-ಹಿಂದೂಗಳನ್ನು ಟಾರ್ಗೆಟ್ ಮಾಡೋದು ಸಿಎಂ, ಸಿಎಂ ಸಂಪುಟದ ಕೆಲಸ
-ಕಾಂಗ್ರೆಸ್ ರಾಜ್ಯದ ಜನರ ಕ್ಷಮೆ ಕೇಳಬೇಕು
ಬೆಂಗಳೂರು: ಮುಸುಕುಧಾರಿ (Mask Man) ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅಂತ ತನಿಖೆ ಆಗಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಹೇಳಿದ್ದಾರೆ.
ಎಸ್‌ಐಟಿಯಿಂದ (SIT) ಮಾಸ್ಕ್ ಮ್ಯಾನ್ ಬಂಧನದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಕೇಸ್ ಆದಾಗಿನಿಂದ ಷಡ್ಯಂತ್ರ ಅಂತ ಹೇಳಿದ್ದೆವು. ಸರ್ಕಾರ ಆತುರದ ನಿರ್ಧಾರ ಮಾಡಿತು. ದೂರು ಕೊಟ್ಟವನ ಪೂರ್ವಪರಿತೆ ನೋಡದೆ ಯೋಚನೆ ಮಾಡದೇ ಸಿಎಂ ಜೊತೆ ಇರುವ ಪ್ರಗತಿಪರರ ಮಾತು ಕೇಳಿ ಎಸ್‌ಐಟಿ ಮಾಡಿದ್ರು. ಎಸ್‌ಐಟಿ ತನಿಖೆಯಿಂದ ಬುರುಡೆ ಬಂತು ಅಷ್ಟೇ. ಸಿಎಂ ಕಾಮನ್ ಸೆನ್ಸ್ ಉಪಯೋಗ ಮಾಡಬೇಕಿತ್ತು. ಧರ್ಮಸ್ಥಳದ ಭಕ್ತರ ಭಾವನೆಗೆ ನೋವು ಆಗಿದೆ. ಇದನ್ನ ಸಿದ್ದರಾಮಯ್ಯ ವಾಪಸ್ ಕೊಡಲು ಆಗುತ್ತಾ? ಈ ಸರ್ಕಾರದ ತಪ್ಪು ಅಂತ ಆಯ್ತು. ಮಾಸ್ಕ್ ಮ್ಯಾನ್ ಬಗ್ಗೆ ಮೊದಲೇ ತನಿಖೆ ಮಾಡಿದ್ರೆ ಮುಗಿದು ಹೋಗ್ತಿತ್ತು ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಸುಕುಧಾರಿ ಬಂಧನ ಆಗಿರೋದು ನಿಜ, ಇದರ ಹಿಂದಿರುವ ಜಾಲವನ್ನ ಪತ್ತೆ ಮಾಡಲಾಗುವುದು: ಪರಮೇಶ್ವರ್
ಅನನ್ಯ ಭಟ್‌ದು ಸುಳ್ಳು ಅಂತ ಗೊತ್ತಾಗಿದೆ. ಎಲ್ಲರೂ ದುಡ್ಡು ತಗೊಂಡು ಮಾಡಿದ್ದಾರೆ. ಮಾಸ್ಕ್ ಮ್ಯಾನ್ ಹಿಂದೆ ಇರೋನು ಸಮೀರ್. ಸಮೀರ್ ಇದರ ಸೂತ್ರಧಾರ. ಎಲ್ಲರನ್ನು ಜೊತೆಗಾರ ಮಾಡಿಕೊಳ್ಳುತ್ತಾನೆ, ಪ್ರಗತಿ ಪರರ ಟೀಂ ಸೆಟಪ್ ಮಾಡಿಕೊಳ್ತಾನೆ. ಡ್ರಾಮಾ ಮಾಡೋಕೆ ಮಾಸ್ಕ್ ಮ್ಯಾನ್, ಅನನ್ಯ ಭಟ್ ಹುಡುಕುತ್ತಾರೆ. ತನಿಖೆ ಹೇಗೆ ಮಾಡಬೇಕು ಅಂತ ಅದನ್ನು ಇವರೇ ನಿರ್ಧಾರ ಮಾಡ್ತಾರೆ. ಭದ್ರತೆ ಕೊಡಬೇಕು ಅಂತ ಹೇಳ್ತಾರೆ. ಸಿಎಂಗೂ ಇಷ್ಟು ಸೆಕ್ಯುರಿಟಿ ಇರಲಿಲ್ಲ, 25 ದಿನ ಮಾಸ್ಕ್ ಮ್ಯಾನ್‌ಗೆ ಇತ್ತು. ಸಿಎಂಗಿಂತ ಹೈ ಸೆಕ್ಯುರಿಟಿ ಕೊಟ್ರು, ಯಾಕೆ ಕೊಟ್ರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಹಣದ ಆಮಿಷವೊಡ್ಡಿ ಧರ್ಮಸ್ಥಳಕ್ಕೆ ಕರೆಸಿದ್ದರು: ಸತ್ಯ ಕಕ್ಕಿದ ಚಿನ್ನಯ್ಯ
ಮಂಜುನಾಥ್‌ನನ್ನ ಅವಹೇಳನ ಮಾಡಬೇಕು, ಇದು ಮತಾಂತರ ಷಡ್ಯಂತ್ರ. ಇಲ್ಲ ಅಂದರೆ ಸಾಬಿ ಸಮೀರ್ ಯಾಕೆ ಬರುತ್ತಾರೆ? ಧರ್ಮಸ್ಥಳದ ಬಗ್ಗೆ ಕೇಳೋಕೆ ಇವರು ಯಾರು? ಬೇಕಾದ ಮಸೀದಿ ಮೇಲೆ ದೂರು ಬಂದಿದೆ. ಯಾವುದಾದರೂ ಮಸೀದಿ ಅಗೆದ್ರಾ? ಹಿಂದೂಗಳನ್ನು ಟಾರ್ಗೆಟ್ ಮಾಡುವುದು ಸಿಎಂ, ಸಿಎಂ ಸಂಪುಟದ ಕೆಲಸ. ಡಿಕೆ ವೋಟ್ ಬ್ಯಾಂಕ್‌ಗೆ ಮಾತಾಡ್ತಿದ್ದಾರೆ ಅಷ್ಟೇ. ಇಷ್ಟೆಲ್ಲಾ ಕೇಸ್ ಆಗೋಕೆ ಸಿಎಂ ಕಾರಣ. ಪೊಲೀಸರ ಕೆಲಸ ಬಿಟ್ಟು ಬುರುಡೆ ಹುಡುಕೋಕೆ ಬಿಟ್ಟರು. ತನಿಖೆಗೆ ಕೊಟ್ಯಂತರ ರೂಪಾಯಿ ಖರ್ಚು ಆಗಿದೆ. ಯಾರು ಕೊಡ್ತಾರೆ? ಬೆಟ್ಟ ಅಗೆದು ಇಲಿಯೂ ಸಿಗಲಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಪ್ರಹಸನ ಆಗಿರಲಿಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಕ್ಷಮೆ ಕೇಳಬೇಕು. ಬಿಜೆಪಿ ಅವರು ಮೊದಲು ಮಾತಾಡಿಲ್ಲ ಅಂದರು. ನಾನೇ ಮಾತಾಡಿದ್ದೇ ಮೈಸೂರಿನಲ್ಲಿ. ತನಿಖೆ ಮಾಡಿ ಇದು ಷಡ್ಯಂತ್ರ ಅಂತ ಹೇಳಿದ್ದೆ. ಬಿಜೆಪಿ ಹೋರಾಟ ಮಾಡಿರಲಿಲ್ಲ ಅಂದರೆ ಬುರುಡೆ ತಂದು ಇದೇ ನಿಜ ಅಂತ ಮಾಡೋರು. ನಾವು ಹೋರಾಟ ಮಾಡಿದ್ದಕ್ಕೆ ಇದು ಇಲ್ಲಿಗೆ ಬಂದು ನಿಂತಿದೆ. ಧರ್ಮಸ್ಥಳಕ್ಕೆ ಕಾಂಗ್ರೆಸ್ ಪಕ್ಷ ಮೋಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಂಗೆ ಆರೋಗ್ಯ ಸರಿಯಿಲ್ಲ, ಬೆದರಿಕೆಯಿದೆ – ರಕ್ಷಣೆ ಕೊಡಿ ಅಂತಾ ಪೊಲೀಸರಿಗೆ ಸುಜಾತ ಭಟ್ ಮನವಿ
ಮಾಸ್ಕ್ ಮ್ಯಾನ್‌ಗೆ ಆಮಿಷವೊಡ್ಡಿದ್ದಾರೆ ಎಂದು ಅಸೆಂಬ್ಲಿಯಲ್ಲಿ ನಾನು ಹೇಳಿದ್ದೆ. ಈಗ ಬಂಧನ ಆಗಿದೆ. ಮಾಸ್ಕ್ ಮ್ಯಾನ್ ನೋಡಿದ್ರೆ ಪಾಪ ಅನ್ನಿಸುತ್ತೆ. ಇವರ ಹಿಂದೆ ಯಾರು ಇದ್ದಾರೆ ಅಂತ ತಿಳಿಯೋಕೆ ಎಸ್‌ಐಟಿ ಮಾಡಿ. ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆಶಿಗೆ ಸತ್ಯ ಹೊರ ಬರೋ ಮನಸ್ಸು ಇದ್ದರೆ ಎಸ್‌ಐಟಿ ತನಿಖೆ ಮಾಡಿ, ಎನ್‌ಐಎಗೆ ತನಿಖೆ ಕೊಡಿ. ಇವರು ಎನ್‌ಐಎಗೆ ಕೊಡಲಿಲ್ಲ ಅಂದರೆ ಕಾಂಗ್ರೆಸ್ ಪಾತ್ರ ಇದೆ ಅಂತ ಗೊತ್ತಾಗುತ್ತದೆ ಎಂದು ಆರೋಪಿಸಿದರು. ಇದನ್ನೂ ಓದಿ: ಧರ್ಮಸ್ಥಳ ಪರ ಧ್ವನಿ ಎತ್ತಿದವ್ರನ್ನ ಹೇಗೆ ಮಟ್ಟಹಾಕಬೇಕೆಂದು ಮಟ್ಟಣ್ಣನವರ್ ಪ್ಲ್ಯಾನ್ ಮಾಡ್ತಿದ್ರು: ಸೂಲಿಬೆಲೆ
ಅನನ್ಯ ಭಟ್ ಕಳೆದು ಹೋಗಿದ್ದಾರೆ ಅಂತ ತನಿಖೆ ಮಾಡಿದ್ರೆ ಗೊತ್ತಾಗುತ್ತಿತ್ತು, ಪೊಲೀಸರು ತನಿಖೆ ಮಾಡಿಲ್ಲ. ಈ ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದ್ರು. ಕೇವಲ ಬುರುಡೆ ಹುಡುಕಿ ಅಂತ ಬಿಟ್ಟಿದ್ರು. ಬಂಧನ ಮಾಡಿದ್ರೆ ಸಾಲದು, ಇದರ ಹಿಂದೆ ಇರೋರನ್ನು ಬಯಲಿಗೆ ಎಳೆಯಬೇಕು. ಈ ದೇಶದಲ್ಲಿ ಇರೋನು ಮಾಡಿರೋದಾ? ಬೇರೆ ದೇಶದಲ್ಲಿ ಇರೋನು ಮಾಡಿರೋದಾ? ತನಿಖೆ ಆಗಲಿ. ಇದು ಲವ್ ಜಿಹಾದ್ ತರಹ ಮತಾಂತರ ಜಿಹಾದ್. ಎಸ್‌ಐಟಿ ಆಗಲಿ ಇಲ್ಲ. ಎನ್‌ಐಎ ತನಿಖೆಗೆ ಕೊಡಿ. ರಾಜ್ಯ ಸರ್ಕಾರವೇ ಎನ್‌ಐಎಗೆ ಕೊಟ್ಟು ಬಿಡಲಿ ಎಂದರು. ಇದನ್ನೂ ಓದಿ: ಎಲ್ಲಿಂದಲೋ ಬುರುಡೆ ತಂದು ಬುರುಡೆ ಬಿಟ್ಟಿದ್ದ ಚೆನ್ನಯ್ಯ!
ಸಮೀರ್ ಏಕಾಏಕಿ ಹೇಗೆ ಬಂದ? ಧರ್ಮಸ್ಥಳದ ಬಗ್ಗೆ ಮಾತಾಡ್ತಾನೆ. ಕಾಂಗ್ರೆಸ್ ಸರ್ಕಾರ ತಾಳಮೇಳ ಹೊಡೆದುಕೊಂಡು ಬಂದ್ರು. ಈಗ ಸರ್ಕಾರಕ್ಕೆ ಮಂಗಳಾರತಿ ಆಯಿತು ಎಂದು ಟೀಕಿಸಿದರು. ಇದನ್ನೂ ಓದಿ: ನೀರಿನಲ್ಲಿ ಮುಳುಗಿದ ಹೆಣಗಳಿಂದ ಚಿನ್ನ ಕದಿಯುತ್ತಿದ್ದ ʻಚಿನ್ನಯ್ಯʼ – ಮುಸುಕುಧಾರಿಯ ಅಸಲಿಯತ್ತು ಬಯಲು