CricketLatestLeading NewsMain PostSports

ಭಾರತದ ಆಟಗಾರರಿಗೆ ಸಿಗುವ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗಲ್ಲ: ಪಾಕ್ ಕ್ರಿಕೆಟಿಗ ಶೆಹ್‌ಝಾದ್

Advertisements

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ತಮ್ಮನ್ನು ನಡೆಸಿಕೊಂಡ ರೀತಿ ಬೇಸರವಾಗುತ್ತಿದೆ ಎಂದು ಹೇಳಿರುವ ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹ್‌ಝಾದ್, ಭಾರತದಲ್ಲಿ ಆಟಗಾರರಿಗೆ ಸಿಗುವ ಬೆಂಬಲ ಹಾಗೂ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

2019ರಲ್ಲಿ ತಮ್ಮ 17ನೇ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶೆಹ್‌ಝಾದ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಅಗ್ರ ಕ್ರಮಾಂಕದ ಆಟಗಾರನಾಗಿ ಗಮನ ಸೆಳೆದಿದ್ದರು. ಆದರೆ ಕೆಲವೇ ಕೆಲವು ಕೆಟ್ಟ ಇನ್ನಿಂಗ್ಸ್ ಅವರನ್ನು ಟೆಸ್ಟ್ ಹಾಗೂ ಓಡಿಐ ತಂಡದಿಂದ ಕೈಬಿಡುವಂತೆ ಮಾಡಿತ್ತು. ಇದನ್ನೂ ಓದಿ: ಔಟ್ ಮಾಡಿದ ಬೌಲರ್‌ಗೆ ಮಧ್ಯದ ಬೆರಳು ತೋರಿಸಿದ CSK ಆಟಗಾರ – ಟಿಎನ್‍ಪಿಎಲ್‍ನಲ್ಲಿ ಕಿರಿಕ್

ಟಿ20 ಕ್ರಿಕೆಟ್‌ಗೆ ಸೂಕ್ತರಾಗುವ ಅವರನ್ನು ಇನ್ನಷ್ಟು ದಿನಗಳ ಕಾಲ ಆಡಿಸಬಹುದಾಗಿತ್ತು. ಆದರೆ 2019ರಲ್ಲಿ ಮತ್ತೊಮ್ಮೆ ಅವರನ್ನು ತಂಡದಿಂದ ಹೊರದಬ್ಬಲಾಯಿತು. ಅಂದಿನಿಂದ ಬಲಗೈ ಬ್ಯಾಟ್ಸ್‌ಮನ್‌ ಪಾಕಿಸ್ತಾನ ತಂಡದಲ್ಲಿ ಕಾಣಿಸುತ್ತಿಲ್ಲ. ಕೇವಲ ದೇಶಿ ಕ್ರಿಕೆಟ್ ಆಡಿಕೊಂಡಿದ್ದಾರೆ.

ತಮ್ಮ ಕ್ರಿಕೆಟ್ ವೃತ್ತಿ ಜೀವನದ ಆರಂಭದಲ್ಲಿ ನನ್ನ ಬ್ಯಾಟಿಂಗ್ ಅನ್ನು ವಿರಾಟ್ ಕೊಹ್ಲಿಗೆ ಅಭಿಮಾನಿಗಳು ಹೋಲಿಸಿದ್ದರು ಎಂದೂ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಫಿಫಾ ವಿಶ್ವಕಪ್ ವೇಳೆ ಸೆಕ್ಸ್‌ ಮಾಡಿದ್ರೆ 7 ವರ್ಷ ಜೈಲು!

ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣದ ಕುರಿತು ಮಾತನಾಡಿರುವ ಅವರು, ನನ್ನ ವೈಫಲ್ಯಗಳ ಬಗ್ಗೆ ಪಿಸಿಬಿ ಅಧಿಕಾರಿಗಳು ಮುಖಾಮುಖಿಯಾಗಿ ಕುಳಿತು ಚರ್ಚಿಸಬಹುದಿತ್ತು. ನಾನು ಸವಾಲುಗಳನ್ನು ಸ್ವೀಕರಿಸಲು ಸಿದ್ಧನಿದ್ದೆ. ತದನಂತರ ಯಾರದು ತಪ್ಪು? ಯಾರದು ಸರಿ ಎಂದು ತಿಳಿಯುತ್ತಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಆದರೆ ವಖಾರ್ ಯೂನಿಸ್ ಅವರ ಮಾತುಗಳು ನನಗೆ ತಂಬಾ ನೋವು ಕೊಟ್ಟಿದ್ದವು. ವಿಶೇಷವಾಗಿ ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದಾಗ ಇದು ಸಿಕ್ಕಾಪಟ್ಟೆ ಕಾಡಿತ್ತು. ನನ್ನನ್ನು ತಂಡದಿಂದ ಕೈಬಿಡಲು ಅವರು ಮೊದಲೇ ರೂಪಿಸಿದ್ದ ಯೋಜನೆ ಇದಾಗಿತ್ತು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಒಂದೇ ಕಲ್ಲಿನಲ್ಲಿ ಎರಡು ಪಕ್ಷಿಗಳನ್ನು ಕೊಲ್ಲುವುದು ಅವರ ಉದ್ದೇಶವಾಗಿತ್ತು ಎಂದು ಅಹ್ಮದ್ ಶೆಹ್‌ಝಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Live Tv

Leave a Reply

Your email address will not be published.

Back to top button