ಬೆಂಗಳೂರು: ದೇಶದಾದ್ಯಂತ ಕೊರೊನಾ (Corona) ಭೀತಿ ಆವರಿಸಿದೆ. ಇದರ ಬೆನ್ನಲ್ಲೇ ಪೊಲೀಸ್ (Police) ಇಲಾಖೆಯಲ್ಲೂ ಆತಂಕ ಶುರುವಾಗಿದೆ. ಈ ನಡುವೆ ಹೊಸವರ್ಷ ಕೂಡ ಹತ್ತಿರವಾಗ್ತಿದೆ. ಹೀಗಾಗಿ ಪೊಲೀಸ್ ಇಲಾಖೆ ಹೊಸ ರೂಲ್ಸ್ ಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲಿದೆ.
Advertisement
Advertisement
ಒಂದು ಕಡೆ ಹೊಸ ವರ್ಷ ಹತ್ತಿರವಾಗುತ್ತಿದೆ. ಮತ್ತೊಂದು ಕಡೆ ಕೊರೊನಾ ಜಾಸ್ತಿ ಆಗೋ ಸೂಚನೆ ಕಾಣ್ತಿದೆ. ಇದ್ರಿಂದ ಜಾಸ್ತಿ ಜನ ಸೇರುವ ಕಡೆಗಳಲ್ಲಿ ಕಡಿವಾಣ ಹಾಕೋಕೆ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಹೊಸವರ್ಷದಂದು (New Year) ಲಕ್ಷಾಂತರ ಜನ ಒಂದೇ ಕಡೆ ಸೇರುವುದರಿಂದ ಕೊರೊನಾ ಸೋಂಕು ಹೆಚ್ಚಾಗುವ ಆತಂಕ ಶುರುವಾಗಿದೆ. ಪಬ್, ಕ್ಲಬ್ ಸೇರಿದಂತೆ ರೆಸ್ಟೋರೆಂಟ್‍ಗಳಿಗೆ ಜಾಸ್ತಿ ಜನ ಸೇರದಂತೆ ಮಾಲೀಕರಿಗೆ ಈಗಾಗಲೇ ಪೊಲೀಸ್ ಇಲಾಖೆ, ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಅನ್ನೋದನ್ನು ಸೂಚಿಸಿದೆ. ಆ ನಿಟ್ಟಿನಲ್ಲಿ ಈಗಾಗಲೇ ಎರಡು ಸುತ್ತಿನ ಸಭೆ ಕೂಡ ನಡೆಸಿದ್ದು, ಕೊರೊನಾ ಭೀತಿಯಲ್ಲಿ ಕೆಲ ರೂಲ್ಸ್ ಜಾರಿಯಾದರೆ ಒಳ್ಳೆಯದು ಅನ್ನೋ ನಿರ್ಧಾರವನ್ನು ವ್ಯಕ್ತಪಡಿಸಿದೆ. ಇದನ್ನೂ ಓದಿ: ಚೀನಾದಲ್ಲಿ ಒಂದೇ ದಿನ 3.7 ಕೋಟಿ ಮಂದಿಗೆ ಸೋಂಕು
Advertisement
Advertisement
ಆದ್ರೆ ಪೊಲೀಸ್ ಇಲಾಖೆಯ ತೀರ್ಮಾನಕ್ಕಿಂತ ಬಿಬಿಎಂಪಿ (BBMP) ಮತ್ತು ಸರ್ಕಾರದ ತೀರ್ಮಾನವೇ ಅಂತಿಮವಾಗಿದ್ದು, ಹೊಸ ರೂಲ್ಸ್ ಬೇಕಾ ಬೇಡವಾ ಅನ್ನೋ ಗೊಂದಲದಲ್ಲಿದೆ. ಅದರಲ್ಲೂ ಬೆಂಗಳೂರಿನ ಕೇಂದ್ರ ವಿಭಾಗ, ಕೋರಮಂಗಲ ವಿಭಾಗ, ಪಬ್, ಬಾರ್, ರೆಸ್ಟೋರೆಂಟ್‍ಗಳಲ್ಲಿ ಸಾವಿರಾರು ಜನ ಸೇರುವುದರಿಂದ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಹೊಸ ವರ್ಷಕ್ಕೆ ಇನ್ನೂ ಒಂದು ವಾರ ಟೈಂ ಇರೋದರಿಂದ, ಸರ್ಕಾರ ಏನು ಮಾರ್ಗಸೂಚಿ ಪ್ರಕಟಿಸತ್ತದೆಯೋ ಅದಕ್ಕೆ ತಕ್ಕಂತೆ ನಾವು ಭದ್ರತೆ ಕೈಗೊಳ್ಳುತ್ತೇವೆ ಅಂತಿದ್ದಾರೆ ಪೊಲೀಸರು. ಇದನ್ನೂ ಓದಿ: ಅಂಗನವಾಡಿ ಕೇಂದ್ರದ ಆವರಣದಲ್ಲಿ ಹಾವು ಕಚ್ಚಿ ಬಾಲಕ ಸಾವು
ಸದ್ಯ ಕೊರೊನಾ ಸಂಬಂಧ ಯಾವುದೇ ಹೊಸ ನಿಯಮ ಜಾರಿ ಆಗಿಲ್ಲ. ಆದ್ರೂ ಪ್ರತಿ ವರ್ಷದಂತೆ ಈ ಬಾರಿಯೂ ಪೊಲೀಸ್ ಇಲಾಖೆ ಭದ್ರತೆ ಹಿನ್ನೆಲೆ ಸೂಕ್ತ ತಯಾರಿಯಲ್ಲಿದೆ. ಕೆಲ ಅಧಿಕಾರಿಗಳು, ಹೊಸವರ್ಷದಂದು ಗುಂಪು ತಡೆದ್ರೆ ಉತ್ತಮ ಅನ್ನೋ ಮಾತು ಹೇಳಿದ್ದಾರೆ. ಆದ್ರೂ ಅಂತಿಮವಾಗಿ ಸರ್ಕಾರದ ತೀರ್ಮಾನಕ್ಕೆ ಬದ್ದ ಅಂತಿದೆ ಪೊಲೀಸ್ ಇಲಾಖೆ.