ಕೆಲ ತಿಂಗಳ ಹಿಂದೆಯಷ್ಟೇ ‘ಆರ್ಟಿಕಲ್ 370’ ಸಿನಿಮಾ ರಿಲೀಸ್ ಆಗಿ ವಿವಾದವೊಂದರ ಕಥೆಯನ್ನು ಹೇಳಲಾಗಿತ್ತು. ಅದರ ಹಿಂದೆಯೂ ದಿ ಕಾಶ್ಮೀರ್ ಫೈಲ್ಸ್, ದಿ ಕೇರಳ ಸ್ಟೋರಿಯಂತಹ ಚಿತ್ರಗಳು ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದ್ದವು. ಈ ಬೆನ್ನಲ್ಲೇ ಮತ್ತೊಂದು ವಿವಾದಿತ ವಿಷಯದ ಚಿತ್ರ ಮೂಡಿ ಬಂದಿತ್ತು. ಅದೇ ದಿ ಸಾಬರಮತಿ ರಿಪೋರ್ಟ್.
Advertisement
ವಿವಾದಿತ ವಿಷಯವೊಂದನ್ನು ಹೊತ್ತು ರೆಡಿಯಾಗಿರುವ ‘ದಿ ಸಾಬರಮತಿ ರಿಪೋರ್ಟ್’ (The Sabarmati Report) ಸಿನಿಮಾ ಟೀಮ್ ನಿಂದ ಹೊಸ ಸುದ್ದಿಯೊಂದು ಬಂದಿದ್ದು, ಇದೇ ಆಗಸ್ಟ್ 2 (August)ರಂದು ಈ ಸಿನಿಮಾವನ್ನು ದೇಶಾದ್ಯಂತ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರಂತೆ.
Advertisement
Advertisement
2002ರ ಫೆಬ್ರವರಿ 27 ರಂದು ನಡೆದ ಗೋಧ್ರಾ ರೈಲು ದುರಂತವನ್ನು ಆಧರಿಸಿ ಈ ಸಿನಿಮಾ ಮೂಡಿ ಬಂದಿದ್ದು, ಈ ದುರಂತದಲ್ಲಿ 59 ಜನರ ಸಜೀವ ದಹನವಾಗಿತ್ತು. ಅದರ ಹಿಂದಿನ ಕರಾಳ ಮುಖವನ್ನು ತೋರಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆಯಂತೆ. ಈಗಾಗಲೇ ಚಿತ್ರದ ಟ್ರೈಲರ್ (Trailer) ರಿಲೀಸ್ ಆಗಿದ್ದು, ಪರ ವಿರೋಧದ ಕಾಮೆಂಟ್ ಗಳು ಕೇಳಿ ಬಂದಿವೆ.
Advertisement
ರಂಜನ್ ಚಂಡೇಲ್ (Ranjan Chandel) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ವಿಕ್ರಾಂತ್ ಮಾಸ್ಸಿ (Vikrant Massey) ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಇಲ್ಲಿ ಅವರದ್ದು ಪತ್ರಕರ್ತ ಹಾಗೂ ಸುದ್ದಿ ವಾಚನ ಮಾಡುವ ಪಾತ್ರ. ಟ್ರೈಲರ್ ನಲ್ಲೂ ಅದನ್ನು ಸ್ಪಷ್ಟವಾಗಿಯೇ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಸಾಕಷ್ಟು ಸೂಕ್ಷ್ಮ ವಿಚಾರಗಳಿದ್ದು, ಆಗಸ್ಟ್ 2 ರಂದು ಎಲ್ಲದಕ್ಕೂ ಉತ್ತರ ಸಿಗಲಿದೆ.