ನವದೆಹಲಿ: ಕೆಲ ಭಯೋತ್ಪಾದಕರು ಭಾರತೀಯ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ಗಳಲ್ಲಿ ರಕ್ಷಾಕವಚ ಭೇದಿಸುವ ಅಮೆರಿಕದ ಬುಲೆಟ್‌ಗಳನ್ನು ಬಳಸುತ್ತಿದ್ದಾರೆ. ಇದರಿಂದ ರಕ್ಷಣೆಗೆ ಹೊಸ ಬುಲೆಟ್‌ಪ್ರೂಪ್ ಜಾಕೆಟ್ ಬೇಕೆಂದು ಭಾರತೀಯ ಸೇನೆ ಹೇಳಿದೆ.
ಕಾಶ್ಮೀರ ಕಣಿವೆಯಲ್ಲಿನ ಕೆಲವು ಭಯೋತ್ಪಾದಕರು ಬಳಸುವ ಸುಧಾರಿತ ರೈಫಲ್‌ಗಳ ಬುಲೆಟ್‌ಗಳು ಸೈನಿಕರ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿವೆ. ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ವಾಪಸ್ ತೆರಳುವ ಸಂದರ್ಭದಲ್ಲಿ ಅಮೆರಿಕನ್ ಶಸ್ತ್ರಾಸ್ತ್ರಗಳು ಈ ತಾಲಿಬಾನ್ ವಶದಲ್ಲಿವೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ಪಠಿಸಿದ್ದಕ್ಕೆ ಬಂಧಿಸುವುದು ಸರ್ಕಾರದ ಮುರ್ಖತನ: ಫಡ್ನವೀಸ್
Advertisement
Advertisement
ಏಪ್ರಿಲ್‌ನಲ್ಲಿ ನಡೆದ ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಈ ವಿಷಯವನ್ನು ಉನ್ನತ ಸೇನಾ ಅಧಿಕಾರಿಗಳು ಚರ್ಚಿಸಿದ್ದಾರೆ. ಈ ಬುಲೆಟ್‌ಗಳಿಗೆ ಪ್ರತಿರೋಧ ಒಡ್ಡಲು ಅಗತ್ಯ ಕ್ರಮಕ್ಕೆ ಭಾರತೀಯ ಸೇನೆ ಚಿಂತಿಸಿದೆ. ಈ ಭಯೋತ್ಪಾದಕ ಗುಂಪುಗಳು ಭಾರತದಲ್ಲಿ ಹಿಂಸಾಚಾರ ನಡೆಸಲು ಅಮೆರಿಕದ ಉಳಿದ ಶಸ್ತ್ರಾಸ್ತ್ರಗಳನ್ನು ಬಳಸಬಹುದೆಂದು ಅಂದಾಜಿಸಲಾಗಿದೆ.
Advertisement
ಭಯೋತ್ಪಾದಕರು ಎನ್‌ಕೌಂಟರ್‌ಗಳ ಸಮಯದಲ್ಲಿ ಈ ಬುಲೆಟ್‌ಗಳನ್ನು ಬಳಸಿದ್ದಾರೆ. ನಾವು ಇಲ್ಲಿಯವರೆಗೆ 3 ನೇ ಹಂತದ ಜಾಕೆಟ್‌ಗಳನ್ನು ಬಳಸುತ್ತಿದ್ದೆವು. ಇನ್ಮುಂದೆ ಹೊಸ ಮಾದರಿಯ ಬುಲೆಟ್‌ಗಳ ವಿರುದ್ಧ ರಕ್ಷಣೆ ನೀಡುವ 4 ನೇ ಹಂತದ ಜಾಕೆಟ್‌ಗಳನ್ನು ನಾವು ಶೀಘ್ರದಲ್ಲೇ ಪಡೆಯುತ್ತೇವೆ ಎಂದು ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್‌ನ ಉನ್ನತ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ರೆಪೊ ದರ ಶೇ.4.40ಕ್ಕೆ ಹೆಚ್ಚಳ: ಆರ್‌ಬಿಐ ಗವರ್ನರ್ ಘೋಷಣೆ
Advertisement
ವರದಿಗಳ ಪ್ರಕಾರ, ಅಮೆರಿಕದ ಪಡೆ ಹೆಲಿಕಾಪ್ಟರ್‌ಗಳು, ಪದಾತಿ ದಳದ ಯುದ್ಧ ವಾಹನಗಳು, ಸಂವಹನ ಉಪಕರಣಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಸುಮಾರು 7-8 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಅಫ್ಘಾನ್‌ನಲ್ಲಿ ಬಿಟ್ಟು ಹೋಗಿದೆ. ಅದರ ಬಹುಪಾಲು ಭಾಗವನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಇಸ್ಲಾಮಿ ಭಯೋತ್ಪಾದಕ ಸಂಘಟನೆಗಳು ಸಹ ಈ ಶಸ್ತ್ರಾಸ್ತ್ರಗಳನ್ನು ಬಳಸುತ್ತಿವೆ.
ಈ ಹಿಂದೆಯೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಬಳಿ ಅಮೆರಿಕ ಮೂಲದ ಎಂ-16 ಅಸಾಲ್ಟ್ ರೈಫಲ್‌ಗಳು ಹಾಗೂ ಎಂ-4ಎ ಕಾರ್ಬೈನ್‌ಗಳು ಪತ್ತೆಯಾಗಿದ್ದವು. ಅಮೆರಿಕದ ಪಡೆಗಳು ತಮ್ಮ ಅವಸರದ ನಿರ್ಗಮನದ ಸಮಯದಲ್ಲಿ ಅಫ್ಘಾನಿಸ್ತಾನದಲ್ಲಿ ಈ ರೀತಿಯ ರೈಫಲ್‌ಗಳನ್ನು ಬಿಟ್ಟು ಹೋಗಿವೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಸೆಲ್ಫಿ ವೀಡಿಯೋ ಮಾಡುತ್ತಿದ್ದ ಯುವಕ- ರೈಲಿಗೆ ಸಿಲುಕಿ ಸಾವು