ಮಂಗಳೂರು: ಮನೆಯಲ್ಲೇ ಗೌರಿ ಲಂಕೇಶ್ ಹತ್ಯೆ ಆಗಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳುವ ಮೂಲಕ ಮಾಜಿ ಸಚಿವೆ, ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಲಬುರ್ಗಿ ಹಂತಕರನ್ನು ಇನ್ನೂ ಬಂಧಿಸಿಲ್ಲ. ಕೆಂಪಯ್ಯ ಮೂಲಕ ಸಿದ್ದರಾಮಯ್ಯ ಪೊಲೀಸರನ್ನು ಕಂಟ್ರೋಲ್ ಮಾಡುತ್ತಿದ್ದಾರೆ. ಡಿವೈಎಸ್‍ಪಿ ಗಣಪತಿ ಹತ್ಯೆ ವಿಚಾರದಲ್ಲಿ ಎಸಿಬಿ, ಸಿಐಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಸಿಬಿಐ ತನಿಖೆಯಿಂದ ರಾಜ್ಯ ಸರಕಾರದ ಕೈವಾಡ ಹೊರಬರಲಿದೆ ಎಂದು ತಿಳಿಸಿದರು.
ಬಿಜೆಪಿ ಮಂಗಳೂರು ಚಲೋ ರ‍್ಯಾಲಿ ಬಗ್ಗೆ ಮಾತನಾಡಿದ ಅವರು, ರ‍್ಯಾಲಿಯನ್ನು ಹತ್ತಿಕ್ಕುವ ಯತ್ನವನ್ನು ಸರ್ಕಾರ ಮಾಡುತ್ತಿದೆ ಸಿದ್ದರಾಮಯ್ಯ ಸರ್ಕಾರಕ್ಕೆ ಇದು ಎಚ್ಚರಿಕೆ ಗಂಟೆಯಾಗಲಿದೆ. ರಮಾನಾಥ ರೈಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಗುರುವಾರದ ಕಾರ್ಯಕ್ರಮವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಪಿಎಫ್‍ಐ, ಎಸ್‍ಡಿಪಿಐ ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು.
ಗಣಪತಿ ಪ್ರಕರಣದಲ್ಲಿ ಸಚಿವ ಜಾರ್ಜ್ ಈಗಲೇ ರಾಜಿನಾಮೆ ನೀಡಬೇಕು. ರಮಾನಾಥ ರೈ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಟೀಕಿಸಿದರು.
ಗೌರಿ ಲಂಕೇಶ್ ಹತ್ಯೆಯ ರಕ್ತ ಕರ್ನಾಟಕದ ಮನೆಮನೆಗೆ ಚೆಲ್ಲಿದೆ: ಸಾಹಿತಿ ದೇವನೂರು ಮಹಾದೇವ https://t.co/PNax6g4jh7 #GauriLankeshMurder #DevanuruMahadeva pic.twitter.com/lmTBxSrJEq
— PublicTV (@publictvnews) September 6, 2017
ಗೌರಿ ಲಂಕೇಶ್ ಹತ್ಯೆ ಹಿಂದೆ ನಕ್ಸಲರ ಕೈವಾಡ ಶಂಕೆ https://t.co/EmWh1EbouV #GauriLankeshMurder #Shootout #Naxalite pic.twitter.com/8VU0ozi9Lh
— PublicTV (@publictvnews) September 6, 2017
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿರೋ ಸಿಎಂ https://t.co/fTqumUGQ49#Bengaluru #Siddaramaiah #Journalist #GauriLankesh pic.twitter.com/OwoqEg522z
— PublicTV (@publictvnews) September 6, 2017
3 ದಿನದ ಹಿಂದೆಯೇ ಗೌರಿ ಲಂಕೇಶ್ ಹತ್ಯೆಗೆ ಯತ್ನ https://t.co/zzcaStsfWq #GauriLankesh #Shootout #Bengaluru pic.twitter.com/ICSRtCvdeO
— PublicTV (@publictvnews) September 6, 2017
ಬಿಜೆಪಿ, ಆರ್‍ಎಸ್‍ಎಸ್ ವಿರುದ್ಧ ಮಾತನಾಡೋ ಮಂದಿಯ ವಿರುದ್ಧ ದಾಳಿ: ರಾಹುಲ್ ಗಾಂಧಿ https://t.co/oe4N8ZB88v #GauriLankeshmurder #RahulGandhi #Congress pic.twitter.com/ZwB3rj2O08
— PublicTV (@publictvnews) September 6, 2017
ನನ್ನ ಎದೆಗೆ ಗುಂಡು ಹೊಡೆದಂತಾಗಿದೆ: ಸಾಹಿತಿ ವೈದೇಹಿ https://t.co/vjtxC888pA#GauriLankeshmurder #Vaidehi #Kannada #GauriLankesh pic.twitter.com/b0faWXcD8Z
— PublicTV (@publictvnews) September 6, 2017
ವಿಚಾರವಾದಿಗಳ ಬಗ್ಗೆ ಬಿಜೆಪಿ ಶಾಸಕ ಸುರೇಶ್‍ಕುಮಾರ್ ವಿವಾದಾತ್ಮಕ ಟ್ವೀಟ್ https://t.co/w8dx3B3lL0#Bengaluru #GauriLankesh #Journalist #SureshKumar pic.twitter.com/WHWoon1eFj
— PublicTV (@publictvnews) September 6, 2017