ಬೆಂಗಳೂರು: ಅತ್ತೆಯನ್ನು ತಾಯಿ ಸ್ಥಾನದಲ್ಲಿ ನೋಡುತ್ತಾರೆ. ಆದರೆ ನಗರದಲ್ಲಿ ಅತ್ತೆಯನ್ನು ಕೊಲ್ಲಲು ಸೊಸೆ ವೈದ್ಯರ ಬಳಿಯೇ ಮಾತ್ರೆ ಕೇಳಿದ ಘಟನೆಯೊಂದು ನಡೆದಿದೆ. ಡಾಕ್ಟರ್ ಒಬ್ಬರಿಗೆ ನನ್ನ ಅತ್ತೆಯನ್ನು ಸಾಯಿಸಲು ಮಾತ್ರೆ ಬರೆದುಕೊಡಿ ಎಂದು ಕೇಳಿದ್ದು, ಡಾಕ್ಟರ್ ಒಂದು ಕ್ಷಣ ಶಾಕ್ ಆಗಿದ್ದಾರೆ.
ಹೌದು, ಅತ್ತೆ ಜೊತೆಗಿನ ಜಗಳಕ್ಕೆ ರೋಸಿ ಹೋದ ಸೊಸೆಯೊಬ್ಬರು, ಅವರನ್ನು ಕೊಲ್ಲುವ ಪ್ಲ್ಯಾನ್ ಮಾಡಿದ್ದಾರೆ. ಬಳಿಕ ಡಾಕ್ಟರ್ ಸುನೀಲ್ ಕುಮಾರ್ ಎನ್ನುವವರಿಗೆ ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ್ದಾರೆ. ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ. ಅವರನ್ನು ಹೇಗೆ ಸಾಯಿಸೋದು? ಒಂದೆರೆಡು ಮಾತ್ರೆ ತೆಗೆದುಕೊಂಡರೆ ಸಾಯುತ್ತಾರಲ್ಲ, ಅದನ್ನು ಹೇಳಿ ಎಂದು ಮೆಸೇಜ್ ಮೂಲಕ ಕೇಳಿದ್ದಾರೆ. ಇದನ್ನು ಕೇಳಿ ಶಾಕ್ ಆದ ಡಾಕ್ಟರ್ ಸಂಜಯ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ದೆಹಲಿ ಸಿಎಂ ಕುತೂಹಲಕ್ಕೆ ಇಂದು ತೆರೆ, ನಾಳೆ ಬೆಳಗ್ಗೆ 11:30ಕ್ಕೆ ಪ್ರಮಾಣವಚನ – ರೇಸ್‌ನಲ್ಲಿ ಯಾರಿದ್ದಾರೆ?
Advertisement
Advertisement
ಮಹಿಳೆ ಮಾತ್ರೆ ಕೇಳುವಾಗ ಈ ತರ ಮಾತ್ರೆ ಕೇಳುವುದು ತಪ್ಪು ಎಂದು ವೈದ್ಯರು ಬುದ್ಧಿಮಾತು ಹೇಳಿದ್ದಾರೆ. ವೈದ್ಯರು ಬುದ್ಧಿ ಹೇಳುತ್ತಿದ್ದಂತೆ, ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ ಮಹಿಳೆ ಡಾಕ್ಟರ್ ನಂಬರ್‌ನ ಬ್ಲಾಕ್ ಮಾಡಿದ್ದಾರೆ. ಇದಕ್ಕಿಂತ ಮುಂಚೆಯೇ ಸ್ಕ್ರೀನ್‌ಶಾಟ್ ಪಡೆದಿದ್ದ ವೈದ್ಯ ಸುನೀಲ್ ಕುಮಾರ್ ಸಂಜಯ್ ನಗರ ಪೊಲೀಸರಿಗೆ ಮಾಹಿತಿ ನೀಡಿ, ತನಿಖೆ ಮಾಡಿ ಎಂದು ಮನವಿ ಮಾಡಿದ್ದಾರೆ.
Advertisement
ಸದ್ಯ ಅತ್ತೆಯನ್ನು ಸಾಯಿಸಲು ಮಾತ್ರೆ ಕೇಳಿದ ಮಹಿಳೆಯ ಫೋನ್ ಸ್ವಿಚ್ಡ್ಆಫ್ ಆಗಿದ್ದು, ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ ಬಳಿಕ ಅಸಲಿ ಸತ್ಯ ಬಯಲಾಗಲಿದೆ.ಇದನ್ನೂ ಓದಿ: ಶಿರಾಡಿಘಾಟ್‌ನಲ್ಲಿ ಸುರಂಗ, ಗ್ರೀನ್‌ಫೀಲ್ಡ್ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ಕೇಂದ್ರ ಒಪ್ಪಿಗೆ