ಬೆಂಗಳೂರು: HSR ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿದ ಅಂತರರಾಷ್ಟ್ರೀಯ ದರ್ಜೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣವನ್ನು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಉದ್ಘಾಟನೆ ಕಂದಾಯ ಸಚಿವ ಆರ್. ಅಶೋಕ್ ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಅವರು, ಬೆಂಗಳೂರಿನ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸುಮಾರು 6 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಬೆಂಗಳೂರಿನ ಎಲ್ಲ ರಸ್ತೆಗಳನ್ನು ನೂತನವಾಗಿ ನಿರ್ಮಿಸಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ. ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸರ್ಕಾರ 206 ಕೋಟಿ ಅನುದಾನವನ್ನು ಈಗಾಗಲೇ ನೀಡಲಾಗಿದೆ. ಬೆಂಗಳೂರಿನಲ್ಲಿ ಪಾರ್ಕ್‍ಗಳು, ಕ್ರೀಡಾಂಗಣ ಇವುಗಳನ್ನು ಅಭಿವೃದ್ಧಿ ಪಡಿಸಬೇಕು. ಈ ಕ್ರೀಡಾಂಗಣಕ್ಕೆ ಅಜಾತಶತ್ರು ವಾಜಪೇಯಿ ಅವರ ಹೆಸರನ್ನು ಇಟ್ಟಿದ್ದು ಸಾರ್ಥಕ. ಯಾಕೆಂದರೆ ಬೆಂಗಳೂರಿಗೆ ಮೆಟ್ರೊ, ಅಂತರರಾಷ್ಟ್ರೀಯ ಏರ್‌ಪೋರ್ಟ್, ಕಾವೇರಿ 4 ಹಂತದ ಕುಡಿಯುವ ನೀರಿನ ಯೋಜನೆ ವಾಜಪೇಯಿ ಮತ್ತು ಅನಂತ್ ಕುಮಾರ್ ಅವರ ಕೊಡುಗೆ ಎಂದರು. ಇದನ್ನೂ ಓದಿ: ಖಾರ್ಕಿವ್‍ನ ಆಡಳಿತ ಕಚೇರಿ ಮೇಲೆ ಬಾಂಬ್ ದಾಳಿ- ಕಟ್ಟಡ ಸಂಪೂರ್ಣ ಧ್ವಂಸ
Advertisement
Advertisement
ಅಧಿಕಾರ ಇದ್ದಾಗ ಏನು ಮಾಡದೇ ಅಧಿಕಾರ ಕೊಡಿ ಮಾಡುತ್ತೇವೆ ಎಂದರೆ ಯಾರು ನಂಬಲ್ಲ. ಅಧಿಕಾರ ಇದ್ದಾಗ ವಿಶ್ರಾಂತಿ ಪಡೆದು, ಅಧಿಕಾರಕ್ಕಾಗಿ ಹೋರಾಟ ಮಾಡಿದರೆ ರಾಜ್ಯದ ಜನ ನಂಬುವುದಿಲ್ಲ. ನಾವು ಪಾದಯಾತ್ರೆ ಮಾಡದೇ ಅಭಿವೃದ್ಧಿ ಮಾಡುತ್ತೇವೆ. ಕೆಲಸಕ್ಕಾಗಿ ಪಾದಯಾತ್ರೆ ಮಾಡಬೇಕು. ರಾಜಕೀಕ್ಕಾಗಿ ಅಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಾದಯಾತ್ರೆಯನ್ನು ಲೇವಡಿ ಮಾಡಿದರು.
Advertisement
Advertisement
ಈ ಸಂದರ್ಭದಲ್ಲಿ ಶಾಸಕ ಸತೀಶ್ ರೆಡ್ಡಿ, ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಬಿಬಿಎಂಪಿ ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ ಗುಪ್ತ ಹಾಗೂ ಇತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಜಾರ್ಖಂಡ್ ದೋಣಿ ದುರಂತದಲ್ಲಿ 14 ಮಂದಿ ಸಾವು – ಸಿಎಂನಿಂದ 4 ಲಕ್ಷ ಪರಿಹಾರ ಘೋಷಣೆ