ಮಂಗಳೂರು: ಕರಾವಳಿಯ ಕಾರಣಿಕ ದೈವ ಕೊರಗಜ್ಜನ (Koragajja Temple) ಕಾಣಿಕೆ ಹುಂಡಿಯನ್ನು (Hundi) ಕಳ್ಳನೊಬ್ಬ ಕದ್ದು ಪರಾರಿಯಾಗಿದ್ದಾನೆ.
ಮಂಗಳೂರು (Mangaluru) ನಗರದ ಮೇರಿಹಿಲ್‍ನ ಕೊರಗಜ್ಜನ ಕಟ್ಟೆಯಲ್ಲಿ ಈ ಕಳ್ಳತನ ನಡೆದಿದೆ. ಕಳ್ಳತನಕ್ಕೂ ಮುನ್ನ ಕೊರಗಜ್ಜನಿಗೆ ಭಕ್ತಿಯಿಂದ ನಮಸ್ಕರಿಸಿದ್ದಾನೆ. ಅಲ್ಲದೇ ಕಟ್ಟೆಗೆ ಮೂರು ಸುತ್ತು ಸುತ್ತಿದ್ದಾನೆ. ಬಳಿಕ ಕಾಣಿಕೆ ಹುಂಡಿಯನ್ನು ಹೊತ್ತೊಯ್ದಿದ್ದಾನೆ. ಇದನ್ನೂ ಓದಿ: ಪಾಕ್ ಸೈನಿಕರಿಂದ 24*7 ಭದ್ರತೆ – ಲಾಹೋರ್‌ನಲ್ಲಿ ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಸಯೀದ್ ಐಷಾರಾಮಿ ಜೀವನ
ಸುತ್ತಮುತ್ತ ಯಾರು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಕಳ್ಳ ಈ ಕೃತ್ಯ ಎಸಗಿದ್ದಾನೆ. ಕಾಣಿಕೆ ಹುಂಡಿ ಕದ್ದೊಯ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮೊಬೈಲ್‌ನಲ್ಲಿ ಮಾತಾಡ್ತ ರೈಲ್ವೇ ಟ್ರ್ಯಾಕ್ ಮೇಲೆ ಹೋದ ಎಂಬಿಎ ವಿದ್ಯಾರ್ಥಿನಿ ರೈಲಿಗೆ ಬಲಿ