Connect with us

ಮಹದೇವ ಪ್ರಸಾದ್ ಅವ್ರ ಕೆಲ್ಸಕ್ಕೆ ಜನ ನೀಡಿದ ಕಾಣಿಕೆಯಿದು: ಖಾದರ್

ಮಹದೇವ ಪ್ರಸಾದ್ ಅವ್ರ ಕೆಲ್ಸಕ್ಕೆ ಜನ ನೀಡಿದ ಕಾಣಿಕೆಯಿದು: ಖಾದರ್

ಗುಂಡ್ಲುಪೇಟೆ: ಪಕ್ಷದ ಪ್ರಾಮಾಣಿಕ ಕೆಲಸದಿಂದ ಜನ ಇಂದು ಕಾಂಗ್ರೆಸ್‍ಗೆ ಮತ ಹಾಕಿ ಗೆಲ್ಲಿಸಿದ್ದಾರೆ ಅಂತಾ ಆಹಾರ ಮತ್ತು ನಾಗರಿಕ ಪೊರೈಕೆ ಸರಬರಾಜು ಸಚಿವ ಯು ಟಿ ಖಾದರ್ ಹೇಳಿದ್ದಾರೆ.

ಎರಡೂ ಕ್ಷೇತ್ರಗಳ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಜನಪರ ಯೋಜನೆಗಳು, ಸಚಿವ, ಅಧ್ಯಕ್ಷರ ವಿಶೇಷವಾದ ಸಹಕಾರ ಹಾಗೂ ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಸಚಿವರು, ಶಾಸಕ ಮಿತ್ರರು, ಜಿಲ್ಲಾ ಪಂಚಾಯತ್ ಸದಸ್ಯರ ಪ್ರಾಮಾಣಿಕ ಕೆಲಸದಿಂದ ಇಂದು ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದರು.

ಸ್ಥಳೀಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರು, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು, ಗ್ರಾಮ, ನಗರಸಭೆ ಸದಸ್ಯರು ಎಲ್ಲರೂ ಒಗ್ಗಟಾಗಿ ಒಂದೇ ಕುಟುಂಬದಂತೆ ಕೆಲಸ ಮಾಡಿದರ ಫಲಿತಾಂಶ ಇದಾಗಿದೆ. ಡಾ. ಮಹದೇವ ಪ್ರಸಾದ್ ಅವರು ಮಾಡಿದ ಕೆಲಸಕ್ಕೆ ಈ ಕ್ಷೇತ್ರದ ಜನರು ಕೊಟ್ಟಂತಹ ವಿಶೇಷ ಕಾಣಿಕೆ ಇದಾಗಿದೆ ಅಂತಾ ಹೇಳಿದ್ರು.

ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಡಾ. ಗೀತಾ ಮಹದೇವಪ್ರಸಾದ್ ಈ ಕ್ಷೇತ್ರದ ಗೌರವನ್ನು ಇನ್ನಷ್ಟು ಹೆಚ್ಚು ಮಾಡಲು ಮುಖ್ಯಮಂತ್ರಿಗಳು ಹಾಗೂ ಅಧ್ಯಕ್ಷರು ಎಲ್ಲರೂ ಅವರಿಗೆ ಸಹಕಾರ ಕೊಡ್ತಾರೆ. ಮಾನ್ಯ ಸಿದ್ದರಾಮಯ್ಯ ಅವರು ಯಾವೆಲ್ಲಾ ಯೋಜನೆಗಳನ್ನು ಜಾರಿಗೆ ತಂದದ್ದಾರೋ, ಅವುಗಳ ಅಭಿವೃದ್ಧಿಗೆ ಈ ಜನತೆ ತೀರ್ಮಾನ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಗುಂಡ್ಲುಪೇಟೆಯ ಸರ್ವರಿಗೂ, ಸರ್ವ ಮತದಾರರಿಗೂ ಹಾಗೂ ಕಾರ್ಯಕರ್ತರಿಗೂ ಅಭಿನಂದನೆ ತಿಳಿಸಿದ್ರು.

ಗುಂಡ್ಲುಪೇಟೆಯಲ್ಲಿ ಅಂತಿಮ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಾ. ಗೀತಾ ಮಹದೇವ ಪ್ರಸಾದ್ ಭರ್ಜರಿ ಜಯ ಗಳಿಸಿದ್ದಾರೆ. ಇದೀಗ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ.

Advertisement
Advertisement