ರಾಯಚೂರು: ಜಿಲ್ಲೆಯ ಸಿಂಧನೂರು ನಗರದಲ್ಲಿ ಇತ್ತೀಚಿಗೆ ಕಳ್ಳತನ ಪ್ರಕರಣ ಹೆಚ್ಚಿದ್ದು ಒಂದೇ ದಿನ ಮೂರು ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ಇನ್ನೋವಾ ಕಾರ್‌ನಲ್ಲಿ ಬಂದ ನಾಲ್ಕು ಜನ ಕಳ್ಳರು ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ನಗರದ ಗಂಗಾವತಿ ರಸ್ತೆಯ ಮೂರು ಅಂಗಡಿಗಳಿಗೆ ನುಗ್ಗಿದ ಶ್ರೀಮಂತ ಕಳ್ಳರ ಕೈಚಳಕ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ನಗರದ ಬಾಷಾ ಎಂಟರ್ಪ್ರೈಸಸ್ ನಲ್ಲಿ 6 ಸಾವಿರ ನಗದು ಹಾಗೂ ಸಿಸಿಟಿವಿ ಡಿವಿಆರ್, ಶ್ರೀ ವೆಂಕಟಗಿರಿ ಟ್ರೇಡರ್ಸ್ನಲ್ಲಿ 30 ಸಾವಿರ ರೂ. ನಗದು ಹಾಗೂ ಪೂರ್ಣಿಮಾ ಫ್ಯಾಷನ್ ಲೈಫ್‌ನಲ್ಲಿ 18,500 ರೂ. ನಗದು ಸೇರಿ ಒಟ್ಟು 54 ಸಾವಿರ ರೂ. ನಗದು ಹಾಗೂ ಸಿಸಿಟಿವಿ ಡಿವಿಆರ್ ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಿಂದ ಬಂದ ಕರ್ನಾಟಕ ವಿದ್ಯಾರ್ಥಿಗಳ ಭವಿಷ್ಯ ಏನು?: ವಿಧಾನಸಭೆಯಲ್ಲಿ ಖಾದರ್ ಪ್ರಸ್ತಾಪ
ಇನ್ನೊಂದೆಡೆ ಕೇವಲ 30 ಸೆಕೆಂಡ್‌ಗಳಲ್ಲಿ 2 ಲಕ್ಷ ರೂ. ಹಣವನ್ನು ಖದೀಮರು ದೋಚಿದ್ದಾರೆ. ಬೈಕ್‌ನಲ್ಲಿ ಹಣವಿಟ್ಟು ಹೊಲಿಗೆ ಯಂತ್ರದ ಅಂಗಡಿಗೆ ತೆರಳಿದ ವ್ಯಕ್ತಿಯ ಹಣವನ್ನು ಎಗರಿಸಿದ್ದಾರೆ. ವ್ಯಕ್ತಿ ನಾಲ್ಕು ಹೆಜ್ಜೆ ಇಡುವುದರೊಳಗೆ 2 ಲಕ್ಷ ರೂ. ಲಪಟಾಯಿಸಿ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಕಾಲೇಜು ವಾಟ್ಸಾಪ್ ಗ್ರೂಪ್‍ನಲ್ಲಿ ಪಾಕಿಸ್ತಾನ ಧ್ವಜದ ಸ್ಟಿಕರ್ ಹಾಕಿದ ವಿದ್ಯಾರ್ಥಿನಿ
ಸಿಂಧನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆಗಳು ನಡೆದಿದ್ದು, ಸಿಸಿ ಕ್ಯಾಮೆರಾ ದೃಶ್ಯಾವಳಿಯ ಸಾಕ್ಷ್ಯಗಳಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಅಂಗಡಿ ಮಾಲೀಕರು ಆರೋಪಿಸಿದ್ದಾರೆ. ಈ ಕೂಡಲೇ ಪ್ರಕರಣ ದಾಖಲಿಸಿಕೊಂಡು ಕಳ್ಳರನ್ನು ಸೆರೆ ಹಿಡಿಯುವಂತೆ ಅಂಗಡಿ ಮಾಲೀಕರು ಒತ್ತಾಯ ಮಾಡಿದ್ದಾರೆ.