ಸ್ಯಾಂಡಲ್‌ವುಡ್ ಮತ್ತೊಂದು ಮದುವೆ ಸಂಭ್ರಮ ಮನೆ ಮಾಡಿದೆ. ತಾರಾ ಜೋಡಿಯಾದ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ (Tharun-Sonal Wedding) ಆರತಕ್ಷತೆ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ತಾರಾ ಬಳಗದ ದಂಡೇ ಆಗಮಿಸುತ್ತಿದ್ದು, ನವಜೋಡಿಗೆ ವಿಶ್ ಮಾಡಿದೆ.
Advertisement
ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ತರುಣ್-ಸೋನಲ್ ಆರತಕ್ಷತೆ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಸೇರಿ ತಾರಾಗಣವೇ ಆಗಮಿಸಿ ಜೋಡಿಗೆ ಶುಭಹಾರೈಸಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಆಗಮಿಸಿ ನವಜೋಡಿಗೆ ಶುಭಹಾರೈಸಿದರು. ಇದನ್ನೂ ಓದಿ: ಕಾಟೇರ ಸಿನೆಮಾ ಹಾಡಿಗೆ Tharun-Sonal ಗ್ರ್ಯಾಂಡ್ ಎಂಟ್ರಿ
Advertisement
Advertisement
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಸಂತೋಶ್ ಆನಂದ್ ರಾಮ್, ವಿಜಯ್ ರಾಘವೇಂದ್ರ, ನೆನಪಿರಲಿ ಪ್ರೇಮ್, ಸಿಂಗರ್ ಅರ್ಚನಾ ಉಡುಪ, ನಟಿಯರಾದ, ರಾಗಿಣಿ ಅಮೃತಾ ಅಯ್ಯಂಗಾರ್ ಹಾಗೂ ನಿಶ್ವಿಕಾ ನಾಯ್ಡು, ಅಮೂಲ್ಯ ಮೊದಲಾದವರು ರಿಷಪ್ಷನ್‌ಗೆ ಆಗಮಿಸಿ ತರುಣ್ ಮತ್ತು ಸೋನಲ್‌ಗೆ ವಿಶ್ ಮಾಡಿದರು.
Advertisement
ನಟಿ ಶೃತಿ ಕುಟುಂಬ, ನಟಿ ಮಾಲಾಶ್ರೀ ಮತ್ತು ಆರಾಧನಾ, ನಟಿ ಹರ್ಷಿಕಾ ಪೂಣಚ್ಚಾ, ಕಾರುಣ್ಯ ರಾಮ್, ನಟರಾದ ಉಪೇಂದ್ರ, ಡಾಲಿ ಧನಂಜಯ್, ಸೃಜನ್ ಲೋಕೇಶ್, ವಿ.ರವಿಚಂದ್ರನ್, ಜೈಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ದಂಪತಿ ಬಂದು ತಾರಾ ಜೋಡಿಗೆ ಶುಭಹಾರೈಸಿದರು. ಇದನ್ನೂ ಓದಿ: Tharun Sonal Wedding Reception: ಅವಾರ್ಡ್ ಫಂಕ್ಷನ್ ಥೀಮ್‌ನಲ್ಲಿದೆ ವಿವಾಹ ಆರತಕ್ಷತೆ ವೇದಿಕೆ
ನಟಿ ಹಾಗೂ ಮಾಜಿ ಸಂಸದೆ ಸುಮಲತಾ, ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅನುರಾಧಾ ಭಟ್, ಅನುಪಮ ಭಟ್ ಸಹೋದರಿಯರು ಆರತಕ್ಷತೆಗೆ ಆಗಮಿಸಿದ್ದರು. ನಟ ದುನಿಯಾ ವಿಜಯ್, ನಿರ್ದೇಶಕ ಯೋಗರಾಜ್ ಭಟ್, ಟಾಕ್ಸಿಕ್ ಸಿನಿಮಾ ನಿರ್ಮಾಪಕ ವೆಂಕಟ್ ನಾರಾಯಣ್, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಸುಮಾರು 10 ಸಾವಿರ ಜನರು ಆರತಕ್ಷತೆ ಹಾಗೂ ಮದುವೆಗೆ ಆಗಮಿಸುವ ನಿರೀಕ್ಷೆಯಿದೆ.