ರಾಜ್ಯದಲ್ಲಿ ರಾಜಕೀಯ (Politics) ಕಾವು ಜೋರಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ತೆರೆಮರೆಯಲ್ಲಿ ತಯಾರಿ ಜೋರಾಗಿ ನಡೆಯುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಜಾಗೃತಿಗಾಗಿ ರಾಜ್ಯದ ಕೆಲವು ಜಿಲ್ಲೆಗಳಿಗೆ ಚುನಾವಣಾ ನೇಮಕ ಮಾಡಲಾಗಿದೆ. ಅದರಂತೆಯೇ ರಾಯಚೂರು (Raichur) ಜಿಲ್ಲೆಗೆ ಸ್ಟಾರ್ ನಿರ್ದೇಶಕ ರಾಜಮೌಳಿ (Rajamouli) ಅವರನ್ನು ಚುನಾವಣಾ (Election) ರಾಯಭಾರಿಯಾಗಿ (Ambassador) ನೇಮಕ ಮಾಡಿದೆ. ಇದನ್ನೂ ಓದಿ: ಅಪ್ಪು ನಟಿಸಬೇಕಿದ್ದ ಕತೆಯಲ್ಲಿ ವಿನಯ್ ರಾಜ್‌ಕುಮಾರ್ ಹೀರೋ
Advertisement
ರಾಜಮೌಳಿ ಅವರು ತನ್ನ ಹುಟ್ಟೂರಿಗೆ ಚುನಾವಣಾ ರಾಯಭಾರಿಯಾಗಿರುವುದು ವಿಶೇಷ. ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ ಸೇರಿ ಹತ್ತು ಜಿಲ್ಲೆಗಳಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಚುನಾವಣಾ ರಾಯಭಾರಿಗಳಾಗಿ ನೇಮಕ ಮಾಡಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಪೈಕಿ ರಾಜಮೌಳಿ ಹೆಸರು ಸಾಕಷ್ಟು ಗಮನ ಸೆಳೆದಿದೆ. ಎಸ್.ಎಸ್ ರಾಜಮೌಳಿ ಅವರನ್ನ ನೇಮಕ ಮಾಡಿರುವ ಬಗ್ಗೆ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.
Advertisement
Advertisement
ರಾಯಚೂರು ಜಿಲ್ಲೆ ಕರ್ನಾಟಕ ಹಾಗೂ ಆಂಧ್ರ ಗಡಿಯಲ್ಲಿದೆ. ಇದರ ಜೊತೆಗೆ ರಾಜಮೌಳಿಗೆ ರಾಯಚೂರು ಜಿಲ್ಲೆಯ ಕನೆಕ್ಷನ್ ಕೂಡ ಇದೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಆಂಧ್ರದಲ್ಲಿ ಜಮೀನು ಹೊಂದಿದ್ದರು. ಆದರೆ, ರೈಲ್ವೇ ಟ್ರ‍್ಯಾಕ್ ನಿರ್ಮಾಣದಿಂದ ಜಮೀನನ್ನು ಕಳೆದುಕೊಂಡರು. ಈ ವೇಳೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರು 1968ರಲ್ಲಿ ರಾಯಚೂರಿಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ 7 ಎಕರೆ ಭತ್ತದ ಜಮೀನು ಪಡೆದು ಅಲ್ಲಿಯೇ ಕೃಷಿ ಮಾಡಿದರು. ರಾಜಮೌಳಿ ಹುಟ್ಟಿದ್ದು 1973ರಲ್ಲಿ. 1977ರಲ್ಲಿ ವಿಜಯೇಂದ್ರ ಪ್ರಸಾದ್ ಅವರು ಕುಟುಂಬ ಸಮೇತ ಮತ್ತೆ ಆಂಧ್ರ ಪ್ರದೇಶಕ್ಕೆ ತೆರಳಿದರು. ಹೀಗಾಗಿ, ರಾಜಮೌಳಿಗೆ ರಾಯಚೂರು ಜಿಲ್ಲೆಯ ಬಗ್ಗೆ ವಿಶೇಷ ಗೌರವ ಇದೆ.
Advertisement
ಪ್ರತಿಯೊಬ್ಬರೂ ಮತನದಾನ ಮಾಡಬೇಕು ಎಂದು ಸರ್ಕಾರ ಜಾಗೃತಿ ಮೂಡಿಸುತ್ತದೆ. ಆಯಾ ಜಿಲ್ಲೆಯ ರಾಯಭಾರಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತದೆ. ಇದಕ್ಕಾಗಿ ಏರ್ಪಡಿಸುವ ವಿವಿಧ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ರಾಜಮೌಳಿ ಭಾಗಿಯಾಗಲಿದ್ದಾರೆ.