ಬೀದರ್ : ದಿನೇ ದಿನೇ ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರುತ್ತಿದ್ದು ಇದರಿಂದ ಬೇಸತ್ತ ಗಡಿ ಜಿಲ್ಲೆಯ ವ್ಯಕ್ತಿಯೊಬ್ಬರು ಗಾಡಿಯನ್ನು ಆವಿಷ್ಕಾರ ಮಾಡಿದ್ದಾರೆ.
ಏನಿದರ ವಿಶೇಷ?
ತಮ್ಮ ಹಳೆಯ ಪೆಟ್ರೋಲ್ ದ್ವಿಚಕ್ರ ವಾಹನಕ್ಕೆ ನಾಲ್ಕು ಬ್ಯಾಟರಿ, ಮೋಟಾರು ಹಾಗೂ ಟ್ರಾನಿಕ್ಸ್ ಕಿಟ್ ಅಳವಡಿಸಿದ್ದಾರೆ. ಈ ವಾಹನವನ್ನು 15 ರೂಪಾಯಿಯಲ್ಲಿ ಒಂದು ಬಾರಿ ಚಾಜಿರ್ಂಗ್ ಮಾಡಿದರೆ 80 ರಿಂದ 100 ಕೀಲೋ ಮೀಟರ್ ಸಂಚಾರ ಮಾಡಬಹುದಾಗಿದೆ. ಇದನ್ನೂ ಓದಿ: ಸಂಜ್ಞಾ ಭಾಷೆ ಅರ್ಥಮಾಡಿಕೊಳ್ಳುವ ಎಐ ಮಾದರಿಯನ್ನು ಅಭಿವೃದ್ಧಿ ಪಡಿಸಿದ 20ರ ಯುವತಿ
Advertisement
Advertisement
20 ಸಾವಿರ ಖರ್ಚು ಮಾಡಿ ಸತತ ಮೂರು ದಿನಗಳಲ್ಲಿ ಚಾರ್ಜಿಂಗ್ ದ್ವಿಚಕ್ರ ವಾಹನವನ್ನು ಆವಿಷ್ಕಾರ ಮಾಡಿದ್ದಾರೆ. ವೃತ್ತಿಯಲ್ಲಿ ಅವರು ಫ್ಯಾನ್, ಮಿಕ್ಸಿ ರಿಪೇರಿ ಮಾಡುವ ಕಂಪ್ಯೂಟರ್ ಸೈನ್ಸ್ ಮೆಕಾನಿಕ್ ಆಗಿದ್ದಾರೆ. ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ
Advertisement
ಸರ್ವಿಸ್ ಇಲ್ಲದೆ ಕಡಿಮೆ ಬಜೆಟ್‍ನ ಈ ವಿಶೇಷ ಆವಿಷ್ಕಾರವನ್ನು ಜನರು ಬಂದು ಆಶ್ಚರ್ಯದಿಂದ ನೋಡಿ ನಮಗೂ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
Advertisement
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೆಟ್ರೋಲ್ ರೇಟ್ ನೂರರ ಗಡಿ ದಾಟಿದ್ದರಿಂದ ನಾನು ಬೇಸತ್ತು ಈ ಬ್ಯಾಟರಿ ಚಾಜಿರ್ಂಗ್ ಗಾಡಿಯನ್ನು ತಯಾರಿಸಿದ್ದೇನೆ. ಇದರಿಂದ 15 ರೂಪಾಯಿಯಲ್ಲಿ ನಾನು ಎಲ್ಲಿ ಬೇಕಾದರು ಸುತ್ತಾಡ ಬಹುದು ಎಂದರು.