ಥಾಣೆ: ಹದಿಹರೆಯದ ಮಕ್ಕಳು ಹಲವಾರು ಕಾರಣಗಳಿಗೆ ನೊಂದು ಮನೆ ಬಿಟ್ಟು ಓಡಿ ಹೋಗುವ ಘಟನೆಗಳನ್ನು ನಾವು ಆಗಾಗ ನೋಡಿರುತ್ತೇವೆ. ಇಲ್ಲೊಬ್ಬ 13 ವರ್ಷದ ಹುಡುಗ ಮೊಬೈಲ್ ಆ್ಯಪ್ ಒಂದರ ಶೋಕಿಗೆ ಬಿದ್ದು, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದಾನೆ.
Advertisement
ಈ ವಿಚಾರ ತಿಳಿದುಕೊಂಡ ಪೋಷಕರು ಪೊಲೀಸರಿಗೆ ಮಗನನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಬಾಲಕನನ್ನು ಗೋವಾದಲ್ಲಿ ಪತ್ತೆ ಹಚ್ಚಿ ಬಳಿಕ ಆತನನ್ನು ಪೋಷಕರ ಜೊತೆ ಸೇರಿಸಿದ್ದಾರೆ.
Advertisement
Advertisement
ಏನಾಗಿತ್ತು?: ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಬದ್ಲಾಪುರ್ ಎಂಬಲ್ಲಿನ ಹುಡುಗ ಇದೇ ಅಕ್ಟೋಬರ್ 21ರಂದು ಮನೆಯಿಂದ ಹೊರಟಿದ್ದ. ಈ ವೇಳೆ ಪೋಷಕರಿಗೆ ನಾನು ಒಂದು ವರ್ಷ ದೂರ ಇರುವುದಾಗಿ ತಿಳಿಸಿದ್ದ. ಆದರೆ ಈ ವೇಳೆ ಪೋಷಕರಿಗೆ ಯಾವುದೇ ರೀತಿಯ ಅನುಮಾನ ಬಾರದಂತೆ ನಡೆದುಕೊಂಡಿದ್ದ ಎಂದು ಬದ್ಲಾಪುರ ಈಸ್ಟ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಮೋರೆ ಮಾಹಿತಿ ನೀಡಿದ್ದಾರೆ.
Advertisement
ಬಾಲಕನ ಪೋಷಕರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಬಾಲಕನ ಗೆಳೆಯರನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ ಬಾಲಕ ಡಿಸ್ಕಾರ್ಡ್ ಎಂಬ ಆ್ಯಪ್‍ನಲ್ಲಿ ಸಕ್ರಿಯನಾಗಿದ್ದ ವಿಚಾರ ಬಯಲಾಗಿದೆ. ಗ್ರೂಪ್ ಚ್ಯಾಟ್‍ನಲ್ಲಿ ಕೆಲವರು ಜೀವನದಲ್ಲಿ ಸಾಧನೆ ಮಾಡಬೇಕು, ತಮ್ಮನ್ನು ತಾವು ಸಾಬೀತು ಪಡಿಸಬೇಕು ಎಂಬ ಕಾರಣಕ್ಕೆ ಮನೆ ಬಿಟ್ಟು ದೂರ ಹೋಗಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ. ಇದನ್ನೂ ಓದಿ: ಜಿಮ್ ಮಾಡುವ ವೇಳೆ ಕೈ ಬೆರಳು ಮುರಿದುಕೊಂಡ Junior NTR
ಈ ಚ್ಯಾಟ್‍ಗಳಿಂದ ಪ್ರಭಾವಿತಾದ ಹುಡುಗ ಓಡಿ ಹೋಗಿದ್ದ. ಆತ ಚ್ಯಾಟಿಂಗ್ ಮಾಡಲು ಬಳಸಿದ್ದ ಮೊಬೈಲ್ ಫೋನ್‍ನ ಐಪಿ ಅಡ್ರೆಸ್ ಮೂಲಕ ಆತ ಗೋವಾದಲ್ಲಿದ್ದಾನೆ ಎಂದು ಸೈಬರ್ ಸೆಲ್ ಪೊಲೀಸರು ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ
ಗೋವಾದ ಕಾಲಂಗೂಟ್ ಎಂಬಲ್ಲಿದ್ದ ಆತನನ್ನು ಮತ್ತೆ ಪೋಷಕರ ಜೊತೆ ಸೇರಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.