– ಪಕ್ಷಕ್ಕೆ ನಾನು ಅನಿವಾರ್ಯ ಅಲ್ಲ, ಪಕ್ಷ ನನಗೆ ಅನಿವಾರ್ಯ ಎಂದ ಮಾಜಿ ಸಂಸದ
ಬೆಂಗಳೂರು: ಅಧಿಕಾರ, ಚುನಾವಣೆ ದೃಷ್ಟಿಯಿಂದ ನಾನಿಲ್ಲ. ಮುಖಂಡರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ. ಪಕ್ಷಕ್ಕೆ ನಾನು ಅನಿವಾರ್ಯ ಅಲ್ಲ, ಪಕ್ಷ ನನಗೆ ಅನಿವಾರ್ಯ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ (D K Suresh) ಹೇಳಿದ್ದಾರೆ.
Advertisement
ಬೆಂಗಳೂರಿನಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶನಿವಾರ ಚನ್ನಪಟ್ಟಣ (Channapatna) ಕಾರ್ಯಕರ್ತರು ಹಾಗೂ ಮುಖಂಡರ ಸಭೆ ನಡೆದಿದ್ದು, ಸುದೀರ್ಘವಾಗಿ ಚರ್ಚೆ ಆಗಿದೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧ ಎಂದಿದ್ದಾರೆ. ನನ್ನ ಮೇಲೂ ಒತ್ತಡ ಇದೆ, ನಾನು ಅಭ್ಯರ್ಥಿ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೆನೆ. ಪಕ್ಷದ ಶಿಸ್ತಿನ ಸಿಪಾಯಿ ನಾನು, ನನ್ನ ಆಚಾರ ವಿಚಾರಗಳನ್ನ ಮುಖಂಡರ ಗಮನಕ್ಕೆ ತರುತ್ತೇನೆ. ಅಧಿಕಾರ, ಚುನಾವಣೆ ದೃಷ್ಟಿಯಿಂದ ನಾನಿಲ್ಲ. ಮುಖಂಡರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ. ಪಕ್ಷಕ್ಕೆ ನಾನು ಅನಿವಾರ್ಯ ಅಲ್ಲ, ಪಕ್ಷ ನನಗೆ ಅನಿವಾರ್ಯ ಎಂದು ಹೇಳಿದರು. ಇದನ್ನೂ ಓದಿ: ಸುದೀಪ್ ತಾಯಿಗೆ ಅಂತಿಮ ನಮನ ಸಲ್ಲಿಸಿದ ಧ್ರುವ ಸರ್ಜಾ,ಗಣೇಶ್
Advertisement
Advertisement
ಕಾರ್ಯಕರ್ತರು ನನ್ನ ಮೇಲೆ ಇಟ್ಟಿರುವ ಗೌರವಕ್ಕೆ ನಾನು ಸದಾ ಋಣಿಯಾಗಿದ್ದೇನೆ. ನಾನು ಕೂಡ ಕಾರ್ಯಕರ್ತರಿಗೆ ಭರವಸೆ ನೀಡಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದಿದ್ದೇನೆ. ಒಂದು ವೇಳೆ ಪಕ್ಷ ನನ್ನನ್ನ ಆಯ್ಕೆ ಮಾಡಿದರೆ ನಾನು ನನ್ನ ಅಭಿಪ್ರಾಯ ತಿಳಿಸುತ್ತೇನೆ. ನಮ್ಮ ಮುಖಂಡರ ಕಾರ್ಯಕರ್ತರು ಚುನಾವಣೆಗೆ ಸಿದ್ಧವಾಗಿದ್ದಾರೆ. ಬಿಜೆಪಿ ಎರಡು ಅಭ್ಯರ್ಥಿ ಘೋಷಣೆ ಮಾಡಿ, ಒಂದು ಜೆಡಿಎಸ್‌ಗೆ ಬಿಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ. 3ನೇ ಅಭ್ಯರ್ಥಿ ಜೆಡಿಎಸ್‌ಗೆ ಕೊಟ್ಟಿದ್ದಾರೆ. ಯಾರು ತೀರ್ಮಾನ ಮಾಡುತ್ತಾರೆ? ಹೇಗೆ ಮಾಡುತ್ತಾರೆ? ಅವರ ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದು ಎಂದರು. ಇದನ್ನೂ ಓದಿ: ಬೆಳಗಾವಿ| ಉದ್ಯಮಿ ಹತ್ಯೆ ಕೇಸ್ – 13 ಹಾರ್ಡ್ ಡಿಸ್ಕ್‌ಗಳಲ್ಲಿ ಸಂತೋಷ್‍ನ ಖಾಸಗಿ ವೀಡಿಯೋ ಪತ್ತೆ!
Advertisement
ಎರಡು ಸೀಟ್ ಬಿಜೆಪಿ ಅಭ್ಯರ್ಥಿಗಳಿದ್ದಾರೆ. ಚನ್ನಪಟ್ಟಣಕ್ಕೆ ಕುಮಾರಸ್ವಾಮಿ (H D Kumaraswamy) ರಾಜೀನಾಮೆ ನೀಡಿದ್ದಾರೆ. ಅದು ಮೈತ್ರಿ ಪಕ್ಷಕ್ಕೆ ಬಿಟ್ಟ ವಿಚಾರ. ನಮ್ಮ ಪಕ್ಷ ಸದೃಢವಾಗಿದೆ, ಮುಕ್ತ ಮನಸ್ಸಿನಿಂದ ಪಕ್ಷ ಕೆಲಸ ಮಾಡುತ್ತಿದೆ. ಈಗಾಗಲೇ ಬಿಜೆಪಿ ಜೆಡಿಎಸ್‌ನಿಂದಲೂ ನಮ್ಮ ಪಕ್ಷಕ್ಕೆ ಬಂದಿದ್ದು, ಮತ್ತಷ್ಟು ಮಂದಿ ಬರುತ್ತಾರೆ ಎಂದು ನುಡಿದರು. ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ – ಬಿಜೆಪಿಯ 99 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್
ಕಾಂಗ್ರೆಸ್ (Congress) ಸರ್ಕಾರ ಐದು ವರ್ಷ ಪೂರೈಸಲ್ಲ ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಕೂಡ ಕೇಂದ್ರ ಮಂತ್ರಿಯಾಗಿ ಇರುವುದಿಲ್ಲ. ಒಂದು ವರ್ಷ ಆರು ತಿಂಗಳ ಒಳಗೆ ಅವನು ಮನೆಗೆ ಹೋಗುತ್ತಾನೆ. ಅವನು ಯಾವ ಕಾರಣಕ್ಕೆ ಹಾಗೇ ಹೇಳಿದ? ಅವನು ಯಾವ ಆಧಾರದ ಮೇಲೆ ಹೇಳಿದ? ನಮ್ಮ ಸರ್ಕಾರ ಇರಲ್ಲ ಅಂದ ಮೇಲೆ ಅವನೂ ಇರಲ್ಲ, ಅವನ ಸರ್ಕಾರವೂ ಇರಲ್ಲ. ಕೇಂದ್ರ ಮಂತ್ರಿ ಆಗಿ ಘನತೆಯಿಂದ ತೂಕದಿಂದ ಮಾತನಾಡಬೇಕು. ನನಗೂ ಎಲ್ಲಾ ಭಾಷೆ ಮಾತನಾಡಲು ಬರುತ್ತದೆ. ಅದಕ್ಕೆ ಇವತ್ತು ಟ್ರಯಲ್ ಕೊಟ್ಟಿದ್ದೇನೆ. ಕುಮಾರಸ್ವಾಮಿಯವರು ಬೆಳಗ್ಗೆ ಒಂದು ಹೇಳುತ್ತಾರೆ, ಸಂಜೆ ಒಂದು ಹೇಳುತ್ತಾರೆ. ಜನರೂ ಕೂಡ ಅದನ್ನು ಮನರಂಜನೆಯಾಗಿ ತೆಗೆದುಕೊಂಡಿದ್ದಾರೆ. ಅವರು ಯಾವತ್ತೂ ಗಂಭೀರ ಅಲ್ಲ, ಅವರು ಶಿವಕುಮಾರ್‌ನ ಬಯ್ಯೋವಾಗ ಮಾತ್ರ ಗಂಭೀರವಾಗಿ ಇರುತ್ತಾರೆ. ಎಲ್ಲವನ್ನೂ ಕಾದು ನೋಡೋಣ ಗುಡುಗಿದರು. ಇದನ್ನೂ ಓದಿ: 2 ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳ ಫಸಲು ಹಾಳು – ಅನ್ನದಾತರು ಕಂಗಾಲು
ನಟ ಸುದೀಪ್ (Sudeep) ತಾಯಿ ನಿಧನಕ್ಕೆ ಸಂತಾಪ ಸೂಚಿಸಿ, ಸುದೀಪ್ ಹಾಗೂ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಸುದೀಪ್ ಚಿತ್ರರಂಗದಲ್ಲಿ ಹೆಸರು ಮಾಡಲು ಮಾತೃಶ್ರೀ ಅವರ ದಾರಿ ಕಾರಣವಾಗಿದೆ. ಆ ಮಾರ್ಗದಲ್ಲೆ ಸುದೀಪ್ ನಡೆಯುತ್ತಿದ್ದಾರೆ. ಅವರ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದರು. ಇದನ್ನೂ ಓದಿ: ಸುದೀಪ್ ತಾಯಿ ಅಂತಿಮ ದರ್ಶನದಲ್ಲಿ ಭಾಗಿಯಾದ ‘ಬಿಗ್ ಬಾಸ್’ ಸ್ಪರ್ಧಿಗಳು