LatestMain PostNational

ಸೆಲ್ಫಿ ವೀಡಿಯೋ ಮಾಡುತ್ತಿದ್ದ ಯುವಕ- ರೈಲಿಗೆ ಸಿಲುಕಿ ಸಾವು

ಚೆನ್ನೈ: ಯುವಕನೋರ್ವ ಸೆಲ್ಫಿ ವೀಡಿಯೋ ಮಾಡಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ರೈಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ವಲ್ಲೂರು ಜಿಲ್ಲೆಯ ಗುಡಿಯಾಟ್ಟಂಖ ಬಳಿ ನಡೆದಿದೆ.

ವಸಂತ್ ಕುಮಾರ್(23) ಮೃತ ವ್ಯಕ್ತಿ. ಕೇಬಲ್ ಟಿವಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಲು ರೀಲ್ಸ್ ಹಾಗೂ ವೀಡಿಯೋವನ್ನು ಮಾಡುತ್ತಿದ್ದರು.

ಈ ಹಿನ್ನೆಲೆಯಲ್ಲಿ ಗುಡಿಯಾಟ್ಟಂ ಬಳಿಯ ಮೆಲತ್ತೂರು ರೈಲು ನಿಲ್ದಾಣಕ್ಕೆ ರೀಲ್ಸ್ ಮಾಡಲು ಗೆಳೆಯರೊಂದಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ರೈಲ್ವೆ ನಿಲ್ದಾಣದಲ್ಲಿ ಸೆಲ್ಫಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಬೇಕು ಎಂದು ಕೊಂಡಿದ್ದ. ಈ ಹಿನ್ನೆಲೆಯಲ್ಲಿ ವೀಡಿಯೋ ಮಾಡುತ್ತಿದ್ದ ವೇಳೆ ಚಲಿಸುತ್ತಿದ್ದ ರೈಲಿಗೆ ಸಿಲುಕಿದ್ದಾನೆ. ಇದರಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಆರೋಗ್ಯಮೇಳದಲ್ಲಿ ಭಾಗವಹಿಸಿ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ: ಸುಧಾಕರ್

ಮಾಹಿತಿ ಪಡೆದ ಜೋಲಾರಪೇಟೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗುಡಿಯಾಟ್ಟಂ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ವಿನಾಃಕಾರಣ ಸರ್ಕಾರವನ್ನು ಟೀಕಿಸುತ್ತಿದ್ದಾರೆ: ಆರಗ ಜ್ಞಾನೇಂದ್ರ

Leave a Reply

Your email address will not be published.

Back to top button