ಹೈದರಾಬಾದ್: ಟಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ ಜೂ. ಎನ್‍ಟಿಆರ್ ಜಿಮ್‍ನಲ್ಲಿ ವರ್ಕಟ್ ಮಾಡುವ ವೇಳೆ ಕೈ ಬೆರಳಿನ ಮೂಳೆ ಮುರಿದಿದೆ.
Advertisement
ದೀಪಾವಳಿ ಹಬ್ಬಕ್ಕೆ ಜೂ.ಎನ್‍ಟಿಆರ್ ತಮ್ಮ ಮಕ್ಕಳೊಂದಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಚಿತ್ರದಲ್ಲಿ ಜೂ.ಎನ್‍ಟಿಆರ್ ಕೈಬೆರಳಿಗೆ ಬ್ಯಾಂಡೇಜ್ ಸುತ್ತಿಕೊಂಡಿರುವುದನ್ನು ಅಭಿಮಾನಿಗಳು ಗಮನಿಸಿ, ಪ್ರಶ್ನಿಸಿದ್ದರು. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ
Advertisement
Advertisement
ಜೂ.ಎನ್‍ಟಿಆರ್ ಜಿಮ್‍ನಲ್ಲಿ ವರ್ಕೌಟ್ ಮಾಡುವಾಗ ತಮ್ಮ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಬೆರಳಿನ ಮೂಳೆ ಮುರಿದಿದ್ದರಿಂದ ಹೈದರಾಬಾದ್‍ನಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಒಂದೇ ದಿನದಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಮನೆಗೆ ವಾಪಸ್ಸಾಗಿದ್ದಾರೆ. ಜೂ.ಎನ್‍ಟಿಆರ್ ಹೀಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಕೆಲವು ದಿನಗಳ ಮುಂಚೆಯಷ್ಟೆ ಜೂ.ಎನ್‍ಟಿಆರ್ ಅವರ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
Advertisement
View this post on Instagram
ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರು ಮರಣಹೊಂದಿರುವ ವಿಚಾರವನ್ನು ತಿಳಿದು ಬೆಂಗಳೂರಿಗೆ ಜೂ. ಎನ್‍ಟಿಆರ್ ಬಂದಿದ್ದರು. ಈ ವೇಳೆ ಪುನೀತ್ ಅವರ ಪಾರ್ಥಿವ ಶರೀರವನ್ನು ನೋಡುತ್ತಾ ಕಣ್ಣೀರು ಹಾಕಿದ್ದರು.