ಶಿಮ್ಲಾ: ಭಾರೀ ಮಳೆಗೆ ಹಿಮಾಚಲ ಪ್ರದೇಶದ (Himachal Pradesh) ಶಿಮ್ಲಾದಲ್ಲಿ (Shimla) ಶಿವ ದೇವಾಲಯವೊಂದು ಕುಸಿದು ಬಿದ್ದಿದ್ದು (Temple Collapse) ಅವಶೇಷಗಳಡಿ ಸಿಲುಕಿ ಹಲವರ ಸಾವಾಗಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ 9 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಭಾರೀ ಮಳೆಯಿಂದಾಗಿ ದೇವಾಲಯ ಕುಸಿದಿದೆ. ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದ ಭಕ್ತರ ಮೇಲೆ ದೇವಾಲಯ ಕುಸಿದಿದೆ. ದೇವಾಲಯದಡಿ ಸಿಲುಕಿರುವವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ತಿಳಿಸಿದ್ದಾರೆ.
Advertisement
Advertisement
ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಅಧಿಕಾರಿಗಳು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದುರ್ಘಟನೆಯ ಸಂದರ್ಭ ದೇವಾಲಯದ ಆವರಣದಲ್ಲಿ ಸುಮಾರು 50 ಜನರಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಹಿಮಾಚಲದಲ್ಲಿ ಮೇಘಸ್ಫೋಟಕ್ಕೆ 7 ಬಲಿ – ಕೊಚ್ಚಿ ಹೋದ ಮನೆಗಳು
Advertisement
ಭಾರೀ ಮಳೆಯ ಪರಿಣಾಮವಾಗಿ ಸಮ್ಮರ್ ಹಿಲ್‌ನಲ್ಲಿರುವ ಶಿವ ಮಂದಿರ ಕುಸಿದು ಬಿದ್ದಿದೆ. ಸದ್ಯಕ್ಕೆ 9 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸ್ಥಳೀಯ ಆಡಳಿತವು ಅವಶೇಷವನ್ನು ತೆರವುಗೊಳಿಸಲು ಹಾಗೂ ಸಿಲುಕಿರುವವರನ್ನು ರಕ್ಷಿಸಲು ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
Advertisement
ಈ ನಡುವೆ ಹಿಮಾಚಲ ಪ್ರದೇಶದ ಸೋಲನ್‌ನ ಹಳ್ಳಿಯೊಂದರಲ್ಲಿ ಮೇಘಸ್ಫೋಟವಾಗಿದ್ದು, 7 ಜನರು ಸಾವನ್ನಪ್ಪಿದ್ದಾರೆ. ಹಲವು ಮನೆಗಳು ಭಾರೀ ಮಳೆಗೆ ಕೊಚ್ಚಿಕೊಂಡು ಹೋಗಿವೆ. 6 ಜನರನ್ನು ರಕ್ಷಿಸಲಾಗಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: 10,000 ಪೊಲೀಸರು.. ಆ್ಯಂಟಿ ಡ್ರೋನ್ ಸಿಸ್ಟಮ್, ಅತ್ಯಾಧುನಿಕ ಕ್ಯಾಮೆರಾ – ಸ್ವಾತಂತ್ರ್ಯೋತ್ಸವಕ್ಕೆ ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ
Web Stories