– ಸರ್ಕಾರದ ಆತುರದ ನಿರ್ಧಾರ ಸರಿಯಲ್ಲ ಎಂದ ಸಂಸದ
ರಾಮನಗರ: ಇದು ಜಾತ್ಯಾತೀತ ರಾಷ್ಟ್ರ, ಹಾಗಾಗಿ ಜಾತಿಗಣತಿಗೆ (Caste Census) ಯಾವುದೇ ಮಹತ್ವ ಇಲ್ಲ ಎಂದು ಸಂಸದ ಡಾ.ಮಂಜುನಾಥ್ (Dr Manjunath) ಹೇಳಿದ್ದಾರೆ.
ಸರ್ಕಾರ ಜಾತಿಗಣತಿ ವರದಿ ಸ್ವೀಕಾರಕ್ಕೆ ಮುಂದಾಗಿರುವ ವಿಚಾರದ ಕುರಿತು ರಾಮನಗರದಲ್ಲಿ (Ramanagara) ಮಾತನಾಡಿದ ಅವರು, ಇಂದು ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗುತ್ತಿದೆ. ನಮ್ಮ ಸಂವಿಧಾನವೇ ಜಾತಿ ವ್ಯವಸ್ಥೆ ಬೇಡ ಎಂದು ಹೇಳುತ್ತದೆ. ಇಂತಹ ಸಂದರ್ಭದಲ್ಲಿ ಜಾತಿಗಣತಿ ಯಾಕೆ ಬೇಕು ಎಂದು ಗೊತ್ತಾಗುತ್ತಿಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಈ ವರ್ಷ 4,930 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ
ಸಾಮಾಜಿಕ ಹಾಗೂ ಶೈಕ್ಷಣಿಕ ಮಟ್ಟದ ಬಗ್ಗೆ ಸಮೀಕ್ಷೆ ಮಾಡಿ. ಆದರೆ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸುವ ಕೆಲಸ ಮಾಡಬೇಡಿ. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಎಲ್ಲರನ್ನೂ ಮೇಲೆತ್ತುವ ಕೆಲಸ ಆಗಬೇಕು. ಏಕಾಏಕಿ ಜಾತಿಗಣತಿ ಸ್ವೀಕಾರ ಮಾಡುವುದಕ್ಕಿಂತ ಮೊದಲು ಚರ್ಚೆ ಆಗಬೇಕು. ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ಚರ್ಚೆ ಮಾಡಬೇಕು. ತಜ್ಞರು, ಚಿಂತಕರು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು. ಶಾಸಕಾಂಗ ಸಮಿತಿ ರಚನೆ ಮಾಡಿ ಈ ಬಗ್ಗೆ ಪರಿಶೀಲನೆ ಮಾಡಬೇಕು. ಸರ್ಕಾರದ ಆತುರದ ನಿರ್ಧಾರ ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಮೆಟ್ರೋ ಎಡವಟ್ಟು – ಮೆಟ್ರೋ ಸ್ಟೇಷನ್ ಫುಲ್ ರಷ್