– ತಂದೆ, ತಾಯಿಗೂ ಸೋಂಕು ತಟ್ಟಿರುವ ಶಂಕೆ
– ಕಾಸರಗೋಡಿನ ವ್ಯಕ್ತಿಗೆ ತಟ್ಟಿದ ಕೊರೊನಾ
ಗದಗ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕಿತ ಪ್ರಕರಣ ವರಿದಿಯಾಗಿದ್ದು, ಲಂಡನ್‍ನಿಂದ ಗದಗಕ್ಕೆ ಬಂದ ಮೂರುವರೆ ವರ್ಷದ ಮಗುವಿಗೆ ಸೋಂಕು ತಟ್ಟಿರುವ ಶಂಕೆ ವ್ಯಕ್ತವಾಗಿದೆ.
Advertisement
ಲಂಡನ್‍ನಿಂದ ಜಿಲ್ಲೆಗೆ ಬಂದಿದ್ದ ಕುಟುಂಬಕ್ಕೆ ಕೊರೊನಾ ಸೋಂಕಿರುವ ಶಂಕೆ ವ್ಯಕ್ತವಾಗಿದೆ. ಸೋಂಕು ಶಂಕಿತ ವ್ಯಕ್ತಿಗಳನ್ನ ಗದಗ ಜಿಮ್ಸ್ ಆಸ್ಪತ್ರೆಯ ಐಸೊಲೇಷನ್ ವಾರ್ಡಿಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಗದಗ ಮೂಲದ ಕುಟುಂಬ ಲಂಡನ್‍ನಲ್ಲಿ ನೆಲೆಸಿತ್ತು. ಆದರೆ ತಂದೆ, ತಾಯಿ ಮಗುವಿನೊಂದಿಗೆ ಮಾರ್ಚ್ 9ರಂದು ಲಂಡನ್‍ನಿಂದ ಗದಗಕ್ಕೆ ಬಂದಿದ್ದರು. ಅದರಲ್ಲೀಗ ಮೂರುವರೆ ವರ್ಷದ ಮಗುವಿನಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಮಗುವಿನ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.
Advertisement
Advertisement
ಲಂಡನ್‍ನಿಂದ ಬಂದ ಮಗುವಿನಲ್ಲಿ ವೈರಸ್ ಲಕ್ಷಣಗಳು ಕಂಡುಬಂದಿದ್ದರಿಂದ ತಂದೆ, ತಾಯಿಯ ಮೇಲೂ ನಿಗಾ ವಹಿಸಲಾಗಿದೆ. ತಂದೆ, ತಾಯಿ ಹಾಗೂ ಮಗುವಿನ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಪರೀಕ್ಷಿಸಲು ಕಳುಹಿಸಲಾಗಿದೆ. ಮೂವರನ್ನು ಐಸೊಲೇಷನ್ ವಾರ್ಡಿನಲ್ಲಿ ಇರಿಸಿ, ವೈದ್ಯರ ತಂಡ ತಪಾಸಣೆ ನಡೆಸುತ್ತಿದೆ. ಅವರ ಮೇಲೆ ಆರೋಗ್ಯ ಇಲಾಖೆ ಸೂಚನೆಯಂತೆ 15 ದಿನಗಳ ಕಾಲ ನಿಗಾ ವಹಿಸಲಾಗುತ್ತದೆ.
Advertisement
ಇತ್ತ ದುಬೈನಿಂದ ಕೇರಳದ ಕಾಸರಗೋಡಿಗೆ ಆಗಮಿಸಿದ್ದ ವ್ಯಕ್ತಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾಸರಗೋಡಿಗೆ ಸೋಂಕಿತ ವ್ಯಕ್ತ ತೆರಳಿದ್ದನು. ಮಾರ್ಚ್ 14ರಂದು ಮುಂಜಾನೆ 5.20ಕ್ಕೆ ಮಂಗಳೂರು ತಲುಪಿದ್ದ ವ್ಯಕ್ತಿ ಏರ್ ಇಂಡಿಯಾ ಐಎಕ್ಸ್ 814 ವಿಮಾನದಲ್ಲಿ ಬಂದಿದ್ದನು.
ಈತ ಕಾಸರಗೋಡಿನ ಬದಿಯಡ್ಕದ ನೀರ್ಚಾಲು ನಿವಾಸಿಯಾಗಿದ್ದು, ಈತ ಪ್ರಯಾಣಿಸಿದ ವಿಮಾನದಲ್ಲಿ ಬಂದವರಿಗೂ ಕೊರೊನಾ ಹರಡಿರುವ ಶಂಕೆ ವ್ಯಕ್ತವಾಗಿದ್ದು, ಈ ವಿಮಾನದಲ್ಲಿ ಆಗಮಿಸಿದವರು ಕಾಸರಗೋಡು ಇಲ್ಲವೇ ಮಂಗಳೂರು ವೈದ್ಯರ ಸಂಪರ್ಕಿಸಲು ಮನವಿ ಮಾಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸೋಂಕಿತ ವ್ಯಕ್ತಿ ದಾಖಲಾಗಿದ್ದನು ಎನ್ನಲಾಗಿದೆ.