ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡಲ್ಲ. ಇಲ್ಲಿ ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಮಲೆಮಹದೇಶ್ವರ ಬೆಟ್ಟದ ವ್ಯಾಪ್ತಿಯ ಪೊನ್ನಾಚಿಯಲ್ಲಿ ಆಲಂಬಾಡಿ ಮಠದ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು, ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮುಜರಾಯಿ ದೇಗುಲಗಳಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಗಿಫ್ಟ್ – ಮಹಿಳೆಯರಿಗೆ ಬಳೆ, ಅರಿಶಿನ-ಕುಂಕುಮ
Advertisement
Advertisement
ಇಲ್ಲಿ ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಮಲೆಮಹದೇಶ್ವರ ಬೆಟ್ಟ ಇತಿಹಾಸ ಪ್ರಸಿದ್ಧ ಕ್ಷೇತ್ರ. ಈ ಭಾಗದಲ್ಲಿ ಕಾಡಂಚಿನ ಗ್ರಾಮಗಳು ಹೆಚ್ಚಾಗಿವೆ. ಕಾಡಿನೊಳಗೂ ಗ್ರಾಮಗಳಿವೆ. ಈ ಭಾಗದ ಜನರಿಗೆ, ಬೆಟ್ಟಕ್ಕೆ ಬರುವ ಭಕ್ತರಿಗೆ ತೊಂದರೆಯಾಗಬಾರದು. ಮಲೆಮಹದೇಶ್ವರ ಬೆಟ್ಟಕ್ಕೆ ಈ ಭಾಗದ ರೈತರೇ ವಾರಸುದಾರರು. ಸರ್ಕಾರ ಅನುಷ್ಠಾನಗೊಳಿಸುವ ಯಾವುದೇ ಯೋಜನೆಗಳು ಜನರಿಗೆ ಅನುಕೂಲವೇಗಬೇಕೇ ಹೊರತು ಅನಾನುಕೂಲವಾಗಬಾರದು ಎಂದರು. ಇದನ್ನೂ ಓದಿ: ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ
Advertisement
Advertisement
ಎಸ್‌ಡಿಪಿಐ, ಪಿಎಫ್‌ಐ ಬ್ಯಾನ್ ಆಗ್ಬೇಕು: ಇದೇ ವೇಳೆ ಎಸ್‌ಡಿಪಿಐ ಸಂಘಟನೆ ವಿಚಾರವಾಗಿ ಮಾತನಾಡಿದ ಸಚಿವ ವಿ.ಸೋಮಣ್ಣ, ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಬ್ಯಾನ್ ಆಗ್ಬೇಕು. ಈ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಹಂತ-ಹಂತವಾಗಿ ಕ್ರಮ ಕೈಗೊಳ್ಳುತ್ತಿದೆ. ಇದು ಯಾರ ಪಾಪದ ಕೂಸು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಸಂಘಟನೆಗಳು ಎಲ್ಲರಿಗೂ ತಲೆನೋವಾಗಿದ್ದು, ಇವುಗಳನ್ನು ನಿಷೇಧಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದ್ದಾರೆ.