್ಯವಾಗಿತ್ತು ಎಂದು ವೈದ್ಯರು ತಿಳಿಸಿದ್ದರಂತೆ.
Advertisement
ವಿಜಯ್ ಕಾಂತ್ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ತಮ್ಮದೇ ಆದ ಅಭಿಮಾನ ಬಳಗ ಹೊಂದಿದ್ದರು. ಸಿನಿಮಾ ರಂಗದಿಂದ ರಾಜಕೀಯ ರಂಗಕ್ಕೆ ಜಿಗಿದು, 2005ರಿಂದ ತಮ್ಮದೇ ಡಿಎಂಡಿಕೆ ಪಕ್ಷ ಸ್ಥಾಪನೆ ಮಾಡಿ, ಸಮಾಜಸೇವೆಗೆ ಮುಂದಾಗಿದ್ದರು. ಹತ್ತು ವರ್ಷಗಳ ಕಾಲ ರಾಜಕೀಯ ಜೀವನದಲ್ಲಿದ್ದು, ನಂತರ ಸಿನಿಮಾ ಮತ್ತು ರಾಜಕೀಯ ರಂಗದಿಂದಲೇ ಅವರು ದೂರ ಉಳಿದರು. ಅನಾರೋಗ್ಯದ ಕಾರಣದಿಂದಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದರು. ಇದನ್ನೂ ಓದಿ: ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಡುವೆ ಬಿಗ್ ಫೈಟ್ : ಗೆಲುವು ಯಾರ ಪಾಲಿಗೆ?
Advertisement
Advertisement
ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಅನೇಕ ನಟರ ಜೊತೆ ಒಂದೊಳ್ಳೆ ಬಾಂಧವ್ಯ ಇಟ್ಟುಕೊಂಡಿದ್ದ ವಿಜಯ್ ಕಾಂತ್ ಆರೋಗ್ಯ ಸ್ಥಿರವಾಗಿದ್ದು, ಮಧುಮೇಹಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲೇ ವಿಶ್ರಾಂತಿ ತಗೆದುಕೊಳ್ಳುತ್ತಿದ್ದು, ಕೆಲವು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರಂತೆ. ವಿಜಯ್ ಕಾಂತ್ ಆರೋಗ್ಯದ ಬಗ್ಗೆ ವಿಷಯ ತಿಳಿದುಕೊಂಡಿರುವ ರಜನಿಕಾಂತ್ ಸೇರಿದಂತೆ ಹಲವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.