ವಿಜಯಪುರ: ಕಳ್ಳನೆಂದು ಭಾವಿಸಿ ವ್ಯಕ್ತಿಯೋರ್ವನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ: ಬ್ರಾಡ್‍ಬ್ಯಾಂಡ್ ಉತ್ತೇಜಿಸಲು ಜನರಿಗೆ ಪ್ರತಿ ತಿಂಗಳು 200 ರೂ. ಕ್ಯಾಶ್‍ಬ್ಯಾಕ್ ನೀಡಿ – ಟ್ರಾಯ್ ಶಿಫಾರಸು
Advertisement
ಇತ್ತೀಚೆಗೆ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಕಳ್ಳರ ಹಾವಳಿ ಕಂಡು ಬಂದಿದೆ. ಕಳ್ಳತನ ಮಾಡುವುದಕ್ಕೆ ಖದೀಮರ ತಂಡವೇ ಗ್ರಾಮಕ್ಕೆ ಬಂದಿದ್ದು, ಐವರು ಕಳ್ಳರು ಗ್ರಾಮದಲ್ಲಿ ತಿರುಗಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಆದರೆ ಕಳ್ಳರ ಕೈಗೆ ಏನು ಸಿಗದೇ ಕೊನೆಗೆ ಗ್ರಾಮದಿಂದ ಕಾಲು ಕಿತ್ತಿದ್ದಾರೆ. ಈ ವೇಳೆ ಕಳ್ಳರ ತಂಡದವನೆಂದು ಭಾವಿಸಿ ಅಂಗಡಿ ಮುಂದೆ ಮಲಗಿದ್ದ ವ್ಯಕ್ತಿಯೋರ್ವನಿಗೆ ಗ್ರಾಮಸ್ಥರು ಏಕಾಏಕಿ ಥಳಿಸಿ ನಂತರ ಆತನನ್ನು ಝಳಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
Advertisement
Advertisement
ಬಳಿಕ ಪೊಲೀಸರ ವಿಚಾರಣೆ ವೇಳೆ ವ್ಯಕ್ತಿ ಕಳ್ಳ ಅಲ್ಲ, ಬದಲಾಗಿ ಪೇಂಟರ್ ಎಂಬ ಸತ್ಯ ಬಹಿರಂಗಗೊಂಡಿದೆ. ಥಳಿತಕೊಳಗಾದ ವ್ಯಕ್ತಿ ಬಗ್ಗೆ ಮಾಹಿತಿ ಪಡೆದು ಕೊನೆಗೆ ಪೊಲೀಸರು ಬಿಟ್ಟು ಕಳಿಸಿದ್ದಾರೆ. ಇದೀಗ ಕಳ್ಳರ ಓಡಾಟದಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ:ನೀನು ಹುಟ್ಟಿದ್ಮೇಲೆ ಸೌಂದರ್ಯ ಹಾಳಾಯ್ತು – ಚಪ್ಪಲಿಯಿಂದ ಮಗುವಿನ ಮೇಲೆ ತಾಯಿ ಹಲ್ಲೆ
Advertisement