ಲಕ್ನೋ: 10 ಅಡಿ ಉದ್ದದ ಸುರಂಗ (Tunnel) ಕೊರೆದು ಬ್ಯಾಂಕ್‍ನಲ್ಲಿದ್ದ 1 ಕೋಟಿ ಮೌಲ್ಯದ ಚಿನ್ನಾಭರಣ (Gold) ದೋಚಿದ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ (Kanpur) ನಡೆದಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಾನುತಿ ಶಾಖೆಯ ಪಕ್ಕದಲ್ಲಿರುವ ಖಾಲಿ ಜಾಗದಿಂದ ಖದೀಮರು (Thieves) 4 ಅಡಿ ಅಗಲದ ಸುರಂಗವನ್ನು ಅಗೆದಿದ್ದಾರೆ. ಅದಾದ ಬಳಿಕ 10 ಅಡಿ ಉದ್ದದ ಸುರಂಗದ ಮೂಲಕ ಬ್ಯಾಂಕ್‍ನ ವಾಲ್ಟ್‌ಗೆ ಪ್ರವೇಶಿಸಿದ್ದಾರೆ. ಬ್ಯಾಂಕ್‍ನಲ್ಲಿದ್ದ 1.8 ಕೆಜಿಗಿಂತಲೂ ಹೆಚ್ಚು ತೂಕವಿದ್ದ 1 ಕೋಟಿ ಮೌಲ್ಯದ ಚಿನ್ನದ ಪೆಟ್ಟಿಗೆಯನ್ನು ದೋಚಿದ್ದಾರೆ. ಆದರೆ 32 ಲಕ್ಷ ರೂ. ನಗದು ಪೆಟ್ಟಿಗೆಯನ್ನು ತೆರೆಯಲು ಸಾಧ್ಯವಾಗದಿದ್ದರಿಂದ ಅದನ್ನು ಹಾಗೇ ಅಲ್ಲಿಟ್ಟು ಹೋಗಿದ್ದಾರೆ.
Advertisement
Advertisement
ಅಧಿಕಾರಿಗಳು ಬ್ಯಾಂಕ್‍ಗೆ ಬಂದಾಗ ಈ ಘಟನೆ ನಡೆದಿರುವುದನ್ನು ಗಮನಿಸಿದ್ದಾರೆ. ಜೊತೆಗೆ ಸುರಂಗ ತೋಡಿರುವುದರ ಬಗ್ಗೆಯೂ ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿ – ಪೊಲೀಸ್ ಇಲಾಖೆಗೆ ಹೆಚ್ಚಿದ ಟೆನ್ಶನ್
Advertisement
Money Heist Kanpur: Thieves dug a tunnel to the strong room of State Bank of India’s Bhauti branch in UP’s Kanpur. They decamped after emptying the entire Gold chest where gold against which loan was taken by customers was kept. pic.twitter.com/5Bn1Enuu1q
— Piyush Rai (@Benarasiyaa) December 23, 2022
Advertisement
ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಪೂರ್ಣ ನಕ್ಷೆಯ ಬಗ್ಗೆ ಚಿರಪರಿಚಿತರಿರುವರೇ ಈ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಅಂಗನವಾಡಿ ಕೇಂದ್ರದ ಆವರಣದಲ್ಲಿ ಹಾವು ಕಚ್ಚಿ ಬಾಲಕ ಸಾವು