ಮಾಸ್ಕೋ: ಉಕ್ರೇನ್‌ನಲ್ಲಿ (Ukraine) ಯುದ್ಧದ ಸ್ಥಿತಿ ನಿರ್ಮಾಣವಾಗಲು ಪಾಶ್ಚಿಮಾತ್ಯರೇ ಕಾರಣ. ಸಂಘರ್ಷದ ಬೆಂಕಿಗೆ ತುಪ್ಪ ಸುರಿದವರು ಅವರೇ. ಅದರಿಂದ ಸಂತ್ರಸ್ತರಾದವರು, ಎಲ್ಲದಕ್ಕೂ ಪಾಶ್ಚಿಮಾತ್ಯ ಗುಂಪೇ ಕಾರಣ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಪರೋಕ್ಷವಾಗಿ ಅಮೆರಿಕಾವನ್ನ ದೂಷಿಸಿದ್ದಾರೆ.
ಅಮೆರಿಕ (USA) ಅಧ್ಯಕ್ಷ ಜೋ ಬೈಡನ್ (Joe Biden) ಉಕ್ರೇನ್‌ಗೆ ಅಚ್ಚರಿ ಭೇಟಿ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಉಕ್ರೇನ್ ಮೇಲಿನ ಸಮರ ಶುರುವಾಗಿ ಒಂದು ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ರಷ್ಯಾ ಅಸೆಂಬ್ಲಿಯಲ್ಲಿ ಮಾತನಾಡಿದ ಪುಟಿನ್, ಪಾಶ್ಚಿಮಾತ್ಯರು ಸ್ಥಳೀಯ ಬಿಕ್ಕಟ್ಟನ್ನು ಜಾಗತಿಕ ಸಂಘರ್ಷವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ತಕ್ಕ ರೀತಿಯಲ್ಲಿ ಉತ್ತರಿಸಲಿದ್ದೇವೆ. ರಾಷ್ಟ್ರದ ಉಳಿಯುವಿಕೆಯ ಕುರಿತಾಗಿ ನಾವು ಮಾತನಾಡುತ್ತಿದ್ದೇವೆ ಎಂದು ಪುಟಿನ್ ಎಚ್ಚರಿಸಿದ್ದಾರೆ.
Advertisement
???? #LIVE: President Vladimir Putin addresses the Federal Assembly (Russia’s two-chamber Parliament). https://t.co/iQgxwU85U4
— MFA Russia ???????? (@mfa_russia) February 21, 2023
Advertisement
ಉಕ್ರೇನ್ ಜೊತೆಗೆ ಯುದ್ಧ ತಡೆಯಲು ರಷ್ಯಾ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿದೆ. ಶಾಂತಿಯುತ ಮಾತುಕತೆಯನ್ನೂ ನಡೆಸುತ್ತಿದೆ. ಆದ್ರೆ ನಮ್ಮ ಬೆನ್ನ ಹಿಂದೆಯೇ ನಿಂತು ಅನೇಕ ತಂತ್ರಗಳನ್ನು ಎಣೆಯಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಪ್ರಶ್ನೆಪತ್ರಿಕೆಯಲ್ಲಿ ಸಹೋದರ-ಸಹೋದರಿ ಕುರಿತು ಅಶ್ಲೀಲ ಪ್ರಶ್ನೆ; ಪಾಕ್ ವಿವಿ ವಿರುದ್ಧ ಆಕ್ರೋಶ
Advertisement
ಪಾಶ್ಚಿಮಾತ್ಯರು ಜಗತ್ತಿನಾದ್ಯಂತ ಗೊಂದಲ ಮತ್ತು ಯುದ್ಧವನ್ನು ಬಿತ್ತುವ ಕೆಲಸ ಮಾಡಿದರು. ಪಾಶ್ಚಿಮಾತ್ಯರ ಬೆಂಬಲ ಪಡೆದ ಉಕ್ರೇನ್ ಕ್ರಿಮಿಯಾ ಮೇಲೆ ಆಕ್ರಮಣಕ್ಕೆ ಯೋಜನೆ ರೂಪಿಸಿತ್ತು. ಪಾಶ್ಚಿಮಾತ್ಯರು ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸೇನೆಯ ದೃಷ್ಟಿಯಲ್ಲಿ ಉಕ್ರೇನ್‌ನ್ನು ವಶಕ್ಕೆ ಪಡೆದರು. ಕೀವ್ ಪ್ರಭುತ್ವದಲ್ಲಿ ಸ್ವತಃ ಉಕ್ರೇನ್ ಜನರೇ ಒತ್ತೆಯಾಳುಗಳಾದರು ಎಂದು ಪುಟಿನ್ ಹೇಳಿದ್ದಾರೆ.
Advertisement
1991ರಲ್ಲಿ ಸೋವಿಯತ್ ಒಕ್ಕೂಟದ ವಿಭಜನೆಯಾದ ದಿನಗಳಿಂದಲೂ ಉಕ್ರೇನ್ ಬಿಕ್ಕಟ್ಟು ಮುಂದುವರಿದಿದೆ. ಯುದ್ಧದ ಆರಂಭದಿಂದ ಈವರೆಗೂ ರಷ್ಯಾದ ಪಡೆಗಳು ಪ್ರಮುಖವಾಗಿ ಮೂರು ಬಾರಿ ಯುದ್ಧ ಭೂಮಿಯಿಂದ ಹಿಂದಕ್ಕೆ ಮರಳಿವೆ. ಆದರೆ ಈಗಲೂ ಉಕ್ರೇನ್‌ನ 5ನೇ ಒಂದು ಭಾಗದಷ್ಟು ಪ್ರದೇಶವು ರಷ್ಯಾ ನಿಯಂತ್ರಣದಲ್ಲಿದೆ. ಯುದ್ಧದಲ್ಲಿ ಸಾವಿರಾರು ಮಂದಿ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಟರ್ಕಿ-ಸಿರಿಯಾದಲ್ಲಿ ಮತ್ತೆ ಭೂಕಂಪ; 8 ಸಾವು, 290ಕ್ಕೂ ಹೆಚ್ಚು ಮಂದಿಗೆ ಗಾಯ
ಇದೀಗ ವಾಷಿಂಗ್ಟನ್‌ನಲ್ಲಿ ಕೆಲವು ಮಂದಿ ಪರಮಾಣು ಪರೀಕ್ಷೆಯನ್ನು ಪುನರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಹಾಗಾಗಿ ರಷ್ಯಾದ ರಕ್ಷಣಾ ಸಚಿವಾಲಯ ಹಾಗೂ ನ್ಯೂಕ್ಲಿಯರ್ ಕಾರ್ಪೊರೇಷನ್ ಸಹ ರಷ್ಯಾದ ಪರಮಾಣು ಅಸ್ತ್ರಗಳನ್ನು ಪರೀಕ್ಷಿಸಲು ಸಜ್ಜಾಗಬೇಕಿದೆ. ರಷ್ಯಾ-ಅಮೆರಿಕ ನಡುವಿನ ಶಸ್ತ್ರಾಸ್ತ್ರಗಳ ನಿಯಂತ್ರಣ ಒಪ್ಪಂದದಿಂದ (START-ಸ್ಟ್ರಾಟೆಜಿಕ್ ಆರ್ಮ್ಸ್ ರಿಡಕ್ಷನ್ ಟ್ರೀಟಿ) ರಷ್ಯಾ ಅನಿವಾರ್ಯವಾಗಿ ಹಿಂದೆ ಸರಿಯಬೇಕಾಗಿದೆ ಎಂದು ಹೇಳಿದ್ದಾರೆ.
ಹೊಸ ಸ್ಟಾರ್ಟ್ ಒಪ್ಪಂದಕ್ಕೆ 2010ರಲ್ಲಿ ಸಹಿ ಮಾಡಲಾಗಿತ್ತು. 2011ರಲ್ಲಿ ಒಪ್ಪಂದ ಜಾರಿಗೆ ಬಂದಿತು. 2021ರಲ್ಲಿ ಜೋ ಬೈಡನ್ ಯುಎಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ 5 ವರ್ಷಗಳವರೆಗೆ ವಿಸ್ತರಿಸಲಾಯಿತು. ಈ ಒಪ್ಪಂದವು ಅಮೆರಿಕ ಮತ್ತು ರಷ್ಯಾ ನಿಯೋಜಿಸಬಹುದಾದ ಪರಮಾಣು ಸಿಡಿತಲೆಗಳ ಸಂಖ್ಯೆ, ಜಲಾಂತರ್ಗಾಮಿ ಕ್ಷಿಪಣಿಗಳು ಹಾಗೂ ಬಾಂಬರ್‌ಗಳನ್ನು ಮಿತಿಗೊಳಿಸುತ್ತದೆ.
ತಜ್ಞರ ಪ್ರಕಾರ ಸುಮಾರು 6,000 ನ್ಯೂಕ್ಲಿಯರ್ ಸಿಡಿತಲೆಗಳನ್ನು ಹೊಂದಿರುವ ರಷ್ಯಾವು ವಿಶ್ವದಲ್ಲೇ ಅತಿ ದೊಡ್ಡ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ ದೇಶವಾಗಿದೆ. ಆದ್ರೆ ಅಮೆರಿಕ ಭೂಮಿ ಗ್ರಹವನ್ನ ಹಲವು ಬಾರಿ ನಾಶಮಾಡಲು ಸಾಧ್ಯವಾಗುವಂತ ವಿಶ್ವದ ಶೇ.90 ರಷ್ಟು ಪರಮಾಣು ಸಿಡಿತಲೆಗಳನ್ನು ಹೊಂದಿದೆ ಎಂದು ಹೇಳಲಾಗಿದೆ.
ಒಂದು ದಿನದ ಹಿಂದೆಯಷ್ಟೇ ಉಕ್ರೇನ್‌ಗೆ ಅಚ್ಚರಿ ಭೇಟಿ ನೀಡಿದ್ದ ಯುಎಸ್ ಅಧ್ಯಕ್ಷ ಜೋ ಬೈಡನ್ ಉಕ್ರೇನ್ ರಕ್ಷಣೆಗೆ ಭಾರೀ ಶಸ್ತ್ರಾಸ್ತ್ರಗಳ ನೆರವು ನೀಡುವುದಾಗಿ ಶ್ವೇತಭವನದ ಹೇಳಿಕೆಯಲ್ಲಿ ಘೋಷಿಸಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k