ಇದೇ ಮೊದಲ ಬಾರಿಗೆ ಸಿನಿಮಾ ಪತ್ರಕರ್ತರಿಗೆ ಮಧ್ಯರಾತ್ರಿ ಸಿನಿಮಾ ತೋರಿಸಲು ಮುಂದಾಗಿದೆ ‘ಆರ್.ಆರ್.ಆರ್’ ಸಿನಿಮಾ ಟೀಮ್. ಈ ಕುರಿತು ಆರ್.ಆರ್.ಆರ್ ಟೀಮ್ ಪತ್ರಕರ್ತರಿಗೆ ಸಂದೇಶ ಕಳುಹಿಸಿದ್ದು, ಕೆ.ಜಿ ರೋಡ್ ಭೂಮಿಕಾ ಚಿತ್ರಮಂದಿರದಲ್ಲಿ ಇಂದು ಮಧ್ಯರಾತ್ರಿ 12.45ಕ್ಕೆ ಪ್ರೆಸ್ ಶೋ ಆಯೋಜನೆ ಮಾಡಲಾಗಿದೆ ಎಂದು ಕಳುಹಿಸಿದ್ದಾರೆ. ಈ ಮೂಲಕ ಮಧ್ಯರಾತ್ರಿಯ ಟಾಸ್ಕ್ ಕೊಟ್ಟಿದ್ದಾರೆ. ಇದನ್ನೂ ಓದಿ : ದಪ್ಪಗಿರೋರಿಗೆ ‘ಸೂ’ ಅನ್ನೋ ಕ್ಯಾರೆಕ್ಟರ್ ಸರ್ಟಿಫಿಕೇಟ್ : ಹಿಗ್ಗಾಮುಗ್ಗ ಝಾಡಿಸಿದ ಗಾಳಿಪಟ ನೀತು
Advertisement
ಮಧ್ಯರಾತ್ರಿ ನಡೆಯುವ ಈ ಶೋನಲ್ಲಿ ‘ಆರ್.ಆರ್.ಆರ್’ ಕನ್ನಡದ ಅವತರಣಿಕೆಯನ್ನು ತೋರಿಸಲಾಗುತ್ತಿದೆ. ಈ ಚಿತ್ರ ಮಂದಿರದಲ್ಲಿ ಕನ್ನಡಕ್ಕೆ ಡಬ್ ಆಗಿರುವ ಆರ್.ಆರ್.ಆರ್ ಸಿನಿಮಾ ಪ್ರದರ್ಶನವಾಗುತ್ತಿದೆ. ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ನಾಳೆ ವಿಶ್ವದಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಕನ್ನಡದಲ್ಲೇ 250ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ತೆರೆ ಕಾಣುತ್ತಿದೆ. ಈ ದಿನ ಮಧ್ಯರಾತ್ರಿಯಿಂದಲೇ ಅನೇಕ ಕಡೆ ಪ್ರದರ್ಶನಗಳು ನಡೆಯುತ್ತಿವೆ. ಇದನ್ನೂ ಓದಿ : ಶ್ರುತಿ ಹಾಸನ್ ಜತೆ ನನ್ನ ಮದುವೆ ಆಗಿದೆ: ಸ್ಫೋಟಕ ಮಾಹಿತಿ ಹಂಚಿಕೊಂಡ ಬಾಯ್ ಫ್ರೆಂಡ್
Advertisement
Advertisement
ಆರ್.ಆರ್.ಆರ್ ಸಿನಿಮಾಗಾಗಿ ಕನ್ನಡದ ಜೇಮ್ಸ್ ಚಿತ್ರವನ್ನು ಥಿಯೇಟರ್ ಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕುರಿತು ನಟ ಶಿವರಾಜ್ ಕುಮಾರ್ ಕೂಡ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು. ಕೊನೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಸಭೆ ಕೂಡ ನಡೆಯಿತು. ಈಗ ಸಮಸ್ಯೆ ಬಗೆಹರಿದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ
Advertisement
ಇಂದು ಮುಂಜಾನೆ ಆರ್.ಆರ್.ಆರ್ ಸಿನಿಮಾ ತಂಡದ ವಿರುದ್ಧ ಕನ್ನಡಪರ ಸಂಘಟನೆಗಳು ಕೂಡ ಪ್ರತಿಭಟನೆ ನಡೆಸಿದ್ದವು. ಈ ಸಿನಿಮಾದ ಪೋಸ್ಟರ್ ಕಿತ್ತು ಹಾಕುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದವು. ಆನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು.