ಟಾಲಿವುಡ್ ಲೈಗರ್ ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ಚಿತ್ರಮಂದಿರದಲ್ಲಿ ಹೇಳಿಕೊಳ್ಳುವಷ್ಟು ದುಡ್ಡು ಮಾಡಲಿಲ್ಲ. ಜನರ ಪ್ರತಿಕ್ರಿಯೆ ಕೂಡ ಉತ್ತಮ ರೀತಿಯಲ್ಲಿ ದೊರೆಯಲಿಲ್ಲ. ಹಾಗಾಗಿ ಕೇವಲ 20 ದಿನದಲ್ಲಿ ಸಿನಿಮಾ ಓಟಿಟಿಗೆ (OTT) ಬರುತ್ತಿದೆ. ಏಪ್ರಿಲ್ 26ರಿಂದ ಅಮೆಜಾನ್ ನಲ್ಲಿ ಲಭ್ಯವಿದೆ.
Advertisement
ವಿಜಯ್ ಮತ್ತು ಮೃಣಾಲ್ ಠಾಕೂರ್ (Mrunal Thakur) ನಟನೆಯ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಸಿನಿಮಾ ನಿರೀಕ್ಷೆಯನ್ನು ಸುಳ್ಳು ಮಾಡಿತ್ತು. ಲೈಗರ್, ಖುಷಿ ಸಿನಿಮಾದ ನಂತರ ‘ಫ್ಯಾಮಿಲಿ ಸ್ಟಾರ್’ ಚಿತ್ರದ ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆಯಿತ್ತು. ಈ ಸಿನಿಮಾ ವಿಜಯ್ ದೇವರಕೊಂಡ ಕೆರಿಯರ್‌ಗೆ ತಿರುವು ಕೊಡಲಿದೆ ಎಂದೇ ಹೇಳಲಾಗಿತ್ತು. ಆದರೆ ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
Advertisement
Advertisement
ಈ ಹಿಂದೆ ‘ಲೈಗರ್’ ಸಿನಿಮಾ ಹೀನಾಯವಾಗಿ ಸೋತಿತ್ತು. ಒಟ್ಟು 60 ಕೋಟಿ ರೂ. ಅಸುಪಾಸಿನಲ್ಲಿ ಕಲೆಕ್ಷನ್ ಮಾಡಿತ್ತು. ಆದರೆ ಫ್ಯಾಮಿಲಿ ಸ್ಟಾರ್ ಚಿತ್ರ ಲೈಗರ್‌ಗಿಂತ ಕಮ್ಮಿ ಕಲೆಕ್ಷನ್ ಮಾಡಿ ಫ್ಲಾಪ್ ಲಿಸ್ಟ್ ಸೇರಿದೆ. ಕಲೆಕ್ಷನ್ ವಿಚಾರದಲ್ಲಿ 10 ಕೋಟಿ ರೂ. ಗಡಿ ಕೂಡ ಈ ಚಿತ್ರ ದಾಟಿಲ್ಲ. ಹಾಗಾಗಿ ‘ಲೈಗರ್’ ಚಿತ್ರದ ನಂತರ ಮತ್ತೊಮ್ಮೆ ಸೋಲಿನ ಬಿಸಿ ವಿಜಯ್‌ಗೆ ತಾಗಿದೆ.
Advertisement
ವಿಜಯ್ ಮತ್ತು ಮೃಣಾಲ್ (Mrunal Thakur) ಟ್ರ್ಯಾಕ್ ಅದ್ಭುತವಾಗಿ ಮೂಡಿ ಬಂದಿದೆ. ಕಥೆಯಲ್ಲಿ ಸಿನಿಮಾ ತಂಡ ಪಲ್ಟಿ ಹೊಡೆದಿದೆ. ಸ್ಟೋರಿ ಲೈನ್ ಜನರ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಏ.5ರಂದು ಫ್ಯಾಮಿಲಿ ಸ್ಟಾರ್ ತೆಲುಗು ಮತ್ತು ತಮಿಳಿನಲ್ಲಿ ರಿಲೀಸ್ ಆಗಿತ್ತು. ಎರಡೂ ಕಡೆಯೂ ಅಷ್ಟೇನೂ ಪ್ರತಿಕ್ರಿಯೆ ದೊರೆಯಲಿಲ್ಲ.