ಬೆಂಗಳೂರು: ಉಕ್ರೇನ್‌ನಿಂದ ಬಂದಿರುವ ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ವಿಧಾನಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕ ಯುಟಿ ಖಾದರ್ ಪ್ರಸ್ತಾಪಿಸಿದ್ದಾರೆ.
ಉಕ್ರೇನ್‌ನಲ್ಲಿ ಹಾವೇರಿ ಮೂಲದ ವಿದ್ಯಾರ್ಥಿ ನವೀನ್‌ನನ್ನು ಕಳೆದುಕೊಂಡಿದ್ದೇವೆ. ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯದ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಖಾದರ್ ಆಗ್ರಹಿಸಿದರು.
Advertisement
ರಾಜೀವ್ ಗಾಂಧಿ ವಿವಿ ಜೊತೆಗೆ ಸರ್ಕಾರ ಚರ್ಚೆ ಮಾಡಿದರೆ ಪರಿಹಾರ ಸಾಧ್ಯವಿದೆ. ನೀಟ್‌ನಲ್ಲೂ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಭಾವನೆ ಇದೆ. ಇದನ್ನು ಸರ್ಕಾರ ವಿಮರ್ಶೆ ಮಾಡಬೇಕು. 1,000 ರ‍್ಯಾಂಕ್‌ಗಳಲ್ಲಿ 50 ವಿದ್ಯಾರ್ಥಿಗಳು ಕೂಡಾ ನಮ್ಮ ರಾಜ್ಯದವರಲ್ಲ. ನಮ್ಮ ವಿದ್ಯಾರ್ಥಿಗಳಲ್ಲಿ ಇಷ್ಟು ಟ್ಯಾಲೆಂಟ್ ಇದ್ದರೂ ಏಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಐದು ವಲಯಗಳಲ್ಲಿ ಟೌನ್‍ಶಿಪ್ ನಿರ್ಮಾಣ: ಮುರುಗೇಶ್ ನಿರಾಣಿ
Advertisement
Advertisement
ನೀಟ್‌ನಿಂದ ಪಿಯುಸಿ ವಿದ್ಯಾಭ್ಯಾಸ ವಿಚಾರವಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಎರಡು ವರ್ಷ ಕಲಿತರು ಝಿರೋ ವ್ಯಾಲ್ಯೂ ಇದೆ. ಶ್ರೀಮಂತರ ಮಕ್ಕಳು ಎರಡು ವರ್ಷ ನೀಟ್‌ಗೆ ಗಮನ ಕೊಡುತ್ತಾರೆ ವಿನಃ ಪಿಯುಸಿ ಕಲಿಯುವುದಿಲ್ಲ. ಮುಂದಿನ ದಿನಗಳಲ್ಲಿ ಶೇ.50 ಪಿಯುಸಿ ಹಾಗೂ ಶೇ.50 ನೀಟ್ ಪರಿಗಣಿಸಿದರೆ ಒಳ್ಳೆಯದು. ಈ ಬಗ್ಗೆ ಉನ್ನತ ಮಟ್ಟದ ಚರ್ಚೆ ಆಗಬೇಕು ಎಂದು ಖಾದರ್ ಆಗ್ರಹಿಸಿದರು.
Advertisement
ಯುಟಿ ಖಾದರ್ ಪ್ರಶ್ನೆಗೆ ಸಚಿವ ಡಾ. ಕೆ ಸುಧಾಕರ್ ಉತ್ತರಿಸಿದರು. ವೈದ್ಯಕೀಯ ಶಿಕ್ಷಣ ನೀತಿ ರೂಪಿಸುವುದು ನ್ಯಾಷನಲ್ ಮೆಡಿಕಲ್ ಕೌನ್ಸಿಲ್. ನೀಟ್ ಮಾರ್ಪಾಡು ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅವಕಾಶ ಇಲ್ಲ. ಉಕ್ರೇನ್‌ನಲ್ಲಿ ದೇಶದ 20,000 ವಿದ್ಯಾರ್ಥಿಗಳು ಇದ್ದಾರೆ. ಕೀವ್, ಖಾರ್ಕೀವ್‌ನಲ್ಲಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಉಳಿದ ಎರಡು ನಗರಗಳಲ್ಲಿ ಇರುವ ಮಕ್ಕಳನ್ನು ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು. ಇದನ್ನೂ ಓದಿ: ನನ್ನ ದಾರಿ ತಪ್ಪಿಸಲು ಈಶ್ವರಪ್ಪ ಜಗಳ ಮಾಡುಬೇಕು ಅಂತಾ ಬರ್ತಾರೆ: ಸಿದ್ದರಾಮಯ್ಯ ಹಾಸ್ಯ ಚಟಾಕಿ
ಉಕ್ರೇನ್‌ನಿಂದ ಬಂದವರ ಶಿಕ್ಷಣದ ಭವಿಷ್ಯದ ಬಗ್ಗೆ ರಾಜೀವ್ ಗಾಂಧಿ ವಿವಿ ಉಪ ಕುಲಪತಿ ಜೊತೆಗೆ ಸಭೆ ನಡೆಸಲಾಗಿದೆ. ನಾವು ಇಲ್ಲಿ ಯಾವ ರೀತಿ ನ್ಯಾಷನಲ್ ಮೆಡಿಕಲ್ ಕೌನ್ಸಿಲ್‌ನಲ್ಲಿ ನೀಟ್‌ಗೆ ಶಿಫಾರಸು ಮಾಡಬೇಕು ಎಂದು ಚರ್ಚೆ ನಡೆಸಿದ್ದೇವೆ. ನೀಟ್ ಕೋಚಿಂಗ್ ವಿದ್ಯಾರ್ಥಿಗಳಿಗೆ ಸರ್ಕಾರವೇ ಕೊಡುವ ನಿಟ್ಟಿನಲ್ಲಿ ತೀರ್ಮಾನ ಮಾಡಿದೆ. ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಶೇ.50 ಸರ್ಕಾರಿ ಫೀಸ್ ತೆಗೆದುಕೊಳ್ಳುವಂತೆ ಪ್ರಧಾನಿ ಕೂಡಾ ಘೋಷಣೆ ಮಾಡಿದ್ದಾರೆ ಎಂದು ಸುಧಾಕರ್ ಸ್ಪಷ್ಟನೆ ನೀಡಿದರು.