ಇಸ್ಲಾಮಾಬಾದ್: 2008ರ ನವೆಂಬರ್ 26ರಂದು ಮುಂಬೈನಲ್ಲಿ ಭಯೋತ್ಪಾದನಾ ದಾಳಿ (Mumbai Terror Attack) ನಡೆಸಿದ ದುಷ್ಕರ್ಮಿಗಳು, ಭಾರತ ದೂರು ನೀಡಿದ ಹೊರತಾಗಿಯೂ ಇನ್ನೂ ಪಾಕಿಸ್ತಾನದಲ್ಲಿ (Pakistan) ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ಚಿತ್ರ ಸಾಹಿತಿ ಜಾವೇದ್ ಅಖ್ತರ್ (Javed Akhtar) ಹೇಳಿದ್ದಾರೆ.
Advertisement
ಖ್ಯಾತ ಉರ್ದು ಕವಿ ಫೈಜ್ ಅಹ್ಮದ್ ಅವರ ಸ್ಮರಣಾರ್ಥ ಲಾಹೋರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖ್ತರ್ ಪಾಲ್ಗೊಂಡಿದ್ದರು. ಈ ವೇಳೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, 2008ರ ನವೆಂಬರ್ 26ರಂದು ನಡೆದ ಭೀಕರ ಮುಂಬೈ ದಾಳಿಯನ್ನು ನೆನಪಿಸಿಕೊಂಡರು. ಇದನ್ನೂ ಓದಿ: UPI-PayNow ಲಿಂಕ್ – ಇನ್ನು ಮುಂದೆ ಸಿಂಗಾಪುರದಿಂದ ಸುಲಭವಾಗಿ ಭಾರತಕ್ಕೆ ಹಣ ಕಳುಹಿಸಿ
Advertisement
`ನೀವು ಪಾಕಿಸ್ತಾನಕ್ಕೆ ಹಲವು ಬಾರಿ ಭೇಟಿ ನೀಡಿದ್ದೀರಿ, ಆದ್ರೆ ನೀವು ಹಿಂತಿರುಗುವಾಗ, ಇವರು ಒಳ್ಳೆಯ ಜನ ಅನ್ನಿಸುತ್ತಾ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಒಬ್ಬರನ್ನೊಬ್ಬರು ದೂಷಿಸಬಾರದು. ಅದರಿಂದ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಅಂದು ಮುಂಬೈ ಮೇಲೆ ದಾಳಿ ಹೇಗೆ ನಡೆಯಿತು ಎಂಬುದನ್ನ ನಾವು ನೋಡಿದ್ದೇವೆ. ಆದ್ರೆ ಅವರು ನಿಮ್ಮ ದೇಶದಲ್ಲಿ (ಪಾಕಿಸ್ತಾನ) ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ಹೇಳಿದರು.
Advertisement
Advertisement
ಭಾರತವು ಪಾಕಿಸ್ತಾನಿ ಹಿರಿಯ ಗಾಯಕರಾದ ನುಸ್ರತ್ ಫತೇ ಅಲಿ ಖಾನ್ ಮತ್ತು ಮೆಹದಿ ಹಸನ್‌ಗಾಗಿ ದೊಡ್ಡ ಕಾರ್ಯಕ್ರಮಗಳನ್ನ ಆಯೋಜಿಸಿತ್ತು. ಆದರೆ ಲತಾ ಮಂಗೇಶ್ಕರ್ ಅವರಿಗಾಗಿ ಪಾಕಿಸ್ತಾನ ಯಾವುದೇ ಕಾರ್ಯಕ್ರಮ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಉಕ್ರೇನ್‌ಗೆ ಜೋ ಬೈಡನ್ ಅಚ್ಚರಿ ಭೇಟಿ – ಭಾರೀ ಶಸ್ತ್ರಾಸ್ತ್ರ ನೆರವು ಘೋಷಿಸಿದ US ಅಧ್ಯಕ್ಷ
2008ರ ನವೆಂಬರ್ 26ರಂದು 10 ಪಾಕಿಸ್ತಾನಿ ಭಯೋತ್ಪಾದಕರು (Pakistan Terrorists) ಸಮುದ್ರ ಮಾರ್ಗದ ಮೂಲಕ ಭಾರತ ಪ್ರವೇಶಿಸಿ ಮುಂಬೈಯ 8 ಸ್ಥಳಗಳಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. 18 ಭದ್ರತಾ ಸಿಬ್ಬಂದಿ ಸೇರಿ 166 ಮಂದಿಯನ್ನು ಹತ್ಯೆ ಮಾಡಿದ್ದರು. ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿತ್ತು. ನೂರಾರು ಮಂದಿ ಗಾಯಗೊಂಡರು. ಅಂದಿನ ಭಯೋತ್ಪಾದನಾ ನಿಗ್ರಹ ದಳದ (ATS) ಮುಖ್ಯಸ್ಥ ಹೇಮಂತ್ ಕರ್ಕರೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಂಬೈನ ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ವಿಜಯ್ ಸಲಸ್ಕರ್ ದಾಳಿಯಲ್ಲಿ ಹುತಾತ್ಮರಾಗಿದ್ದರು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k