ಸುಧೀರ್‌ ಬಾಬು ನಟನೆಯ ‘ಹರೋಮ್‌ ಹರ’ ಸಿನಿಮಾಗೆ ಕಿಚ್ಚ ಸಾಥ್

Public TV
1 Min Read
sudeep 1 6

ತೆಲುಗಿನ ಯುವ ನಟ ಸುಧೀರ್ ಬಾಬು (Sudhir Babu) ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಹರೋಮ್ ಹರ. ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟೀಸರ್ ನಾಳೆ ಪಂಚ ಭಾಷೆಯಲ್ಲಿ ಅನಾವರಣಗೊಂಡಿದೆ.‌ ಇದನ್ನೂ ಓದಿ:ರಶ್ಮಿಕಾ ಬಳಿಕ ಆಲಿಯಾ ಡೀಪ್‌ಫೇಕ್ ವಿಡಿಯೋ ವೈರಲ್

sudhir babuತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ‘ಹರೋಮ್ ಹರ’ ಟೀಸರ್ ಬಿಡುಗಡೆಗೆಯಾಗಿದ್ದು, ಈ ಐದು ಭಾಷೆಯ ಸೂಪರ್ ಸ್ಟಾರ್ಸ್ ಟೀಸರ್ ರಿಲೀಸ್ ಮಾಡಿದ್ದಾರೆ. ತೆಲುಗಿನಲ್ಲಿ ಪ್ರಭಾಸ್ (Prabhas), ಕನ್ನಡದಲ್ಲಿ ಸುದೀಪ್, ಮಲಯಾಳಂನಲ್ಲಿ ಮಮ್ಮುಟ್ಟಿ, ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ಹಿಂದೆ ಭಾಷೆಯಲ್ಲಿ ಟೈಗರ್ ಶ್ರಾಫ್ ಸುಧೀರ್ ಬಾಬು ಸಿನಿಮಾದ ಝಲಕ್ ರಿವೀಲ್ ಮಾಡಿದ್ದಾರೆ. ‘ಹರೋಮ್ ಹರ’ ಸಿನಿಮಾದ ಕನ್ನಡ ಟೀಸರ್ ರಿಲೀಸ್ ಮಾಡಿದ ಸುದೀಪ್.

sudeep 1 4

ಸುಧೀರ್ ಬಾಬು (Sudhir Babu) ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಮಾಳವಿಕ ಶರ್ಮಾ ಸಾಥ್ ಕೊಟ್ಟಿದ್ದಾರೆ. ಪ್ರಮುಖ ಪಾತ್ರದಲ್ಲಿ ಸುನಿಲ್, ವಿಲನ್ ಆಗಿ ಕನ್ನಡದ ನಟ ಅರ್ಜುನ್ ಗೌಡ (Arjun Gowda) ತೊಡೆತಟ್ಟಿದ್ದಾರೆ. ಜೆ.ಪಿ.ಅಕ್ಷರಗೌಡ, ಲಕ್ಕಿ ಲಕ್ಷ್ಮಣ್, ರವಿಕಾಳೆ ತಾರಾಬಳಗದಲ್ಲಿದ್ದಾರೆ. ಹರೋಮ್ ಹರ, ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕೊನೆ ಹಂತದ ಶೂಟಿಂಗ್ ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. 1989ರಲ್ಲಿ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ನಡೆದ ಘಟನೆಯ ಸುತ್ತ ಕಥೆ ಸಾಗುತ್ತದೆ.

ಜ್ಞಾನಸಾಗರ ದ್ವಾರಕಾ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಬಹಳ ಅದ್ಧೂರಿಯಾಗಿ ಸುಮಂತ್ ಜಿ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಚೈತಮ್ ಭಾರದ್ವಾಜ್ ಅವರ ಸಂಗೀತವಿದೆ ಮತ್ತು ಅರವಿಂದ್ ವಿಶ್ವನಾಥನ್ ಅವರ ಛಾಯಾಗ್ರಹಣವಿದೆ. ಶ್ರೀ ಸುಬ್ರಹ್ಮಣ್ಯೇಶ್ವರ ಸಿಮಿಮಾಸ್ ಬ್ಯಾನರ್ ನಡಿ `ಹರೋಮ್ ಹರಾ’ ಸಿನಿಮಾ ತಯಾರಾಗುತ್ತಿದೆ.

Share This Article