‘ಮ್ಯಾಕ್ಸ್’ ತಂಡ ಸೇರಿಕೊಂಡ ‘ಜೈಲರ್’ ಸ್ಟಂಟ್ ಮಾಸ್ಟರ್

Public TV
1 Min Read

ಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾದ ಸ್ಟಂಟ್ ಮಾಸ್ಟರ್ (Stunt Master) ಕೆವಿನ್ (Kevin) ಇದೀಗ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಪವರ್ ಫುಲ್ ಸಾಹಸ ಸನ್ನಿವೇಶವನ್ನು ಅವರು ಕಂಪೋಸ್ ಮಾಡಿದ್ದು, ಈ ದೃಶ್ಯಗಳಲ್ಲಿ ಸುದೀಪ್ ಸಖತ್ತಾಗಿಯೇ ಫೈಟ್ ಮಾಡಲಿದ್ದಾರಂತೆ.

sudeep

‘ಮ್ಯಾಕ್ಸ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ತಮಿಳು ನಾಡಿನ (Tamil Nadu) ಮಹಾಬಲಿಪುರಂನಲ್ಲಿ ನಡೆಯುತ್ತಿದೆ. ಕಿಚ್ಚ ಸುದೀಪ್ ಸೇರಿದಂತೆ ಹಲವು ಕಲಾವಿದರು ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಮಾಹಿತಿಯನ್ನೂ ಸ್ವತಃ ಕಲಾವಿದರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

sudeep 1

‘ಮ್ಯಾಕ್ಸ್’ ಸಿನಿಮಾ ಬಗ್ಗೆ ಅಭಿಮಾನಿಗಳು ಪದೇ ಪದೇ ಅಪ್‌ಡೇಟ್ ಕೇಳುತ್ತಲೇ ಇರುತ್ತಾರೆ. ಅದಕ್ಕೆ ಈ ಹಿಂದೆಯೂ ಪ್ರತಿಕ್ರಿಯೆ ನೀಡಿದ್ದರು ಸುದೀಪ್,  ‘ನಿಮ್ಮ ಪ್ರೀತಿ, ಕ್ಯೂರಿಯಾಸಿಟಿ ನನಗೆ ಅರ್ಥವಾಗುತ್ತದೆ. ಆದರೆ, ಸಿನಿಮಾ ಶೂಟ್ (Shooting) ಪೂರ್ಣಗೊಳ್ಳದೆ ಆ ಬಗ್ಗೆ ಅಪ್‌ಡೇಟ್ ನೀಡೋದು ಹೇಗೆ’ ಅನ್ನೋದು ಸುದೀಪ್ ಅವರ ಪ್ರಶ್ನೆಯಾಗಿತ್ತು.ಬಹುಶಃ ಕೊನೆಯ ಹಂತದ ಶೂಟಿಂಗ್ ಮುಗಿಸಿಕೊಂಡು ಅಪ್ ಡೇಟ್ ಕೊಡಬಹುದು.

Sudeep

ಮೊನ್ನೆಯಷ್ಟೇ ಸಿನಿಮಾದ ಪ್ರಮುಖ ದೃಶ್ಯವನ್ನು ಶೂಟ್ ಮಾಡಿ ಮುಗಿಸಿದ್ದಾರೆ. ಅದೊಂದು ಪ್ರಮುಖ ಘಟ್ಟ. ಜೊತೆಗೆ ಸಣ್ಣದೊಂದು ಭಾಗದ ಚಿತ್ರೀಕರಣ ಮುಗಿದರೆ ಸಿನಿಮಾ ಮುಗಿದಂತೆ. ಎಲ್ಲ ರಫ್ ಕಟ್ ದೃಶ್ಯಗಳನ್ನು ನೋಡಿದೆ. ಸೂಪರ್. ಅದ್ಭುತವಾಗಿ ಸಿನಿಮಾ ಮೂಡಿ ಬಂದಿದೆ. ಪ್ರತಿಯೊಬ್ಬರ ಎಫರ್ಟ್ ಕಾಣುತ್ತಿದೆ ಎಂದು ಸುದೀಪ್ ಈ ಹಿಂದೆ ಎಕ್ಸ್ (ಟ್ವಿಟ್) ಮಾಡಿದ್ದರು.

 

ಕ್ರಿಕೆಟ್, ಬಿಗ್ ಬಾಸ್ ನಡುವೆಯೂ ನಿರೀಕ್ಷಿತ ಮ್ಯಾಕ್ಸ್ (Max) ಸಿನಿಮಾದ ಚಿತ್ರೀಕರಣ ಮುಗಿಸುತ್ತಿದ್ದಾರೆ ಕಿಚ್ಚ ಸುದೀಪ್. ಈಗಷ್ಟೇ ಚಿತ್ರದ ಕ್ಲೈಮ್ಯಾಕ್ಸ್ (Climax) ಶೂಟಿಂಗ್ ಮುಗಿಸಿದ್ದಾರೆ. ಅಂದುಕೊಂಡ ತಿಂಗಳಲ್ಲೇ ಸಿನಿಮಾ ತೆರೆಗೆ ತರಬೇಕಾಗಿದ್ದರಿಂದ ಚಿತ್ರೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರಂತೆ. ಇನ್ನು ಕೆಲವೇ ದಿನಗಳಲ್ಲಿ ಮ್ಯಾಕ್ಸ್ ಸಿನಿಮಾದ ಸಂಪೂರ್ಣ ಚಿತ್ರೀಕರಣ ಕೂಡ ಮುಗಿಯಲಿದೆ.

Share This Article