ಕಾಬೂಲ್: ತಾಲಿಬಾನ್ ಸರ್ಕಾರಕ್ಕೆ ಬೆಂಬಲ ಸೂಚಿಸಲು ಉತ್ತರ ಕಾಬೂಲ್ ನ ಮೈದಾನದಲ್ಲಿ ಸುಮಾರು 1,000 ಕ್ಕೂ ಹೆಚ್ಚು ಜನರು ರ‍್ಯಾಲಿಯಲ್ಲಿ ಭಾಗವಹಿಸುವ ಮೂಲಕ ಅಫ್ಘಾನಿಸ್ತಾನದ ಆಳ್ವಿಕೆಯನ್ನು ಬೆಂಬಲಿಸಿದ್ದಾರೆ.
Advertisement
ರಾಜಧಾನಿಯ ಹೊರವಲಯದಲ್ಲಿರುವ ಕೊಹ್ಧಮಾನ್ ಟೌನ್ ಶಿಪ್ ನಲ್ಲಿ ಈ ರ‍್ಯಾಲಿಯನ್ನು ಹಮ್ಮಿಕೊಂಡಿದ್ದು, ಈ ರ‍್ಯಾಲಿಗೆ ಪುರುಷರು ಮತ್ತು ಹುಡುಗರು ಮಾತ್ರ ಬಂದಿದ್ದರು. ಈ ವೇಳೆ ತಾಲಿಬಾನ್ ನ ಪ್ರಮುಖ ಅಧಿಕಾರಿಗಳು ಭಾಷಣ ಮಾಡಿದರು. ತಾಲಿಬಾನ್ ಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಮೊದಲ ಬಾರಿಗೆ ಈ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: 29ರ ವಸಂತಕ್ಕೆ ಕಾಲಿಟ್ಟ ಚಂದನವನದ ಡಿಂಪಲ್ ಕ್ವೀನ್
Advertisement
ರಾಕೆಟ್ ಲಾಂಚರ್ ಗಳು ಸೇರಿದಂತೆ ಧ್ವಜಗಳು ಮತ್ತು ಆಯುಧಗಳನ್ನು ಹೊತ್ತು ತಾಲಿಬಾನ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Advertisement
Advertisement
ಜನರು ಬರಲು ಆರಂಭಿಸಿದಂತೆ, ತಾಲಿಬಾನಿಗಳು ‘ಅಮೆರಿಕವನ್ನು ಸೋಲಿಸಲಾಗಿದೆ. ಅಸಾಧ್ಯ, ಅಸಾಧ್ಯ – ಆದರೆ ಸಾಧ್ಯ’ ಎಂದು ಹಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈ ಹಿನ್ನೆಲೆ ನೆರೆದಿದ್ದ ಜನರು ತಾಲಿಬಾನ್ ಪರ ಘೋಷಣೆಗಳನ್ನು ಕೂಗಿದರು. ತಾಲಿಬಾನ್ ನಾಯಕರು ವೇದಿಕೆಯ ಮುಂಭಾಗಕ್ಕೆ ಬರುತ್ತಿದಂತೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದರು. ಇದನ್ನೂ ಓದಿ: ಗಗನಸಖಿ ಡ್ಯಾನ್ಸ್ ವೀಡಿಯೋ ವೈರಲ್