ಬೆಂಗಳೂರು: ದೇಶದ ಕಾನೂನಿಗೆ ಎಲ್ಲರೂ ಗೌರವ ಕೊಡಬೇಕು. ಇದು ಇಟಲಿ ಅಲ್ಲ ಅಂತ ಕಾಂಗ್ರೆಸ್ ನಾಯಕರ ವಿರುದ್ಧ ಕಂದಾಯ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿಗೆ ಇಡಿ ವಿಚಾರಣೆ ಮಾಡುತ್ತಿರುದಕ್ಕೆ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಅಶೋಕ್ ಕಿಡಿಕಾರಿದರು. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಹಗರದ ಬಗ್ಗೆ ನಡೆಯುತ್ತಿರುವ ಇಡಿ ತನಿಖೆಗೆ ಇವತ್ತು ಕಾಂಗ್ರೆಸ್ ಮತ್ತೆ ಧರಣಿ ನಾಟಕವಾಡುತ್ತಿದೆ. ಇಡಿ ಒಂದು ಸ್ವಾಯತ್ತತೆ ಸಂಸ್ಥೆ. ಅದರ ಕೆಲಸ ಅದು ಮಾಡುತ್ತಿದೆ. ಇದರ ವಿರುದ್ಧ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದರು.
ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಾವಿರಾರು ಜನ ಹಣ ಹಾಕಿ ಸ್ಥಾಪನೆ ಮಾಡಿದ್ದರು. ಅದನ್ನು ಕಬಳಿಸುವುದಕ್ಕೆ, ಕುಟುಂಬದ ಆಸ್ತಿ ಮಾಡಿಕೊಳ್ಳುವುದಕ್ಕೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹೋಗಿದ್ದಾರೆ. ಹೀಗಾಗಿ ತನಿಖೆ ಆಗುತ್ತಿದೆ. ಇದು ಕಾಂಗ್ರೆಸ್ ಮೇಲೆ ಆಗುತ್ತಿರುವ ದಾಳಿ ಅಲ್ಲ. ಈ ಆಸ್ತಿ ಅವರ ಕುಟುಂಬಕ್ಕೆ ಹೋಗುತ್ತಿರುವುದರಿಂದ ವಿಚಾರಣೆ ಆಗಿದೆ. ಆದರೆ ಕುಟುಂಬದ ಆಸ್ತಿ ರಕ್ಷಣೆ ಮಾಡುವುದಕ್ಕೆ ಕಾಂಗ್ರೆಸ್ ಹೆಸರು ಬಳಸಿಕೊಳ್ಳುತ್ತಿದ್ದಾರೆ ಅಂತ ಕಿಡಿಕಾರಿದರು.
ಇದೊಂದು ಅಪರಾಧ ಅದಕ್ಕೆ ಇಡಿ ತನಿಖೆ ಮಾಡುತ್ತಿದೆ. ತಪ್ಪು ಮಾಡಿಲ್ಲ ಅಂದರೆ ಹೊರಗೆ ಬರುತ್ತಾರೆ. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ದೇಶದ ಕಾನೂನಿಗೆ ಎಲ್ಲರು ಬೆಲೆ ಕೊಡಬೇಕು. ಇದು ಇಟಲಿ ಅಲ್ಲ ಅಂತ ರಾಹುಲ್, ಸೋನಿಯಾ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಪತ್ನಿಯಿಂದಲೇ ಪತಿಯ ಕೊಲೆ – ಅಪಘಾತವಾಗಿದೆ ಎಂದು ಬಿಂಬಿಸಲು ಹೋದವಳು ಅರೆಸ್ಟ್
ದೇಶದ ಕಾನೂನು ಎಲ್ಲರಿಗೂ ಒಂದೇ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ತುರ್ತುಸ್ಥಿತಿ ಪರಿಸ್ಥಿತಿಗಿಂತ ಇದು ದೊಡ್ಡದು ಅಂತ ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಈಗಲಾದರೂ ಗೊತ್ತಾಯಿತಾ ತುರ್ತು ಪರಿಸ್ಥಿತಿ ಅಂದರೆ ಏನು ಅಂತ ಎಂದು ಡಿ.ಕೆ. ಶಿವಕುಮಾರ್‍ಗೆ ತಿರುಗೇಟು ನೀಡಿದರು. ಇದನ್ನೂ ಓದಿ: ದೇವಾಲಯದ ರಥ ಉರುಳಿ ಬಿದ್ದು ಇಬ್ಬರು ಸಾವು – ನಾಲ್ವರಿಗೆ ಗಾಯ
ಕಾಂಗ್ರೆಸ್ ನಾಯಕರ ಬಂಧನವೇ ಆಗಿಲ್ಲ. ಆಗಲೇ ಹೀಗೆ ಮಾಡುತ್ತಿದ್ದಾರೆ. ಬಂಧನ ಆಗುತ್ತದೆ ಅಂತ ಈಗಲೇ ಸ್ಟೇ ಅರ್ಜಿ ಹಾಕುತ್ತಿದ್ದಾರೆ. ಈ ಕೇಸ್ ಹಾಕಿರುವುದು ಸುಬ್ರಮಣ್ಯಂ ಸ್ವಾಮಿ. ಹೀಗಾಗಿ ಇಡಿ ತನಿಖೆ ಮಾಡುತ್ತಿದೆ. ಕಾನೂನು, ಸಂಸ್ಥೆಗಳಿಗೆ ಕಾಂಗ್ರೆಸ್ ಗೌರವ ಕೊಡಬೇಕು. ಜನರ ಮೇಲೂ ಇಡಿ ಕೇಸ್ ಇದೆ. ಹಾಗಾದರೆ ಅವರು ಇಡಿ ಮುಂದೆ ಪ್ರತಿಭಟನೆ ಮಾಡಬೇಕಾ? ಜನರಿಗೊಂದು ಕಾನೂನು ನಿಮಗೊಂದು ಕಾನೂನಾ? ಸಂವಿಧಾನ ತಿರುಚುವ ಕೆಲಸ ಕಾಂಗ್ರೆಸ್ ಅವರು ಮಾಡಬಾರದು. ನೀವು ನಿರಪರಾಧಿ ಆದರೆ ಹೊರಗೆ ಬರುತ್ತೀರಾ. ಇಲ್ಲ ಅಂದರೆ ಒಳಗೆ ಹೋಗುತ್ತೀರಾ ಎಂದು ಹೇಳಿದರು.