ಅಂಕಾರಾ: ಟರ್ಕಿ-ಸಿರಿಯಾ (Turkey – Syria) ಗಡಿಯಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ಸಾವಿನ ಸಂಖ್ಯೆ 8ಕ್ಕೆ ಏರಿದೆ. ವರದಿಯ ಪ್ರಕಾರ ಈ ಭೂಕಂಪದ ತೀವ್ರತೆಯು 6.4ರಷ್ಟಿತ್ತು. ಇದರಿಂದಾಗಿ 294 ಜನರು ಗಾಯಗೊಂಡಿದ್ದು, ಅವರ ಪೈಕಿ 18 ಜನರು ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಸಿರಿಯಾದ ಹಮಾ ಮತ್ತು ಟಾರ್ಟಸ್ ಪ್ರಾಂತ್ಯಗಳಲ್ಲಿ ಭೂಕಂಪ (Earthquake) ಸಂಭವಿಸಿದ ಸಮಯದಲ್ಲಿ ಭಯಭೀತರಾಗಿ ಓರ್ವ ಮಹಿಳೆ ಮತ್ತು ಬಾಲಕಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮುಂಬೈ ದಾಳಿಯ ದುಷ್ಕರ್ಮಿಗಳು ಇನ್ನೂ ಮುಕ್ತವಾಗಿ ಓಡಾಡಿಕೊಂಡಿದ್ದಾರೆ – ಪಾಕ್ ನೆಲದಲ್ಲೇ ಜಾವೇದ್ ಅಖ್ತರ್ ಕಿಡಿ
Advertisement
Advertisement
ಭೂಕಂಪದ ಕೇಂದ್ರಬಿಂದು ಸಿರಿಯಾದ ಗಡಿಯುದ್ದಕ್ಕೂ ಇರುವ ಟರ್ಕಿಯ ಹಟೇ ಪ್ರಾಂತ್ಯದ ಡೆಫ್ನೆ ಪಟ್ಟಣದಲ್ಲಿದೆ. ಜೋಡಾನ್, ಸೈಪ್ರಸ್, ಇಸ್ರೇಲ್, ಲೆಬನಾನ್ ಮತ್ತು ದೂರದ ಈಜಿಪ್ಟ್ ನಲ್ಲೂ ಈ ಭೂಕಂಪದ ಅನುಭವವಾಗಿತ್ತು. ಇದನ್ನೂ ಓದಿ: ಟರ್ಕಿ, ಸಿರಿಯಾದಲ್ಲಿ ಮತ್ತೆ ಭಾರೀ ಭೂಕಂಪ – ಭೂಮಿಯೇ ಹೋಳಾಗೋ ಭೀತಿಯಲ್ಲಿದ್ದಾರೆ ಜನ
Advertisement
ಫೆಬ್ರವರಿ 6ರಂದು 7.8 ತೀವ್ರತೆಯ ಭೂಕಂಪವು ಟರ್ಕಿ ಮತ್ತು ಸಿರಿಯಾ ದೇಶವನ್ನು ಕಂಗೆಡಿಸಿತ್ತು. ಈ ಸಂದರ್ಭದಲ್ಲಿ ಟರ್ಕಿಯ ಹಟೇ ಪ್ರಾಂತ್ಯವು ಅತ್ಯಂತ ಹೆಚ್ಚು ಹಾನಿಗೊಳಗಾಗಿ, ಸಾವಿರಾರು ಕಟ್ಟಡಗಳು ನೆಲಕ್ಕುರುಳಿದ್ದವು. ಎರಡನೇ ಭೂಕಂಪವು ಮತ್ತಷ್ಟು ಹಾನಿಯನ್ನುಂಟು ಮಾಡಿತ್ತು. ಹಟೇ ಪ್ರಾಂತ್ಯದಲ್ಲಿದ್ದ ರಾಜ್ಯಪಾಲರ ಕಚೇರಿಯೂ ಹಾನಿಗೊಳಗಾಗಿದೆ ಎಂದು ವರದಿಗಳು ತಿಳಿಸಿವೆ.
Advertisement
ಫೆಬ್ರವರಿ 6ರಂದು ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಟರ್ಕಿಯಲ್ಲಿ ಕನಿಷ್ಠ 41,156 ಜನರು ಸಾವನ್ನಪ್ಪಿದ್ದಾರೆ. ಭೂಕಂಪದ ಕೇಂದ್ರಬಿಂದು ದಕ್ಷಿಣ ಕಹ್ರಮನ್ನರಸ್ ಪ್ರಾಂತ್ಯದಲ್ಲಿದೆ. ಟರ್ಕಿಯಲ್ಲಿ 11 ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದ್ದು, 1,10,000ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿವೆ.
ಈ ಕುರಿತು ಮಾಹಿತಿ ನೀಡಿದ ವಾಯುವ್ಯ ಸಿರಿಯಾದ ನಾಗರಿಕ ರಕ್ಷಣಾ ಸಂಸ್ಥೆ, ಈ ಭೂಕಂಪದಲ್ಲಿ 190 ಜನರು ಗಾಯಗೊಂಡಿದ್ದಾರೆ. ಅವಶೇಷಗಳಡಿ ಜನರು ಸಿಲುಕಿಕೊಂಡ ಯಾವುದೇ ಪ್ರಕರಣಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k