Cinema

29ರ ವಸಂತಕ್ಕೆ ಕಾಲಿಟ್ಟ ಚಂದನವನದ ಡಿಂಪಲ್ ಕ್ವೀನ್

Published

on

Share this

ಬೆಂಗಳೂರು: ಚಂದನವನದ ಬುಲ್ ಬುಲ್, ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು 29ರ ವಸಂತಕ್ಕೆ ಕಾಲಿಟ್ಟಿದ್ದಾರೆ.

ಚಂದನವನದಲ್ಲಿ ರಚ್ಚು ಎಂದೇ ಖ್ಯಾತಿ ಪಡೆದಿರುವ ರಚಿತಾ, ಕನ್ನಡ ಸಿನಿರಸಿಕರಿಗೆ ಅಚ್ಚುಮೆಚ್ಚು. ಸಿಂಪಲ್ ಹುಡುಗಿ, ಮನೆ ಮಗಳು ಎನ್ನುವ ರೀತಿಯಲ್ಲಿ ಪರಿಚಯವಾದ ಈ ನಟಿ ಮೊದಲು ಕ್ಯಾಮೆರಾ ಫೇಸ್ ಮಾಡಿದ್ದು, ಕಿರುತೆರೆಯ ‘ಅರಸಿ’ ಧಾರವಾಹಿಯ ಮೂಲಕ. ನಂತರ ಲಕ್ಕಿ ಎಂಬಂತೆ ಇವರಿಗೆ ಚಂದನವನದಲ್ಲಿ ದರ್ಶನ್ ಜೊತೆಗೆ ‘ಬುಲ್ ಬುಲ್’ ಸಿನಿಮಾ ಮೂಲಕ ತಮ್ಮ ಸಿನಿ ಜರ್ನಿ ಮಾಡಲು ಅವಕಾಶ ಸಿಕ್ಕಿತು. ಆ ಸಿನಿಮಾದಿಂದ ಬುಲ್ ಬುಲ್ ರಚಿತಾ ಎಂದೇ ಖ್ಯಾತಿ ಪಡೆದರು. ಇದನ್ನೂ ಓದಿ:  ಅಣ್ಣಾಥೆ ಚಿತ್ರತಂಡ ಎಸ್‍ಪಿಬಿ ಅಭಿಮಾನಿಗಳಿಗೆ ನೀಡಿತು ಸಿಹಿಸುದ್ದಿ

 

View this post on Instagram

 

A post shared by Nidhi Subbaiah (@nidhisubbaiah)

ನಂತರ ಅವರ ಅದೃಷ್ಟ ಎಂಬಂತೆ ಚಂದನವನದ ಸ್ಟಾರ್ ನಟರ ಜೊತೆ ಸಾಲು ಸಾಲು ಚಿತ್ರಗಳ ಅವಕಾಶ ಬಂದವು. ರಚಿತಾ ನಟನೆಯ ಹಲವು ಚಿತ್ರಗಳು ಹೆಸರು ತಂದುಕೊಂಡುವ ಮೂಲಕ ಸ್ಯಾಂಡಲ್‍ವುಡ್ ನ ಬಹುಬೇಡಿಕೆಯ ಮತ್ತು ನಂಬರ್ 1 ನಟಿಯಾಗಿ ಬೆಳೆದರು.

ದರ್ಶನ್ ಜೊತೆ ಸಿನಿ ಜರ್ನಿ ಪ್ರಾರಂಭಿಸಿದ ರಚಿತಾ, ಸುದೀಪ್, ಪುನೀತ್ ರಾಜ್‍ಕುಮಾರ್, ಶಿವರಾಜ್‍ಕುಮಾರ್, ಕೃಷ್ಣ ಅಜಯ್ ರಾವ್, ಗಣೇಶ್ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಇದನ್ನೂ ಓದಿ: ಶ್ವೇತಾ ಚಂಗಪ್ಪ ಮಗನನ್ನು ನೋಡಲು ಮನೆಗೆ ಬಂದ ಕ್ರೇಜಿಸ್ಟಾರ್

ಅದು ಅಲ್ಲದೇ ಹಲವು ಖಾಸಗಿ ವಾಹಿನಿಗಳ ತೀರ್ಪುಗಾರರಾಗಿದ್ದರು. ರಚಿತಾ ತಂದೆ ಕೆ.ಎಸ್.ರಾಮ್ ಮೂಲತಃ ಭರತನಾಟ್ಯಂ ಕಲಾವಿದರಾಗಿದ್ದು, ಇವರು ಕೂಡ ಭರತನಾಟ್ಯದಲ್ಲಿ ತರಬೇತಿ ಹೊಂದಿದ್ದಾರೆ.

ರಚಿತಾ ನಟನೆಯ ವೀರಂ, ಏಕ್ ಲವ್ ಯಾ, ಮ್ಯಾಟ್ನಿ, ಸೂಪರ್ ಮಚ್ಚಿ, ಡಾಲಿ, ಏಪ್ರಿಲ್, ಬ್ಯಾಡ್ ಮ್ಯಾನರ್, ಲವ್ ಯೂ ರಚ್ಚು, ಲವ್ ಮಿ ಆರ್ ಹೇಟ್ ಮಿ, ಶಬರಿ ಮತ್ತು ಮಾನ್ಸೂನ್ ರಾಗ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ರಚಿತಾ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement