ಬೆಂಗಳೂರು: ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು ಬರುತ್ತಿದೆ. ಮಂಗಳವಾರದಿಂದ ಹುಬ್ಬಳ್ಳಿ-ಬೆಂಗಳೂರು (Hubballi- Bengaluru Vande Bharat Train) ನಡುವೆ ವಂದೇ ಭಾರತ್ ರೈಲು ಸಂಚಾರ ಶುರು ಮಾಡಲಿದೆ.
ಜೂನ್ 26ರ ಮಂಗಳವಾರ ಬೆಳಗ್ಗೆ 9 ಗಂಟೆಗೆ ವರ್ಚೂವಲ್ ಆಗಿ ಪ್ರಧಾನಿ ಮೋದಿ (Narendra Modi) ವಂದೇ ಭಾರತ್ ರೈಲಿಗೆ ಹಸಿರುನಿಶಾನೆ ತೋರಿಸಲಿದ್ದಾರೆ. ಆದರೆ ಧಾರವಾಡದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಹ್ವಾನ ಹೋಗಿಲ್ಲ. ಈ ಬಗ್ಗೆ ಸಚಿವ ಸಂತೋಷ್ ಲಾಡ್ (Santhosh Lad) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
Advertisement
ಪ್ರಧಾನಿ ಮೋದಿ ರಾಷ್ಟ್ರಪತಿಗಳನ್ನೇ ಸೇರಿಸಿಕೊಳ್ಳುವುದಿಲ್ಲ..ಇನ್ನು ನಮ್ಮದೇನು ಮಹಾ? ಇದು ಸರ್ವಾಧಿಕಾರಿ ಧೋರಣೆ. ದೇವರು ಅವರಿಗೆ ಒಳ್ಳೆಯದು ಮಾಡ್ಲಿ ಎಂದು ಲೇವಡಿ ಮಾಡಿದ್ರು. ಈ ಮಧ್ಯೆ ಈ ವಂದೆ ಭಾರತ್ ರೈಲನ್ನು ಬೆಳಗಾವಿವರೆಗೂ ಓಡಿಸಬೇಕು ಎಂದು ಕರವೇ ಆಗ್ರಹಿಸಿದೆ. ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ಪತ್ರ ಸಲ್ಲಿಸಿದೆ.
Advertisement
ಅಂದ ಹಾಗೇ, ನಾಳೆ ಒಂದೇ ದಿನ ಕರ್ನಾಟಕದ್ದು ಸೇರಿ ಐದು ಹೊಸ ವಂದೇ ಭಾರತ್ ರೈಲುಗಳು ಹಳಿಯೇರಲಿದೆ. ಇದರೊಂದಿಗೆ ವಂದೇ ಭಾರತ್ ರೈಲುಗಳ ಸಂಖ್ಯೆ 24ಕ್ಕೇರಲಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ತೀವ್ರಗೊಂಡ ಒಳಜಗಳ- ವೇದಿಕೆಯಲ್ಲಿಯೇ ಯತ್ನಾಳ್, ನಿರಾಣಿ ಪರಸ್ಪರ ಟಾಂಗ್
Advertisement