– ಆಟೋ ಹತ್ತಿದ ಮಹಿಳೆಯ ಚಿನ್ನಾಭರಣ ಕದ್ದ ವಿವಾಹಿತ ಪ್ರೇಮಿಗಳು ಅಂದರ್
ಚಿಕ್ಕಬಳ್ಳಾಪುರ: ಆಟೋ (Auto) ಹತ್ತಿದ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮಾಂಗಲ್ಯ ಸರ ಹಾಗೂ ಚಿನ್ನದ ಕಿವಿ ಓಲೆ ದೋಚಿದ್ದ ಖತರ್ನಾಕ್ ಜೋಡಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು (Doddaballapura City Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಅಂದಹಾಗೆ ಜನವರಿ 12 ರಂದು ದೊಡ್ಡಬಳ್ಳಾಪುರ ನಗರದ ತೂಬಗೆರೆ ಪೇಟೆಯ ಯಶೋಧಮ್ಮ ಎನ್ನುವವರು ಕೊಂಗಾಡಿಯಪ್ಪ ಕಾಲೇಜು ಬಳಿ ಇರುವ ಮಗಳ ಮನೆಗೆ ತೆರಳಿದ್ದು, ಮರಳಿ ಮನೆಗೆ ಬರಲು ಕೊಂಗಾಡಿಯಪ್ಪ ಕಾಲೇಜು ಬಳಿ ಬಂದ ಆಟೋವನ್ನು ಹತ್ತಿದ್ದಾರೆ. ಈ ಆಟೋದಲ್ಲಿ ಚಾಲಕನೊಂದಿಗೆ ಓಂ ಶಕ್ತಿ ಮಾಲಾಧಾರಿ ಮಹಿಳೆಯಿದ್ದು, ಆಕೆಯನ್ನು ಆಲಹಳ್ಳಿ ಬಿಟ್ಟು ನಂತರ ಯಶೋಧಮ್ಮ ಅವರನ್ನು ಮನೆಗೆ ಬಿಡುವುದಾಗಿ ಚಾಲಕ ಕರೆದೊಯ್ದಿದ್ದಾನೆ. ಇದನ್ನೂ ಓದಿ: ಬಿಜೆಪಿಗೆ ನಿಮ್ಮನ್ನು ಕರೆತಂದವರು ಯಡಿಯೂರಪ್ಪ: ರಮೇಶ್ ಜಾರಕಿಹೊಳಿ ವಿರುದ್ಧ ರೇಣುಕಾಚಾರ್ಯ ಕಿಡಿ
Advertisement
Advertisement
ನಂತರ ನಾಗಸಂದ್ರ ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಈ ಜೋಡಿ, ಯಶೋಧಮ್ಮರ 33 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ 4 ಗ್ರಾಂ ತೂಕದ ಓಲೆಯನ್ನು ದೋಚಿದ್ದು, ನಂತರ ಆಕೆಯನ್ನ ಆಲಹಳ್ಳಿ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ಸ್‌ಪೆಕ್ಟರ್ ಅಮರೇಶ್ ಗೌಡ ನೇತೃತ್ವದ ಪೊಲೀಸರು ತನಿಖೆ ನಡೆಸಿ, ಯಶೋಧಮ್ಮ ಅವರನ್ನು ದೋಚಿದ್ದ ಖತರ್ನಾಕ್ ಜೋಡಿಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: Aeroindia 2025| ಯಲಹಂಕ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡಗಳ ಕ್ರೇನ್ ಎತ್ತರ ಇಳಿಸಿ: ಬಿಬಿಎಂಪಿ
Advertisement
ಅಂದಹಾಗೆ ರಾಜಾನುಕುಂಟೆ ಸಮೀಪದ ಹನಿಯೂರ ನಿವಾಸಿ ಆಟೋ ಚಾಲಕ ರಘು ಮತ್ತು ಚೆಲ್ಲಹಳ್ಳಿ ಗ್ರಾಮದ ಶ್ವೇತಾ ಬಂಧಿತರಾಗಿದ್ದು, ಇವರಿಬ್ಬರು ವಿವಾಹಿತ ಪ್ರೇಮಿಗಳಾಗಿದ್ದಾರೆ. ಓಂ ಶಕ್ತಿ ಮಾಲೆ ಧರಿಸಿದ್ದ ಶ್ವೇತಾಳಿಗೆ ಪೂಜಾ ಸಾಮಗ್ರಿ ಕೊಡಿಸಲು ದೊಡ್ಡಬಳ್ಳಾಪುರಕ್ಕೆ ಬಂದಿದ್ದ ರಘು ಬಳಿ ಹಣ ಇರಿಲಲ್ಲವಂತೆ, ಸಾಲ ಬೇರೆ ಜಾಸ್ತಿ ಮಾಡಿಕೊಂಡಿದ್ದನಂತೆ. ಇದ್ರಿಂದ ಇಬ್ಬರು ಪ್ಲ್ಯಾನ್ ಮಾಡಿ ಆಟೋ ಹತ್ತಿದ್ದ ಯಶೋಧಮ್ಮನ ಚಿನ್ನಾಭರಣ ಕದ್ದಿದ್ದರು.
ಇನ್ನೂ ಬಂಧಿತರು ಮಾಂಗಲ್ಯ ಸರವನ್ನು ಹೆಸರಘಟ್ಟದ ಚಿನ್ನಂಗಡಿಯಲ್ಲಿ ಅಡವಿಟ್ಟಿದ್ದು, ಚಿನ್ನದ ಒಲೆಯನ್ನ ಶ್ವೇತಾಳೇ ಇಟ್ಟುಕೊಂಡಿದ್ದಳಂತೆ. ಸದ್ಯ ಎರಡನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಸಿಎಂ ಮಂಗ್ಳೂರಿನಲ್ಲಿ ಇರುವಾಗಲೇ ಬ್ಯಾಂಕ್ ಲೂಟಿ – ಬಂದೂಕು ತೋರಿಸಿ ದರೋಡೆ