ಕಾರವಾರ: ಸಾಯಿ ಮಂದಿರದ ಬೀಗ ಮುರಿದು ಮಂದಿರದಲ್ಲಿದ್ದ 15 ಕೆಜಿಗೂ ಹೆಚ್ಚು ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿ ಕಳ್ಳರು ಪರಾರಿಯಾದ ಘಟನೆ ಕಾರವಾರ ನಗರದ ಕೋಡಿಬಾಗ್‌ನ ಸಾಯಿಕಟ್ಟದಲ್ಲಿ ಇರುವ ಸಾಯಿಬಾಬಾ ಮಂದಿರದಲ್ಲಿ ಇಂದು ಮುಂಜಾನೆ ನಡೆದಿದೆ.
ಮಂದಿರದ ಬೀಗ ಮುರಿದು ಕಳ್ಳರು ಮಂದಿರದಲ್ಲಿನ ಸಾಯಿಬಾಬನ ಬೆಳ್ಳಿ ಪಾದಕೆ, ಕಿರೀಟ, ಛತ್ರಿ, ಸೇರಿದಂತೆ ಬೆಳ್ಳಿ ಪಾತ್ರೆಗಳ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಒಟ್ಟು 15 ಕೆ.ಜಿಗೂ ಹೆಚ್ಚು ತೂಕದ ಬೆಳ್ಳಿ ವಸ್ತುಗಳು ಕಳ್ಳತವಾಗಿವೆ.
ಸ್ಥಳಕ್ಕಾಗಮಿಸಿದ ಕಾರವಾರ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.