ಕನ್ನಡದಲ್ಲೂ ನಟಿಸಿರುವ ಈ ನಟಿ ಮಕ್ಕಳ ಚಿಕಿತ್ಸೆಗೆ 67 ಲಕ್ಷ ದಾನ

Advertisements

ಸ್ಯಾಂಡಲ್ ವುಡ್ ನಲ್ಲಿ ತೆರೆ ಕಂಡಿರುವ ಐರಾವತ ಸಿನಿಮಾದ ನಾಯಕಿ, ಬಾಲಿವುಡ್ ನಟಿ ಮತ್ತು ಮಾಡೆಲ್ ಊರ್ವಶಿ ರೌಟೆಲಾ ಮತ್ತೆ ಸುದ್ದಿಗೆ ಬಂದಿದ್ದಾರೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಹತ್ತು ಹಲವು ಬಗೆಯಲ್ಲಿ ಸಹಾಯ ಮಾಡಿದ್ದ ಈ ನಟಿ ಇದೀಗ ಮಕ್ಕಳ ಸೀಳು ತುಟಿ ಚಿಕಿತ್ಸೆಗಾಗಿ ಬರೋಬ್ಬರಿ 67 ಲಕ್ಷ ರೂಪಾಯಿಯನ್ನು ದಾನ ಮಾಡಿದ್ದಾರೆ. ಮಾಡೆಲಿಂಗ್ ನಿಂದ ಬಂದ ಹಣದಲ್ಲಿ ಅವರು ಪ್ರತಿ ಸಾರಿಯೂ ಒಂದಿಲ್ಲೊಂದು ರೀತಿಯಲ್ಲಿ ಸಹಾಯ ಮಾಡುತ್ತಲೇ ಇರುತ್ತಾರೆ.

ಸಿನಿಮಾಗಳಿಗಿಂತ ಮಾಡೆಲಿಂಗ್ ಜಗತ್ತಿನಲ್ಲಿ ಹೆಚ್ಚು ಪ್ರಸಿದ್ಧ ಹೊಂದಿರುವ ಊರ್ವಶಿ, ಸಾಕಷ್ಟು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ದುಬೈನಲ್ಲಿ ಬಹುಬೇಡಿಕೆಯ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಮಾಡೆಲಿಂಗ್ ಜಗತ್ತಿನ ಜೊತೆ ಜೊತೆಗೆ ಎನ್.ಜಿ.ಓ ಗಳ ರಾಯಭಾರಿಯಾಗಿಯೂ ಉಚಿತವಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಆ ಎನ್.ಜಿ.ಓಗಳಿಗೆ ತಾವು ದುಡಿದ ಹಣವನ್ನೂ ಕೊಡುತ್ತಾರೆ. ಇದನ್ನೂ ಓದಿ:ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಫ್ಯಾಶನ್‌ ಡಿಸೈನರ್‌ ಮಸಾಬ ಗುಪ್ತಾ

Advertisements

ಸದ್ಯ ಸ್ಮೈಲ್ ಟ್ರೈನ್ ಹೆಸರಿನ ಎನ್.ಜಿ.ಓ ಗೆ ರಾಯಭಾರಿ ಆಗಿರುವ ಊರ್ವಶಿ, ಇದೊಂದು ಸೀಳು ತುಂಟಿ ಹೊಂದಿರುವ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವ ಸಂಸ್ಥೆ. ಎರಡು ದಶಕಗಳಿಂದಲೂ ಇದು ಈ ಕೆಲಸವನ್ನು ಮಾಡುತ್ತಿದೆ. ಹಾಗಾಗಿ ಇದರೊಂದಿಗೆ ಕೈ ಜೋಡಿಸಿರುವ ರೌಟೆಲಾ ತನ್ನ ದುಡಿಮೆಯಿಂದ ಬಂದ ಹಣದಲ್ಲಿ 67 ಲಕ್ಷ ದೇಣಿಗೆ ನೀಡಿ, ಆ ಮಕ್ಕಳ ಮೊಗದಲ್ಲಿ ನಗು ಕಾಣಲು ಕಾರಣರಾಗಿದ್ದಾರೆ. ಈ ಹಣದಿಂದ ಇನ್ನೂರಕ್ಕೂ ಹೆಚ್ಚು ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಬಹುದಾಗಿದೆ.

Live Tv

Advertisements
Exit mobile version