ಶಿವಮೊಗ್ಗ: ಚುನಾವಣೆ ಮುನ್ನ ರಾಜ್ಯ ಬಿಜೆಪಿಯಲ್ಲಿ ಭಾರೀ ಬೆಳವಣಿಗೆ ಆಗುತ್ತಿದೆ. ಅದರಲ್ಲೂ ಇತ್ತೀಚೆಗೆ ಬಿಜೆಪಿಯಲ್ಲಿ ಲಿಂಗಾಯತರ ಕಡೆಗಣನೆ ಆರೋಪ ಮಾಡಿದ್ದವರಿಗೆ ಹೈಕಮಾಂಡ್ ಠಕ್ಕರ್ ಕೊಡಲು ಮುಂದಾದಂತಿದೆ.
Advertisement
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ (BS Yediyurappa) ಸೈಡ್‍ಲೈನ್ ಮಾಡಲಾಗಿದೆ ಅಂತ ಟೀಕೆಗಳು ಹೆಚ್ಚಾಗಿದ್ದವು. ಅಲ್ಲದೆ ವಿಜಯೇಂದ್ರ (B Y Vijayendra) ಗೆ ಟಿಕೆಟ್ ವಿಚಾರದಲ್ಲಿ ವಿಪಕ್ಷಗಳ ಟೀಕೆಗಳು ಹೈಕಮಾಂಡ್ ಅಂಗಳಕ್ಕೆ ತಲುಪಿದ್ದವು. ಈ ಬೆನ್ನಲ್ಲೇ ಎಲ್ಲ ಗೊಂದಲಗಳಿಗೆ ಬಿಜೆಪಿ ಹೈಕಮಾಂಡ್ (BJP HighCommand) ಮದ್ದು ಅರೆದಿದೆ. ಯಡಿಯೂರಪ್ಪ, ವಿಜಯೇಂದ್ರ ಕಡೆಗಣನೆ ಆರೋಪಕ್ಕೆ ತೆರೆ ಎಳೆದಿದೆ.
Advertisement
Advertisement
ಶಿವಮೊಗ್ಗದಲ್ಲಿ ನಿರ್ಮಾಣಗೊಂಡಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಿಂಗಾಯತ ಸಮುದಾಯದ ನಾಯಕ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಹೆಸರಿಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಈ ಬಗ್ಗೆ ಖುದ್ದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಶಿವಮೊಗ್ಗ ಎರ್ ಪೋರ್ಟ್‍ಗೆ ಯಡಿಯೂರಪ್ಪನವರ ಹೆಸರು ಇಡಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ಸಚಿವ ಸಂಪುಟದಲ್ಲಿ ಯಡಿಯೂರಪ್ಪನವರ ಹೆಸರು ಇಡಲು ಒಪ್ಪಿಗೆ ಸಿಕ್ಕಿದೆ ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
Advertisement
ಇದೇ 27ಕ್ಕೆ ಪ್ರಧಾನಿ ಮೋದಿ (Narendra Modi) ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟಿಸಲಿದ್ದಾರೆ. ವಿಮಾನ ನಿಲ್ದಾಣ ಲೋಕಾರ್ಪಣೆಗೆ ಮೋದಿಯೇ ಆಗಮಿಸುತ್ತಿರೋದು ಮತ್ತೊಂದು ವಿಶೇಷ. ಅಂದೇ ಯಡಿಯೂರಪ್ಪ ಹುಟ್ಟುಹಬ್ಬ ಇರೋದ್ರಿಂದ ಬಿಜೆಪಿ ಗಿಫ್ಟ್ ನೀಡಲಿದೆ. ಮುಖ್ಯವಾಗಿ ಯಡಿಯೂರಪ್ಪ ಕಡೆಗಣನೆ ಆರೋಪಕ್ಕೆ ಈ ಮೂಲಕ ಉತ್ತರ ಕೊಡಲು ಬಿಜೆಪಿ ಮುಂದಾಗಿದೆ. ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಹೆಚ್ವು ಜನರು ಭಾಗವಹಿಸಬೇಕು ಅಂತ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ ಗುರು ಶಿಷ್ಯರ ಹಳೇ ಆಟ – ಸಿದ್ದು, ಜಮೀರ್ ಗೇಮ್ ಏನು?
ಯಡಿಯೂರಪ್ಪ ಜೊತೆಗೆ ಪುತ್ರ ವಿಜಯೇಂದ್ರಗೂ ಪಕ್ಷದಲ್ಲಿ ಮತ್ತಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಪಕ್ಷದ ಏಳು ಮೋರ್ಚಾಗಳ ಸಮಾವೇಶಗಳ ಆಯೋಜನೆಗೆ ವಿಜಯೇಂದ್ರ ಅವರನ್ನ ಉಸ್ತುವಾರಿಯನ್ನಾಗಿ ನೇಮಿಸಿದೆ. ಈ ಮೂಲಕ ಒಂದೇ ಕಲ್ಲಿಗೆ 2 ಹಣ್ಣು ಉದುರಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ. ಒಟ್ಟಿನಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರಗೆ ಬಿಜೆಪಿ ಹೈಕಮಾಂಡ್ ಬಹುಪರಾಕ್ ಎಂದಿದೆ. ಈ ಮೂಲಕ ಲಿಂಗಾಯತರ ಕಡೆಗಣನೆ ಆರೋಪದಿಂದ ಉಂಟಾದ ಡ್ಯಾಮೇಜ್ ಕಂಟ್ರೋಲ್‍ಗೆ ಹೈಕಮಾಂಡ್ ಮುಂದಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k