ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಕಾಂತಾರ (Kantara) ಸಿನಿಮಾ ರಿಲೀಸ್ ಆಗಿದೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಡಬ್ (Dubbed) ಆಗಿ ಸಿನಿಮಾ ಬಿಡುಗಡೆ ಆಗಿದ್ದು, ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ತುಳುನಾಡಿನ ಆರಾದ್ಯ ದೈವದ ಕುರಿತಾದ ಸಿನಿಮಾ ಇದಾಗಿದ್ದರಿಂದ, ಈ ಸಿನಿಮಾವನ್ನು ತುಳುವಿಗೂ ಡಬ್ ಮಾಡಬೇಕು ಎನ್ನುವುದು ನಿರ್ಮಾಪಕ ವಿಜಯ್ ಕಿರಗಂದೂರು ಆಸೆಯಂತೆ. ಹಾಗಾಗಿ ಈ ಸಿನಿಮಾವನ್ನು ತುಳುವಿಗೂ ಡಬ್ ಮಾಡುತ್ತಾರಂತೆ ಚಿತ್ರತಂಡ.
Advertisement
ಈ ಕುರಿತು ಧರ್ಮಸ್ಥಳದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ (Rishabh Shetty), ‘ಕಾಂತಾರ ಸಿನಿಮಾವನ್ನು ತುಳು ಭಾಷೆಗೆ ಡಬ್ ಮಾಡಬೇಕು ಎನ್ನುವುದು ನಿರ್ಮಾಪಕರ ಆಸೆ. ಹಾಗಾಗಿ ಈ ಚಿತ್ರವನ್ನು ತುಳುಗೆ (Tulu) ಡಬ್ ಮಾಡಲಾಗುತ್ತದೆ. ಈಗಾಗಲೇ ಸಿನಿಮಾ ಎಲ್ಲ ಕಡೆ ಪ್ರದರ್ಶನ ಕಂಡಿದೆ. ದಾಖಲೆ ರೀತಿಯಲ್ಲಿ ಗೆಲುವು ಸಾಧಿಸಿದೆ. ಇದೆಲ್ಲ ಸಾಧ್ಯವಾಗಿದ್ದು ದೈವದ ಕಾರಣದಿಂದ. ಹಾಗಾಗಿ ಈ ಸಿನಿಮಾವನ್ನು ತುಳುವಿನಲ್ಲೂ ಡಬ್ ಮಾಡಲ ಯೋಚನೆ ಮಾಡಿದ್ದೇವೆ. ಆದಷ್ಟು ಬೇಗ ಮಾಡಲಾಗುವುದು’ ಎಂದಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ವಿಜಯ್ ದೇವರಕೊಂಡ- ರಶ್ಮಿಕಾ
Advertisement
Advertisement
ಕಾಂತಾರ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಬರುವ ವರಾಹ ರೂಪಂ ಹಾಡಿನ ವಿವಾದ ಕುರಿತು ಈ ಸಂದರ್ಭದಲ್ಲಿ ಮಾತನಾಡಿರುವ ರಿಷಬ್, ‘ನಾವು ಕದ್ದಿಲ್ಲ. ಸುಖಾಸುಮ್ಮನೆ ಜನರನ್ನು ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಯಾರೇ ಕೇಳಿದರೂ, ನಾವು ಅದನ್ನು ಕದ್ದ ಹಾಡಲ್ಲ ಎಂದು ಸಾಬೀತು ಪಡಿಸುತ್ತೇವೆ ಎಂದು ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಆಗಮಿಸಿದ್ದ ರಿಷಬ್ ಶೆಟ್ಟಿ ದಂಪತಿ, ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಾರಣಕ್ಕೂ ಅದು ಕದ್ದ ಮ್ಯೂಸಿಕ್ ಅಲ್ಲ ಎಂದು ನುಡಿದಿದ್ದಾರೆ.
Advertisement
ಕಾಂತಾರ ಸಿನಿಮಾ ಅಂದಾಕ್ಷಣ ಥಟ್ಟನೆ ನೆನಪಾಗುವ ಹಾಡು ‘ವರಾಹ ರೂಪಂ’ ಗೀತೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಈ ಗೀತೆಯು ಸಿನಿಮಾದ ಗಟ್ಟಿತನವನ್ನು ಮತ್ತಷ್ಟು ಹೆಚ್ಚಿಸಿತ್ತು. ಕ್ಲೈಮ್ಯಾಕ್ಸ್ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಲು ಕಾರಣವೂ ಆಗಿತ್ತು. ಈ ಹಾಡಿನ ವಿರುದ್ಧ ಟ್ಯೂನ್ ಕದ್ದ ಆರೋಪ ಕೇಳಿ ಬಂದಿತ್ತು. ಇತ್ತೀಚೆಗಷ್ಟೇ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ನ ಸದಸ್ಯರು ಕೋರ್ಟಿಗೆ ಮೊರೆ ಹೋಗಿದ್ದರು. ಹಾಗಾಗಿ ಕೋಯಿಕ್ಕೋಡ್ ಕೋರ್ಟ್ ಸಿನಿಮಾದಲ್ಲಿ ಈ ಹಾಡು ಬಳಸದಂತೆ ತಡೆಯಾಜ್ಞೆ ನೀಡಿತ್ತು.
ಆದರೂ, ಕಾಂತರ ಸಿನಿಮಾದ ತಂಡ ನಾವು ಯಾವುದೇ ರೀತಿಯಲ್ಲಿ ಹಾಡನ್ನು ಕಾಪಿ ಮಾಡಿಲ್ಲ. ಹಾಗಾಗಿ ಚಿತ್ರದಲ್ಲಿ ಆ ಹಾಡು ಇರತ್ತೆ ಎಂದು ಈವರೆಗೂ ಥಿಯೇಟರ್ ನಲ್ಲಿ ಅದನ್ನು ಮುಂದುವರೆಸಿಕೊಂಡು ಬಂದಿದ್ದರು. ಇದೀಗ ಮತ್ತೊಂದು ಕೇಸ್ ದಾಖಲಾಗಿದ್ದು, ಮಾತೃಭೂಮಿ ಮ್ಯೂಸಿಕ್ ಸಂಸ್ಥೆಯು ಮತ್ತೆ ಕೋರ್ಟ್ ಮೊರೆ ಹೋಗಿದೆ. ಹಾಗಾಗಿ ಅರ್ಜಿಯ ವಿಚಾರಣೆ ನಡೆಸಿರುವ ಪಾಲಕ್ಕಾಡ್ ಕೋರ್ಟ್ ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ.