ಮುಂಬೈ: ಶಿವಸೇನೆ ನೇತೃತ್ವದ `ಮಹಾ’ ಸರ್ಕಾರದ ಪ್ರಸ್ತುತ ರಾಜಕೀಯ ಬಿಕ್ಕಟ್ಟನ್ನು ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಂಗಗಳ ನೃತ್ಯಕ್ಕೆ ಹೋಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಇದು ತ್ರಿಪಕ್ಷೀಯ ರಾಜ್ಯ ಆಡಳಿತದ ಆಂತರಿಕ ವಿಷಯ. ಪ್ರಸ್ತುತ ಬೆಳವಣಿಗೆಯನ್ನು ನಮ್ಮ ಪಕ್ಷ ಗನನಿಸುತ್ತಿದೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಗುಜರಾತ್ ಗಲಭೆ ಪ್ರಕರಣದಲ್ಲಿ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ತೀಸ್ತಾ ಸೆತಲ್ವಾಡ್ ಬಂಧನ
Advertisement
Advertisement
ನಾವು ಬಯಲಾಗುತ್ತಿರುವ ನಾಟಕದ ಮೇಲೆ ಕಣ್ಣಿಟ್ಟಿದ್ದೇವೆ. ಮಹಾ ವಿಕಾಸ್ ಅಘಾಡಿ ಈ ವಿಷಯದ ಬಗ್ಗೆ ಚರ್ಚಿಸಲಿ. ಕೋತಿಗಳು ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ಜಿಗಿಯುವಂತೆ ವರ್ತಿಸುತ್ತವೆ. ಹಾಗೆಯೇ ಇದೂ ಕೋತಿಗಳ ನೃತ್ಯದಂತೆ ಕಾಣುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಭಾರತದ ಆಟಗಾರರಿಗೆ ಸಿಗುವ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗಲ್ಲ: ಪಾಕ್ ಕ್ರಿಕೆಟಿಗ ಶೆಹ್‌ಝಾದ್
Advertisement
ಏಕನಾಥ್ ಶಿಂಧೆ ಸೇನೆ ಬಂಡಾಯದ ಸುನಾಮಿಯಿಂದ ತತ್ತರಿಸಿರುವ ಮಹಾರಾಷ್ಟ್ರ ಅಘಾಡಿ ಸರ್ಕಾರ ಪತನದಂಚು ತಲುಪಿದೆ. ಏನೆಲ್ಲಾ ಮಾಡಿದ್ರೂ ಬಂಡಾಯದ ಬಿಸಿ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಶಿವಸೇನೆ ತನ್ನ ಹುಟ್ಟುಗುಣ ಪ್ರದರ್ಶನಕ್ಕೆ ಮುಂದಾಗಿದೆ. ಪಕ್ಷಕ್ಕೆ ದ್ರೋಹ ಮಾಡಿದ ಶಾಸಕರ ವಿರುದ್ಧ ಬೀದಿ ಬಡಿದಾಟದ ಸುಳಿವು ಕೊಟ್ಟಿದೆ.
Advertisement
ರೆಬೆಲ್ ಶಾಸಕರ ಕಚೇರಿಗಳನ್ನು ಶಿವಸೈನಿಕರು ಟಾರ್ಗೆಟ್ ಮಾಡಿ ದಾಂಧಲೆ ನಡೆಸಿದ್ದಾರೆ. ಉಲ್ಲಾಸ್‌ನಗರದಲ್ಲಿ ಕಲ್ಲು ತೂರಾಟ ಕೂಡ ನಡೆದಿದೆ. ಇದನ್ನು ಸಂಸದ ಸಂಜಯ್ ರಾವತ್ ಸಮರ್ಥಿಸಿದ್ದಾರೆ. ಸಿಎಂ ಉದ್ಧವ್‌ಗೆ ತೊಂದ್ರೆ ಕೊಡ್ತಿರುವ ನಂಬಿಕೆ ದ್ರೋಹಿಗಳು, ಬಂಡಾಯ ಶಾಸಕರೆಲ್ಲರಿಗೂ ಇದೇ ಕಾದಿದೆ. ಅವರ ಕಚೇರಿಗಳ ಮೇಲೆಯೂ ದಾಳಿ ನಡೆಯುತ್ತದೆ. ಯಾರನ್ನೂ ಬಿಡೋ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ.
ಈ ಕ್ಷಣದವರೆಗೂ ನಮ್ಮ ಶಿವಸೈನಿಕರು ಸಹನೆಯಿಂದಲೇ ಇದ್ದಾರೆ. ಆದ್ರೆ ಸಮಯ ಕಳೆದಂತೆ ಅವರ ಸಹನೆ ನಶಿಸ್ತಾ ಇದೆ. ಅವರೇನಾದ್ರೂ ಬೀದಿಗೆ ಇಳಿದ್ರೆ ಬೀದಿಗಳು ಧಗಧಗಿಸಲಿವೆ ಎಂದು ಬೆದರಿಕೆ ಹಾಕುವ ರೀತಿಯಲ್ಲಿ ರಾವತ್ ಗಟ್ಟಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಂದುಳಿದ ವರ್ಗದ ಯುವಕರು ಮೃತಪಟ್ಟಾಗ ಸಿಎಂ ಆಗಿದ್ದ ಸಿದ್ದರಾಮಯ್ಯ ಬರಲೇ ಇಲ್ಲ: ಸುನೀಲ್ ಕುಮಾರ್
ಇದಕ್ಕೆ ಪೂರಕ ಎಂಬಂತೆ ರೆಬೆಲ್ ಶಾಸಕರ ಕುಟುಂಬಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಉದ್ಧವ್ ಸರ್ಕಾರ ಬೆಳಗ್ಗೆ ಹಿಂಪಡೆದಿತ್ತು. ಆದರೆ ಇದಕ್ಕೆ ಶಿಂಧೆ ಸೇರಿ ಹಲವರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಮಹಾ ಸರ್ಕಾರ ಉಲ್ಟಾ ಹೊಡೆದಿದೆ. ಮುಂಬೈ ಮತ್ತು ಶಿಂಧೆ ಕೋಟೆ ಥಾಣೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಶಿಂಧೆ ನಿವಾಸಗಳಿಗೆ ಭಾರೀ ಭದ್ರತೆ ಒದಗಿಸಲಾಗಿದೆ. ಓಸ್ಮಾನಾಬಾದ್, ರ‍್ಗಾರ್, ಔರಂಗಬಾದ್ ಸೇರಿ ಹಲವೆಡೆ ಶಿವಸೈನಿಕರು ಭಾರೀ ಪ್ರತಿಭಟನೆ ನಡೆಸಿದ್ದಾರೆ.
ಶಿಂಧೆ ಬೆಂಬಲಿಗರು ಕೂಡ ಬೀದಿಗೆ ಇಳಿದು ಸೆಡ್ಡು ಹೊಡೆದಿದ್ದಾರೆ. ನಾವೇನು ಕಡಿಮೆಯಲ್ಲ. ಶಿಂಧೆ ಸಾಬ್ ಹೇಳಿದ್ದಕ್ಕೆ ಸುಮ್ನಿದ್ದೀವಿ ಎಂದು ಸಂಸದ ಶ್ರೀಕಾಂತ್ ಶಿಂಧೆ ಹೇಳಿದ್ದಾರೆ.
ಮಹಾ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡದಿದ್ರೆ ಕೇಂದ್ರ ಮಧ್ಯ ಪ್ರವೇಶಿಸುತ್ತೆ ಎಂದು ರೆಬೆಲ್ ಎಂಎಲ್‌ಎ ದೀಪಕ್ ಎಚ್ಚರಿಸಿದ್ದಾರೆ. ಇದನ್ನು ಗಮನಿಸಿದ್ರೆ ಅಘಾಡಿ ಸರ್ಕಾರವೇ ಅರಾಜಕತೆಗೆ ದಾರಿ ಮಾಡಿಕೊಡುತ್ತಿರುವಂತೆ ಕಾಣುತ್ತಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡುವಂತೆ ಸಂಸದೆ ನವನೀತ್ ಕೌರ್ ಕೇಂದ್ರವನ್ನು ಒತ್ತಾಯಿಸಿದ್ದಾರೆ.