ಕಾರವಾರ: ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ(Pahalgam Terror Attack) ನಡೆಸಿ ಹಿಂದೂಗಳ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಕಾರವಾರದಲ್ಲಿ ಮೇ 7 ರಂದು ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆ ಕಾರವಾರ ಬಂದ್( ಕರೆ ನೀಡಿತ್ತು. ಆದರೆ, ಇದೀಗ ನಾಳೆ ಬಂದ್ ಇರುವುದಿಲ್ಲ ಎಂದು ಎಸ್.ಪಿ ಎಂ.ನಾರಾಯಣ್ ತಿಳಿಸಿದ್ದಾರೆ.
ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು, ಕಾರವಾರದಲ್ಲಿ ನಾಳೆ ಬಂದ್ ಇರುವುದಿಲ್ಲ. ಸಂಘಟನೆಗಳು ಬಂದ್‌ಗೆ ಕರೆಕೊಟ್ಟಿದ್ದವು. ಸಂಘಟಕರ ಜೊತೆ ಮಾತನಾಡಲಾಗಿದ್ದು, ಬಂದ್ ಇರುವುದಿಲ್ಲ. ಬದಲಾಗಿ ಮೆರವಣಿಗೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕಲ್ಲತ್ತಿಗಿರಿಯಲ್ಲಿ ಧರೆಗುರುಳಿದ ಬೃಹತ್ ಮರ – ಆಟೋ, ಕಾರು ಜಖಂ, ಓರ್ವನ ಕೈ ಮುರಿತ
ಒಂದು ವೇಳೆ ಬಲವಂತವಾಗಿ ಬಂದ್ ಮಾಡಿಸಿದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸುಹಾಸ್ ಹತ್ಯೆಯಲ್ಲಿ ಮುಸ್ಲಿಂ ಹೆಡ್‌ಕಾನ್ಸ್‌ಟೇಬಲ್ ಭಾಗಿಯಾಗಿದ್ದಾರೆಂದು ಅವಹೇಳನ – ಇಬ್ಬರು ಹಿಂದೂ ಮುಖಂಡರ ವಿರುದ್ಧ FIR
ಕಾರವಾರದಲ್ಲಿ ಹಿಂದೂ ಸಂಘಟನೆಗಳು ಮೇ 7 ಕ್ಕೆ ಬಂದ್‌ಗೆ ಕರೆ ಕೊಟ್ಟಿದ್ದರು. ಸದ್ಯ ಸಂಘಟನೆಗಳು ಕೂಡ ಬಂದ್ ಮಾಡುವುದಿಲ್ಲ ಎಂದು ತಿಳಿಸಿದ್ದು, ನಾಳೆ ಕೇವಲ ಮೆರವಣಿಗೆ ಇರಲಿದೆ ಎಂದಿದ್ದಾರೆ.